AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಹಾರರ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಎಂಟ್ರಿ; ಆದರೆ ದೊಡ್ಡ ಟ್ವಿಸ್ಟ್

ಭಾರತದಲ್ಲಿ ‘ಅಬ್ಸೆಷನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಭಾರಿ ಕತ್ತರಿ ಹಾಕಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈಗ ಒಟಿಟಿಯಲ್ಲಿ ಚಿತ್ರದ ಅನ್​ಕಟ್ ವರ್ಷನ್ ನೋಡಲು ಪ್ರೇಕ್ಷಕರು ಬಯಸಿದ್ದಾರೆ. ಒಟಿಟಿಯಲ್ಲಿ ‘ಅಬ್ಸೆಷನ್’ ಸಿನಿಮಾ ಲಭ್ಯವಾಗಿದೆ. ಆದರೆ ಉಚಿತವಾಗಿ ನೋಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಸೂಪರ್ ಹಿಟ್ ಹಾರರ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಎಂಟ್ರಿ; ಆದರೆ ದೊಡ್ಡ ಟ್ವಿಸ್ಟ್
Inde NavarretteImage Credit source: Instagram/obsessionthemovie
ಮದನ್​ ಕುಮಾರ್​
|

Updated on: Jul 02, 2026 | 3:05 PM

Share

ಮುಖ್ಯಾಂಶಗಳು

  • ಒಟಿಟಿಗೆ ಬಂದಿದೆ ಬ್ಲಾಕ್ ಬಸ್ಟರ್ ಹಾರರ್ ಚಿತ್ರ ‘ಅಬ್ಸೆಷನ್’.
  • ಚಂದಾದಾರರಾಗಿದ್ದರೂ ಉಚಿತವಾಗಿ ನೋಡಲು ಆಗುವುದಿಲ್ಲ.
  • ಭಾರತದ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಹಾಲಿವುಡ್ ಸಿನಿಮಾ.

ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 300 ಮಿಲಿಯನ್‌ ಡಾಲರ್​ಗೂ ಹೆಚ್ಚು ಹಣ ಬಾಚಿಕೊಂಡ ‘ಅಬ್ಸೆಷನ್’ (Obsession) ಸಿನಿಮಾ ಕೊನೆಗೂ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಟ್ಟಿದೆ. ಯೂಟ್ಯೂಬರ್ ಕರಿ ಬಾರ್ಕರ್ ನಿರ್ದೇಶನದ ಈ ಜಾಗತಿಕ ಸೆನ್ಸೇಷನಲ್ ಸಿನಿಮಾ ಡಿಜಿಟಲ್ ಲೋಕಕ್ಕೆ ಪ್ರವೇಶ ಪಡೆದಿದೆಯಾದರೂ, ವೀಕ್ಷಕರಿಗೆ ಇಲ್ಲೊಂದು ಸಣ್ಣ ನಿರಾಸೆಯ ಸುದ್ದಿಯಿದೆ. ಯಾಕೆಂದರೆ, ಇದನ್ನು ಹಣ ಕೊಟ್ಟು ವೀಕ್ಷಿಸಬೇಕು.

ಈ ವರ್ಷದ ಅತಿ ದೊಡ್ಡ ಹಾರರ್ ಸರ್ಪ್ರೈಸ್ ಎನಿಸಿಕೊಂಡಿರುವ ‘ಅಬ್ಸೆಷನ್’ ಸಿನಿಮಾ ಈಗ ‘ಅಮೆಜಾನ್ ಪ್ರೈಮ್ ವಿಡಿಯೋ’ ಮತ್ತು ‘ಆಪಲ್ ಟಿವಿ’ ಮುಂತಾದ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆದರೆ, ಚಂದಾದಾರರು ಇದನ್ನು ಉಚಿತವಾಗಿ ನೋಡಲು ಸದ್ಯಕ್ಕೆ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರವನ್ನು ಖರೀದಿಸಲು 24.99 ಡಾಲರ್ ಹಾಗೂ ಬಾಡಿಗೆಗೆ ಪಡೆಯಲು 19.99 ಡಾಲರ್ ನಿಗದಿಪಡಿಸಲಾಗಿದೆ. ಎಲ್ಲರಿಗೂ ಮುಕ್ತವಾಗಿ ಸಿಗುವ ಪೂರ್ಣ ಪ್ರಮಾಣದ ಒಟಿಟಿ ಸ್ಟ್ರೀಮಿಂಗ್ ದಿನಾಂಕವನ್ನು ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ವೀಕ್ಷಕರಿಗೆ ಸಿಗಲಿದೆ ಬೋನಸ್ ಕಂಟೆಂಟ್:

ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಆಪಲ್ ಟಿವಿ ಅಥವಾ ಪ್ರೈಮ್ ವಿಡಿಯೋದಲ್ಲಿ ಬಾಡಿಗೆ ಅಥವಾ ಹಣ ಪಾವತಿಸಿ ವೀಕ್ಷಿಸಬಹುದು. ಇದರೊಂದಿಗೆ ವೀಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಈ ಡಿಜಿಟಲ್ ಬಿಡುಗಡೆಯಲ್ಲಿ ಬಿಹೈಂಡ್ ದಿ ಸೀನ್ಸ್ ಮತ್ತು ನಿರ್ದೇಶಕ ಕರಿ ಬಾರ್ಕರ್ ಅವರ ವಿಶೇಷ ಕಾಮೆಂಟರಿ ಒಳಗೊಂಡ ಬೋನಸ್ ಕಂಟೆಂಟ್‌ಗಳನ್ನು ನೀಡಲಾಗುತ್ತಿದೆ. ಜುಲೈ 14ರಂದು ಇದರ ಡಿವಿಡಿ, ಬ್ಲೂ-ರೇ ಬಿಡುಗಡೆಯಾಗಲಿದ್ದು, ‘ಪೀಕಾಕ್’ ಒಟಿಟಿಯಲ್ಲೂ ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ.

ಕೇವಲ 700 ಸಾವಿರ ಡಾಲರ್ ಬಜೆಟ್:

ಮೇ 15ರಂದು ಫೋಕಸ್ ಫೀಚರ್ಸ್ ಮೂಲಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅನಿರೀಕ್ಷಿತ ಬಾಕ್ಸ್ ಆಫೀಸ್ ಯಶಸ್ಸಿನ ಕಥೆಯಾಗಿದೆ. ಕೇವಲ 700 ಸಾವಿರ ಡಾಲರ್ (ಸುಮಾರು 5-6 ಕೋಟಿ ರೂ.) ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಕೇವಲ ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದಾಗಿ ಭರ್ಜರಿ ಗಳಿಕೆ ಮಾಡಿತು. ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮಿಡ್‌ನೈಟ್ ಸೆಕ್ಷನ್‌ನಲ್ಲಿ ಪ್ರದರ್ಶನಗೊಂಡ ತಕ್ಷಣವೇ ಫೋಕಸ್ ಫೀಚರ್ಸ್ ಸಂಸ್ಥೆ ಇದನ್ನು 15 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಮೊತ್ತ ನೀಡಿ ಖರೀದಿಸಿತ್ತು. ಅಂತಿಮವಾಗಿ ಇದು ಜಾಗತಿಕವಾಗಿ 370 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ, ಫೋಕಸ್ ಫೀಚರ್ಸ್ ಸಂಸ್ಥೆಯ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದನ್ನೂ ಓದಿ: ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ

‘ಅಬ್ಸೆಷನ್’ ಚಿತ್ರದ ಕಥೆಯೇನು?

ಕೇವಲ 20 ವರ್ಷದ ಯೂಟ್ಯೂಬರ್ ಕರಿ ಬಾರ್ಕರ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೈಕೆಲ್ ಜಾನ್ಸ್ಟನ್ (ಬೇರ್ ಪಾತ್ರದಲ್ಲಿ) ನಟಿಸಿದ್ದಾರೆ. ತನ್ನನ್ನು ತನ್ನ ಕ್ರಶ್ ಪ್ರೀತಿಸುವಂತೆ ಮಾಡಲು ‘ಒನ್ ವಿಶ್ ವಿಲೋ’ ಎಂಬ ನಿಗೂಢ ವಸ್ತುವನ್ನು ಬಳಸುವ ಹತಾಶ ಪ್ರೇಮಿಯ ಕಥೆ ಇದಾಗಿದೆ. ಆದರೆ, ಆತನ ಆಸೆ ಈಡೇರಿದ ನಂತರ ಪರಿಸ್ಥಿತಿ ಅತ್ಯಂತ ಭಯಾನಕ ತಿರುವು ಪಡೆದುಕೊಳ್ಳುತ್ತದೆ. ನಿಕ್ಕಿ (ಇಂಡಿ ನವರೇಟೆ) ಆತನಿಗೆ ಅಪಾಯಕಾರಿ ಹಾಗೂ ಗೀಳಿನ ರೀತಿಯಲ್ಲಿ ಅಂಟಿಕೊಳ್ಳುತ್ತಾಳೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us