ಕಮ್ಮಿ ಆಗಿಲ್ಲ ರಜನಿ ಹವಾ, ಇಲ್ಲಿದೆ ‘ಜೈಲರ್ 2’ ಮೊದಲ ದಿನದ ಕಲೆಕ್ಷನ್ ರಿಪೋರ್ಟ್
‘ಜೈಲರ್ 2’ ಸಿನಿಮಾ ಮೊದಲ ದಿನ 120 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಮುಂಗಡ ಬುಕಿಂಗ್ ಬಲು ಜೋರಾಗಿತ್ತು. ಆಗಲೇ ಸಿನಿಮಾದ ಒಳ್ಳೆಯ ಗಳಿಕೆಯನ್ನು ಅಂದಾಜು ಮಾಡಲಾಗಿತ್ತು. ಅದರಂತೆ ಈ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ 120 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿದೆ. ಆ ಮೂಲಕ ವಾರಾಂತ್ಯದ ವೇಳೆಗೆ ಈ ಸಿನಿಮಾ 300 ಕೋಟಿ ಗಳಿಕೆ ದಾಟುವ ನಿರೀಕ್ಷೆಯನ್ನು ಮೂಡಿಸಿದೆ.

ಮುಖ್ಯಾಂಶಗಳು
- ರಜನೀಕಾಂತ್ ನಟನೆಯ ‘ಜೈಲರ್ 2’ ರಿಲೀಸ್
- ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ಸಿನಿಮಾ
- ಜೈಲರ್ 2 ಸಿನಿಮಾ ಗಳಿಕೆ ಮಾಡಿರುವುದೆಷ್ಟು?
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ನಿನ್ನೆಯಷ್ಟೆ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್ಲಾಲ್, ಹೃತಿಕ್ ರೋಷನ್ ಸೇರಿದಂತೆ ಇನ್ನೂ ಹಲವಾರು ಸ್ಟಾರ್ ನಟ, ನಟಿಯರು ನಟನೆ ಮಾಡಿದ್ದಾರೆ. ರಜನೀಕಾಂತ್ ಅವರು ನಿವೃತ್ತ ಜೈಲಧಿಕಾರಿ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ವಯಸ್ಸಾದರೂ ಸಹ ರಜನೀಕಾಂತ್ ಅವರ ಖದರ್ ಕಡಿಮೆ ಆಗಿಲ್ಲ. ನಿನ್ನೆ ಬಿಡುಗಡೆ ಆದ ಈ ಸಿನಿಮಾ ಬಹುತೇಕ ಹೌಸ್ಫುಲ್ ಪ್ರದರ್ಶನ ತೋರಿದ್ದು, ಮೊದಲ ದಿನ ಭರ್ಜರಿ ಗಳಿಕೆಯನ್ನು ವಿಶ್ವದಾದ್ಯಂತ ಮಾಡಿದೆ. ಇಲ್ಲಿದೆ, ಸಿನಿಮಾದ ಕಲೆಕ್ಷನ್ ವರದಿ…
ವರದಿಗಳ ಪ್ರಕಾರ, ‘ಜೈಲರ್ 2’ ಸಿನಿಮಾ ಮೊದಲ ದಿನ 120 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಮುಂಗಡ ಬುಕಿಂಗ್ ಬಲು ಜೋರಾಗಿತ್ತು. ಆಗಲೇ ಸಿನಿಮಾದ ಒಳ್ಳೆಯ ಗಳಿಕೆಯನ್ನು ಅಂದಾಜು ಮಾಡಲಾಗಿತ್ತು. ಅದರಂತೆ ಈ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ 120 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿದೆ. ಆ ಮೂಲಕ ವಾರಾಂತ್ಯದ ವೇಳೆಗೆ ಈ ಸಿನಿಮಾ 300 ಕೋಟಿ ಗಳಿಕೆ ದಾಟುವ ನಿರೀಕ್ಷೆಯನ್ನು ಮೂಡಿಸಿದೆ.
‘ಜೈಲರ್ 2’ ಸಿನಿಮಾವು ಭಾರತದಲ್ಲಿ ಮೊದಲ ದಿನ ಸುಮಾರು 59.70 ಕೋಟಿ ನೆಟ್ ಹಾಗೂ 70.25 ಕೋಟಿ ಗ್ರಾಸ್ ಗಳಿಕೆ ದಾಖಲಿಸಿದೆ. ಭಾಷಾವಾರು ಲೆಕ್ಕದಲ್ಲಿ ತಮಿಳು ಆವೃತ್ತಿ ಅತಿ ಹೆಚ್ಚು, ಅಂದರೆ ಸುಮಾರು 43.35 ಕೋಟಿ ರೂ. ಗಳಿಸಿದೆ. ತೆಲುಗು ಆವೃತ್ತಿ 12.50 ಕೋಟಿ ರೂ, ಹಿಂದಿ ಆವೃತ್ತಿ 3.50 ಕೋಟಿ ಹಾಗೂ ಕನ್ನಡ ಆವೃತ್ತಿ ಸುಮಾರು 35 ಲಕ್ಷ ಗಳಿಸಿದೆ ಎಂದು ವರದಿಗಳು ತಿಳಿಸಿವೆ. ರಾಜ್ಯವಾರು ಗ್ರಾಸ್ ಗಳಿಕೆಯಲ್ಲಿ ತಮಿಳುನಾಡು 24 ಕೋಟಿಯೊಂದಿಗೆ ಮುಂಚೂಣಿಯಲ್ಲಿದ್ದರೆ, ಆಂಧ್ರ–ತೆಲಂಗಾಣ ಹಾಗೂ ಕರ್ನಾಟಕ ತಲಾ 14.5 ಕೋಟಿ, ಕೇರಳ 12.5 ಕೋಟಿ ಮತ್ತು ಭಾರತದ ಉಳಿದ ಪ್ರದೇಶದಿಂದ 4.75 ಕೋಟಿ ಸಂಗ್ರಹವಾಗಿದೆ.
ಇದನ್ನೂ ಓದಿ:ರಜನೀಕಾಂತ್ ‘ಧರ್ಮನ್’ ಸಿನಿಮಾನಲ್ಲಿ ನಟಿ ಶ್ರೀಲೀಲಾ
‘ಜೈಲರ್ 2’ ಸಿನಿಮಾವು 2023ರಲ್ಲಿ ರಿಲೀಸ್ ಆಗಿದ್ದ ‘ಜೈಲರ್’ ಸಿನಿಮಾದ ಮುಂದುವರೆದ ಭಾಗವಾಗಿದೆ. ಸಿನಿಮಾನಲ್ಲಿ ನಿವೃತ್ತ ಜೈಲರ್ ಪಾತ್ರದಲ್ಲಿ ರಜನೀಕಾಂತ್ ನಟನೆ ಮಾಡಿದ್ದಾರೆ. ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಹೃತಿಕ್ ರೋಷನ್ ಇನ್ನೂ ಹಲವು ಸ್ಟಾರ್ ಕಲಾವಿದರು ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದು, ಸಿನಿಮಾ ಅನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




