‘ಕಾಡುಗಳ್ಳ ವೀರಪ್ಪನ್’ ಕುರಿತು ಹೊಸ ಸೀರಿಸ್; ಜೀ5ನಲ್ಲಿ ಆರಂಭವಾಗಲಿದೆ ಪ್ರಸಾರ

Koose Munisamy Veerappan: ತಮಿಳಿನಲ್ಲಿ ಸಿದ್ಧವಾಗಿರುವ ‘ಕೂಸೆ ಮುನಿಸ್ವಾಮಿ ವೀರಪ್ಪನ್’ ಸೀರಿಸ್ ಹಿಂದಿ, ಕನ್ನಡ, ಹಾಗೂ ತಮಿಳು ಭಾಷೆಯಲ್ಲಿ ಲಭ್ಯವಿದೆ. 2004ರಲ್ಲಿ ವೀರಪ್ಪನ್ ಅವರನ್ನು ಹತ್ಯೆ ಮಾಡಲಾಯಿತು. ಸ್ಪೆಷಲ್ ಟಾಸ್ಕ್ ಫೋರ್ಸ್​ ವೀರಪ್ಪನ್​ನ ಹತ್ಯೆ ಮಾಡಿತು. ಈ ಕಥೆಯನ್ನು ಈ ಡಾಕ್ಯೂ ಸೀರಿಸ್ ಹೇಳಲಿದೆ.

‘ಕಾಡುಗಳ್ಳ ವೀರಪ್ಪನ್’ ಕುರಿತು ಹೊಸ ಸೀರಿಸ್; ಜೀ5ನಲ್ಲಿ ಆರಂಭವಾಗಲಿದೆ ಪ್ರಸಾರ
ವೀರಪ್ಪನ್
Follow us
ರಾಜೇಶ್ ದುಗ್ಗುಮನೆ
|

Updated on:Nov 28, 2023 | 11:27 AM

ಕಾಡುಗಳ್ಳ ವೀರಪ್ಪನ್ (Veerappan) ಅವರು ಮಾಡಿರುವ ಅಪರಾಧ ಒಂದೆರಡಲ್ಲ. ಅವರು ಕಾಡನ್ನು ದೋಚಿದ್ದಾರೆ. ಅರಣ್ಯದಲ್ಲಿರುವ ಪ್ರಾಣಿಗಳನ್ನು ಬೇಟೆ ಆಡಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಅವರ ಕುರಿತು ಹಲವು ಸಿನಿಮಾ ಹಾಗೂ ವೆಬ್ ಸೀರಿಸ್​ಗಳು ಬಂದಿವೆ. ‘ಕೂಸೆ ಮುನಿಸ್ವಾಮಿ ವೀರಪ್ಪನ್’ ಹೆಸರಿನ ಡಾಕ್ಯೂ ಸೀರಿಸ್ ಸಿದ್ಧವಾಗಿದೆ. ಜೀ5 ಮೂಲಕ ಈ ಸೀರಿಸ್ ಡಿಸೆಂಬರ್ 8ರಂದು ಪ್ರಸಾರ ಆಗುತ್ತಿದೆ.  ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆದಿದೆ.

ತಮಿಳಿನಲ್ಲಿ ಈ ಡಾಕ್ಯೂ ಸೀರಿಸ್ ಸಿದ್ಧವಾಗಿದೆ. ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಈ ಸೀರಿಸ್  ಲಭ್ಯವಿದೆ. ವೀರಪ್ಪನ್ ಅವರು ಮಾಡಿದ ಕ್ರೈಮ್​ಗಳ ಬಗ್ಗೆ ಈ ಸೀರಿಸ್​ನಲ್ಲಿ ಮಾಹಿತಿ ನೀಡಲಾಗುತ್ತಿದೆ. ಅವರು ಮಾಡಿರು ಕ್ರಿಮಿನಲ್ ಕೆಲಸ​ಗಳ ಬಗ್ಗೆ ಜನರ ಎದುರು ತೆರೆದಿಡುವ ಕೆಲಸ ಆಗಲಿದೆ. ಪ್ರಭಾವತಿ ಅವರು ಈ ಡಾಕ್ಯು ಸೀರಿಸ್​ನ ನಿರ್ಮಾಣ ಮಾಡಿದ್ದಾರೆ. ಇದು ಭಾರತೀಯ ಆಡಿಯನ್ಸ್​ಗೆ ಇಷ್ಟ ಆಗಬಹುದು ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ನಾವು ಧೀರನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಸ್ಥಾಪಿಸಿದೆವು. ಸ್ಥಳೀಯ ಕಥೆಗಳನ್ನು ಜಗತ್ತಿಗೆ ತೋರಿಸುವುದು ನಮ್ಮ ಉದ್ದೇಶ’ ಎಂದಿದ್ದಾರೆ ಪ್ರಭಾವತಿ. ಈಗಾಗಲೇ ರಿಲೀಸ್ ಆಗಿರುವ ವೀರಪ್ಪನ್ ಸಿನಿಮಾ ಹಾಗೂ ಸೀರಿಸ್​ಗಳಿಗಿಂತ ಇದು ಹೇಗೆ ಭಿನ್ನವಾಗಿ ಇರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ‘ಕೂಸೆ ಮುನಿಸ್ವಾಮಿ ವೀರಪ್ಪನ್ ಕೇವಲ ಡಾಕ್ಯು ಸೀರಿಸ್ ಅಲ್ಲ. ಇದರಲ್ಲಿ ಹಲವು ವಿಚಾರ ಇದೆ. ವೀರಪ್ಪನ್ ಬಗ್ಗೆ ಜನರಿಗೆ ತಿಳಿಯದೇ ಇರುವ ವಿಚಾರವನ್ನು ಹೇಳಲಾಗುತ್ತಿದೆ.

ಇದನ್ನೂ ಓದಿ: ವೀರಪ್ಪನ್ ‘ಮೋಸ್ಟ್ ವಾಂಟೆಡ್’ ಎನಿಸಿಕೊಳ್ಳಲು ಕಾರಣ ಒಂದೆರಡಲ್ಲ; ಇಲ್ಲಿದೆ ರಕ್ತಚರಿತ ಇತಿಹಾಸ  

2004ರಲ್ಲಿ ವೀರಪ್ಪನ್ ಅವರನ್ನು ಹತ್ಯೆ ಮಾಡಲಾಯಿತು. ಸ್ಪೆಷಲ್ ಟಾಸ್ಕ್ ಫೋರ್ಸ್​ ವೀರಪ್ಪನ್​ನ ಹತ್ಯೆ ಮಾಡಿತು. ಈ ಮೂಲಕ ಕುಖ್ಯಾತ ಕ್ರಿಮಿನಿಲ್​ನ ಕಥೆ ಮುಗಿಸಲಾಯಿತು. ಈಗ ವೀರಪ್ಪನ್ ಅವರ ಕುರಿತು ಡಾಕ್ಯೂ ಸೀರಿಸ್ ಸಿದ್ಧವಾಗುತ್ತಿದೆ. ಸದ್ಯ ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಹೀಗಾಗಿ, ಹಲವು ರೀತಿಯ ಕಂಟೆಂಟ್​ಗಳು ಸಿದ್ಧಗೊಳ್ಳುತ್ತಿವೆ. ಕೊವಿಡ್ ಬಳಿಕ ಒಟಿಟಿ ವ್ಯಾಪ್ತಿ ಮತ್ತಷ್ಟು ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Tue, 28 November 23