‘ಪುಷ್ಪ 2’ ಚಿತ್ರದ ಸೆಟ್ ವಿಡಿಯೋ ಲೀಕ್; ಟ್ರಕ್ಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ
ನೂರಾರು ಸಂಖ್ಯೆಯಲ್ಲಿ ಟ್ರಕ್ಗಳು ನಿಂತಿರು ವಿಡಿಯೋ ವೈರಲ್ ಆಗಿದೆ. ಇದು ‘ಪುಷ್ಪ 2’ ಚಿತ್ರದ ಸೆಟ್ನ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿನಿಮಾ ಯಾವ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆ ಸಿಕ್ಕಿದೆ. ಇನ್ನು, ಸಿನಿಮಾ ಸೆಟ್ನ ವಿಡಿಯೋ ಲೀಕ್ ಆದ ವಿಚಾರ ಚಿತ್ರತಂಡದ ಆತಂಕಕ್ಕೆ ಕಾರಣ ಆಗಿದೆ.
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ ಸಿನಿಮಾ (Pushpa 2 Movie) ಬಗ್ಗೆ ಇರುವ ನಿರೀಕ್ಷೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಮೊದಲ ಭಾಗ ಹಿಟ್ ಆಗಿರುವುದರಿಂದ ಎರಡನೇ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸದ್ಯ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಚಿತ್ರದ ಸೆಟ್ನ ವಿಡಿಯೋ ಒಂದು ಲೀಕ್ ಆಗಿದೆ. ಸಿನಿಮಾ ಸೆಟ್ನಲ್ಲಿ ನಿಂತ ಟ್ರಕ್ಗಳ ಸಂಖ್ಯೆ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಕಣ್ಣು ಹಾಯಿಸಿದಷ್ಟು ಟ್ರಕ್ಗಳೇ ಕಾಣಿಸುತ್ತಿವೆ ಅನ್ನೋದು ವಿಶೇಷ. ‘ಪುಷ್ಪ’ ಚಿತ್ರ (Pushpa Movie) ಹಿಟ್ ಆಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಸಾಮಾನ್ಯ ವ್ಯಕ್ತಿ ಆಗಿರುವ ಪುಷ್ಪರಾಜ್ ರಕ್ತ ಚಂದನದ ದಂಧೆಯಲ್ಲಿ ಸೇರಿಕೊಳ್ಳುತ್ತಾನೆ. ಆ ಬಳಿಕ ಆತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಎರಡನೇ ಭಾಗದಲ್ಲಿ ಇದೇ ಕಥೆ ಹೈಲೈಟ್ ಆಗಲಿದೆ. ಇದರ ಜೊತೆ ರಕ್ತ ಚಂದನದ ಕಳ್ಳ ಸಾಗಣೆ ಕಥೆ ಮತ್ತಷ್ಟು ಹೈಲೈಟ್ ಆಗಲಿದೆ. ಸಿನಿಮಾದಲ್ಲಿ ಬಳಕೆ ಆಗುತ್ತಿರುವ ಟ್ರಕ್ಗಳೇ ಇದಕ್ಕೆ ಸಾಕ್ಷಿ.
ಟ್ರಕ್ಗಳಲ್ಲಿ ರಕ್ತಚಂದನ ಸಾಗಿಸುವ ರೀತಿಯ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಇದು ‘ಪುಷ್ಪ 2’ ಚಿತ್ರದ ಶೂಟಿಂಗ್ ದೃಶ್ಯ ಎನ್ನಲಾಗಿತ್ತು. ಈಗ ನೂರಾರು ಸಂಖ್ಯೆಯಲ್ಲಿ ಟ್ರಕ್ಗಳು ನಿಂತಿರು ವಿಡಿಯೋ ವೈರಲ್ ಆಗಿದೆ. ಇದು ‘ಪುಷ್ಪ 2’ ಚಿತ್ರದ ಸೆಟ್ನ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿನಿಮಾ ಯಾವ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆ ಸಿಕ್ಕಿದೆ. ಇನ್ನು, ಸಿನಿಮಾ ಸೆಟ್ನ ವಿಡಿಯೋ ಲೀಕ್ ಆದ ವಿಚಾರ ಚಿತ್ರತಂಡದ ಆತಂಕಕ್ಕೆ ಕಾರಣ ಆಗಿದೆ. ಈ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲು ತಂಡ ನಿರ್ಧರಿಸಿದೆ.
ಸಿನಿಮಾ ಸೆಟ್ನ ವಿಡಿಯೋ ಲೀಕ್:
#Pushpa2TheRule Omg… What’s going on at #Pushpa2TheRule Shooting.
This seems Huge 😱#Sukumar 🙏#AlluArjun #AlluArjun𓃵 #PushpaTheRule #Pushpa2TheRule #Pushpa2 #Pushpa pic.twitter.com/DkchjVVdHI
— Allu Arjun fan ikkadaa (@AAFanIkkadaa) September 7, 2023
‘ಪುಷ್ಪ’ ಸಿನಿಮಾ ರಿಲೀಸ್ ಆಗಿದ್ದು 2021ರ ಡಿಸೆಂಬರ್ ತಿಂಗಳಲ್ಲಿ. ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆಯುತ್ತಾ ಬಂದರೂ ‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಅಪ್ಡೇಟ್ನ ತಂಡ ನೀಡಿಲ್ಲ. ಸಿನಿಮಾ ರಿಲೀಸ್ ದಿನಾಂಕ ಕೂಡ ಘೋಷಣೆ ಆಗಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಮಗೆ ಅಪ್ಡೇಟ್ ಬೇಕೆ ಬೇಕು ಎಂದು ಅಭಿಮಾನಿಗಳು ಹಠ ಹಿಡಿದು ಕೂತಿದ್ದಾರೆ. ಈಗ ‘ಪುಷ್ಪ 2’ ಚಿತ್ರದ ಲೀಕ್ ಆದ ವಿಡಿಯೋ ಅಭಿಮಾನಿಗಳಿಗೆ ಖುಷಿ ನೀಡಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಸಿದ್ಧವಾಗಲಿದೆ ಎಂಬುದು ಅಭಿಮಾನಿಗಳಿಗೆ ಪಕ್ಕಾ ಆಗಿದೆ.
ಇದನ್ನೂ ಓದಿ: ಶೂಟಿಂಗ್ ಮುಗಿಯೋದಕ್ಕೂ ಮುನ್ನವೇ ದಾಖಲೆ ಬರೆದ ‘ಪುಷ್ಪ 2’; ಅಲ್ಲು ಅರ್ಜುನ್ ಸಿನಿಮಾದ ಸಾಧನೆ ಏನು?
‘ಪುಷ್ಪ 2’ ಚಿತ್ರದ ಪಾತ್ರವರ್ಗ ಹಿರಿದಾಗುತ್ತಿದೆ. ಹೊಸ ಕಲಾವಿದರು ಚಿತ್ರಕ್ಕೆ ಸೇರ್ಪಡೆ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ. ಸದ್ಯ ದಕ್ಷಿಣ ಹಾಗೂ ಬಾಲಿವುಡ್ ಸಿನಿಮಾಗಳು ಸದ್ದು ಮಾಡುತ್ತಿವೆ. ‘ಜೈಲರ್’ ಚಿತ್ರ 750 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ‘ಗದರ್ 2’ ಚಿತ್ರ 500+ ಕೋಟಿ ಬಾಚಿಕೊಂಡಿದೆ. ‘ಜವಾನ್’ ಕೂಡ ಉತ್ತಮ ಗಳಿಕೆ ಮಾಡುವ ಸೂಚನೆ ನೀಡಿದೆ. ಅದೇ ರೀತಿ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿದ್ದರೆ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.