AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕುಲ್​ ಪ್ರೀತ್​ಗೆ ರಾಜಕಾರಣಿ ಜೊತೆ ನಂಟು? ನಟಿಯ ಸ್ಪಷ್ಟನೆ

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು ತೆಲಂಗಾಣ ಮಾಜಿ ಸಚಿವ ಕೆಟಿಆರ್ ಅವರಿಂದ ಮನೆ ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅವರು ತಮ್ಮ ತಂದೆಯೇ ಮನೆ ಖರೀದಿಗೆ ಪೇಪರ್ ವರ್ಕ್ ಮಾಡಿದ್ದರು ಎಂದು ಹೇಳಿದ್ದಾರೆ. ಈ ವದಂತಿಯಿಂದ ತಮ್ಮ ಕುಟುಂಬ ಬಹಳ ಬೇಸರಗೊಂಡಿದೆ ಎಂದೂ ಹೇಳಿದ್ದಾರೆ.

ರಕುಲ್​ ಪ್ರೀತ್​ಗೆ ರಾಜಕಾರಣಿ ಜೊತೆ ನಂಟು? ನಟಿಯ ಸ್ಪಷ್ಟನೆ
ರಕುಲ್
ರಾಜೇಶ್ ದುಗ್ಗುಮನೆ
|

Updated on: Jun 03, 2025 | 3:10 PM

Share

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಾಲಿವುಡ್​ನಲ್ಲಿ ಸದ್ಯ ಬ್ಯುಸಿ ಇದ್ದಾರೆ. ಅವರು ದಕ್ಷಿಣದ ಹೀರೋಯಿನ್. ಅವರು ಮೊದಲ ಸಿನಿಮಾ ಮಾಡಿದ್ದು ಕನ್ನಡದಲ್ಲೇ. ಆದರೆ, ಈಗ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅವರ ಬಗ್ಗೆ ಒಂದು ದೊಡ್ಡ ವದಂತಿ ಹುಟ್ಟಿಕೊಂಡಿತ್ತು. ತೆಲಂಗಾಣ ಮಾಜಿ ಸಚಿವ ಕೆಟಿಆರ್ ಅವರು ರಕುಲ್​ಗೆ ಮನೆ ನೀಡಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ರಕುಲ್ ಅವರೇ ಪ್ರತಿಕ್ರಿಯಿಸಿದ್ದಾರೆ.

ಕೆಲವು ನಟಿಯರಿಗೆ ರಾಜಕೀಯ ನಾಯಕರ ಜೊತೆ ಒಳ್ಳೆಯ ಒಡನಾಟ ಇರುತ್ತದೆ. ಆದರೆ, ಕೆಲವು ಸಂದರ್ಭದಗಳಲ್ಲಿ ನಟಿಯರ ಕ್ಯಾರೆಕ್ಟರ್​ಗೆ ಹಾನಿ ಆಗುವಂಥ ವದಂತಿಗಳು ಹುಟ್ಟಿಕೊಳ್ಳುತ್ತವೆ. ರಕುಲ್ ಅವರಿಗೂ ಇದೇ ರೀತಿ ಆಗಿತ್ತು. ಅವರಿಗೆ ತೆಲಂಗಾಣದಲ್ಲಿ ಮನೆ ಕೊಟ್ಟಿದ್ದು ಓರ್ವ ರಾಜಕಾರಣಿ ಎಂದು ಹೇಳಲಾಗಿತ್ತು. ಇಷ್ಟು ದಿನ ಅವರು ಈ ವಿಚಾರದಲ್ಲಿ ಮೌನ ವಹಿಸಿದ್ದರು.  ಈಗ ಅವರು ರಾಜಕಾರಣಿ ಹೆಸರು ಹಾಗೂ ವದಂತಿ ಬಗ್ಗೆ ನೇರವಾಗಿ ಹೇಳದೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಉಡುಗೊರೆಯಾಗಿ ಸಿಕ್ಕ  ನನ್ನ ಮನೆಯ ಬಗ್ಗೆ ಒಂದು ವಿಚಿತ್ರ ಗಾಳಿ ಸುದ್ದಿ ಹರಿದಾಡಿತ್ತು. ನಿಜ ಹೇಳಬೇಕು ಎಂದರೆ ನನ್ನ ತಂದೆಯೇ ಇದರ ಪೇಪರ್ ಕೆಲಸ ಮಾಡಿದ್ದಾರೆ. ಕಷ್ಟಪಟ್ಟು ದುಡಿದ ಹಣದಿಂದ ಮನೆ ಪಡೆದು, ಈ ರೀತಿಯ ವದಂತಿ ಹುಟ್ಟಿಕೊಂಡಾಗ ನನ್ನ ತಂದೆ ಸಾಕಷ್ಟು ಬೇಸರಗೊಂಡರು. ನನಗೆ ಅವರು ಉತ್ತರಿಸುವಂತೆ ಹೇಳಿದರು. ಆದರೆ, ನಾನು ಎಲ್ಲ ಸಮಯದಲ್ಲೂ ಉತ್ತರ ಕೊಡುತ್ತಾ ಕೂರೋಕೆ ಆಗಲ್ಲ ಎಂದೆ’ ಎಂಬುದು ರಕುಲ್ ಉತ್ತರ ಆಗಿತ್ತು.

ಇದನ್ನೂ ಓದಿ
Image
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ
Image
‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
Image
ಒಟಿಟಿಯಲ್ಲಿ ರಿಲೀಸ್ ಆದ ಈ ಕಾಮಿಡಿ ಚಿತ್ರವನ್ನು ಮಿಸ್ ಮಾಡಲೇಬೇಡಿ
Image
ಹೈ-ಟೀ ಸಮಾರಂಭದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಂತ್ ನಾಗ್​

ಇದನ್ನೂ ಓದಿ: ಸೊಂಟ ನೋವು ಮಾಡಿಕೊಂಡ ರಕುಲ್ ಪ್ರೀತ್ ಸಿಂಗ್; ಪರಿಸ್ಥಿತಿ ಗಂಭೀರ: ಕಾರಣ ಏನು?

ರಕುಲ್ ಪ್ರೀತ್ ಸಿಂಗ್ ಮೊಟ್ಟ ಮೊದಲ ಬಾರಿಗೆ ನಟಿಸಿದ್ದು ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ. ಆ ಬಳಿಕ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಬ್ಯುಸಿ ಆದರು. ತೆಲುಗಿನಲ್ಲಿ ಸಾಕಷ್ಟು ಆಫರ್​ಗಳು ಬಂತು. ಈಗ ಅವರು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಗಾಗ ಅವರು ಟ್ರಿಪ್ ಮಾಡುತ್ತಾರೆ. ದೇಶ-ವಿದೇಶ ಸುತ್ತುತ್ತಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು  ‘ದೇ ದೇ ಪ್ಯಾರ್ ದೇ 2’ ಹಾಗೂ ‘ಇಂಡಿಯನ್ 3’ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ