‘ಕಾಫಿ ವಿತ್ ಕರಣ್’ ಕೊನೆ ಸೀಸನ್ನಿಗೆ ಬರುವ ಅತಿಥಿಗಳ ಪಟ್ಟಿ ದೊಡ್ಡದಿದೆ
ಬಾಲಿವುಡ್ ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ ಅವರೊಟ್ಟಿಗೆ ಹಲವು ವಿಷಯಗಳನ್ನು ಕರಣ್ ಚರ್ಚೆ ಮಾಡುತ್ತಿದ್ದರು. ಶೋ ಭಾರಿ ಜನಪ್ರಿಯತೆ ಗಳಿಸಿತು. ಸಾಕಷ್ಟು ವಿವಾದಗಳಿಗೂ ಸಹ ಕಾರಣವಾಯ್ತು. ಈ ಶೋ ಇಂದಾಗಿ ಹಲವು ಜೋಡಿಗಳು ಬೇರ್ಪಟ್ಟರೆ, ಕೆಲವರು ಒಂದಾದರು. ಈ ವರೆಗೆ ‘ಕಾಫಿ ವಿತ್ ಕರಣ್’ನ ಎಂಟು ಸೀಸನ್ ಪ್ರಸಾರವಾಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿದೆ.

ಮುಖ್ಯಾಂಶಗಳು
- ಕಾಫಿ ವಿತ್ ಕರಣ್ಗೆ ಈ ಬಾರಿ ಹಲವು ಅತಿಥಿಗಳು
- ಯುವ ನಟರ ಜೊತೆಗೆ ಹಿರಿಯ ನಟ-ನಟಿಯರೂ ಸಹ
- ಇಲ್ಲಿದೆ ನೋಡಿ ಅತಿಥಿಗಳ ಪಟ್ಟಿ
ಬಾಲಿವುಡ್ನ ಸ್ಟಾರ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ 22 ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಭಾರತದ ಮೊದಲ ಸೆಲೆಬ್ರಿಟಿ ಟಾಕ್ ಶೋ ‘ಕಾಫಿ ವಿತ್ ಕರಣ್’. ಬಾಲಿವುಡ್ ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ ಅವರೊಟ್ಟಿಗೆ ಹಲವು ವಿಷಯಗಳನ್ನು ಕರಣ್ ಚರ್ಚೆ ಮಾಡುತ್ತಿದ್ದರು. ಶೋ ಭಾರಿ ಜನಪ್ರಿಯತೆ ಗಳಿಸಿತು. ಸಾಕಷ್ಟು ವಿವಾದಗಳಿಗೂ ಸಹ ಕಾರಣವಾಯ್ತು. ಈ ಶೋ ಇಂದಾಗಿ ಹಲವು ಜೋಡಿಗಳು ಬೇರ್ಪಟ್ಟರೆ, ಕೆಲವರು ಒಂದಾದರು. ಈ ವರೆಗೆ ‘ಕಾಫಿ ವಿತ್ ಕರಣ್’ನ ಎಂಟು ಸೀಸನ್ ಪ್ರಸಾರವಾಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿದೆ.
‘ಕಾಫಿ ವಿತ್ ಕರಣ್’ ಶೋನ ಕೊನೆಯ ಸೀಸನ್ನಲ್ಲಿ ಹಲವಾರು ಅತಿಥಿಗಳನ್ನು ಕರಣ್ ಶೋಗೆ ಆಹ್ವಾನಿಸಿದ್ದು, ಈ ಬಾರಿ ಅತಿಥಿಗಳ ಪಟ್ಟಿ ತುಸು ದೊಡ್ಡದಾಗಿಯೇ ಇದೆ. ಈ ಬಾರಿ ವಿಶೇಷವಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಸೀಸನ್ನಿನ ಮೊದಲ ಎಪಿಸೋಡಿನಲ್ಲಿ ಇವರೇ ಅತಿಥಿಗಳಾಗಿರಲಿದ್ದು, ಇವರ ಎಪಿಸೋಡಿನ ಶೂಟಿಂಗ್ ಸಹ ಮುಗಿದಿದೆ ಎನ್ನಲಾಗುತ್ತಿದೆ.
ಇವರ ಹೊರತಾಗಿ ಬಾಲಿವುಡ್ನ ಹಲವಾರು ಸ್ಟಾರ್ ನಟ-ನಟಿಯರು ಈ ಬಾರಿ ‘ಕಾಫಿ ವಿತ್ ಕರಣ್’ನಲ್ಲಿ ಭಾಗಿ ಆಗಲಿದ್ದಾರೆ. ಕಳೆದ ಸೀಸನ್ನಿನಲ್ಲಿ ಭಾಗಿ ಆಗಿದ್ದ ಜಾನ್ಹವಿ ಕಪೂರ್, ಅನನ್ಯಾ ಅವರುಗಳು ಈ ಬಾರಿಯೂ ಅತಿಥಿಗಳಾಗಿ ಬರಲಿದ್ದಾರೆ. ಈ ಬಾರಿ ಆಲಿಯಾ ಭಟ್ ಅವರು ನಟಿ ಶರ್ವರಿ ವಾಘ್ ಜೊತೆಗೆ ಸೇರಿಕೊಂಡು ಅತಿಥಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಾನ್ಹವಿ ಕಪೂರ್, ವರುಣ್ ಧವನ್ ಜೊತೆಗೆ ಶೋಗೆ ಬರಲಿದ್ದಾರೆ. ಇವರ ಜೊತೆಗೆ ಸೈಫ್ ಅಲಿ ಖಾನ್, ಮತ್ತೊಬ್ಬ ಬಾಲಿವುಡ್ ನಟಿ ಆಲಿಯಾ ಎಫ್, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರುಗಳು ಸಹ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ:ಬಾಯ್ಫ್ರೆಂಡ್ ಜೊತೆ ಕರಣ್ ಜೋಹರ್ ಶೋಗೆ ಬರಲಿರುವ ಜಾನ್ಹವಿ ಕಪೂರ್
ಸಿನಿಮಾ ತಾರೆಯರ ಜೊತೆಗೆ ಸಾಮಾಜಿಕ ಜಾಲತಾಣದ ತಾರೆಯರಾದ ಓರಿ, ಸಮಯ್ ರೈನಾ, ಪ್ರಾಜಕ್ತಾ ಕೋಲಿ, ಭುವನ್ ಭಮ್ ಇನ್ನೂ ಹಲವರು ಈ ಬಾರಿ ಭಾಗವಹಿಸುವ ಸಾಧ್ಯತೆ ಇದೆ. ಇವರುಗಳ ಜೊತೆಗೆ ಕೆಲವು ದೊಡ್ಡ ತಾರೆಯರು ಸಹ ಅತಿಥಿಗಳಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ‘ಕಾಫಿ ವಿತ್ ಕರಣ್’ ಮೊದಲ ಸೀಸನ್ನಿಗೆ ಅತಿಥಿಯಾಗಿ ಬಂದಿದ್ದ ಶಾರುಖ್ ಖಾನ್ ಅವರು ಕೊನೆಯ ಸೀಸನ್ನಿಗೂ ಅತಿಥಿ ಆಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ಯುವ ನಟ-ನಟಿಯರ ಜೊತೆಗೆ ಕೆಲವು ಹಿರಿಯ ನಟ-ನಟಿಯರು ಸಹ ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ‘ಕಾಫಿ ವಿತ್ ಕರಣ್’ ಶೋನ ಒಂಬತ್ತನೇ ಮತ್ತು ಕೊನೆಯ ಸೀಸನ್ ಅಕ್ಟೋಬರ್ 14 ರಿಂದ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




