RRR ಮೊದಲ ಹಾಡು ಬಿಡುಗಡೆಗೆ ದಿನಾಂಕ ಫಿಕ್ಸ್; ಆಗಸ್ಟ್ 1ರಂದು ‘ದೋಸ್ತಿ’ ಸಡಗರ
RRR Songs: ‘ಆರ್ಆರ್ಆರ್’ ಸಿನಿಮಾದ ‘ದೋಸ್ತಿ’ ಎಂಬ ಮೊದಲ ಹಾಡು ಬಿಡುಗಡೆ ಆಗುತ್ತಿದೆ. ಆ.1ರಂದು ಬೆಳಗ್ಗೆ 11 ಗಂಟೆಗೆ ಲಹರಿ ಮ್ಯೂಸಿಕ್ ಮೂಲಕ ಈ ಗೀತೆ ರಿಲೀಸ್ ಆಗಲಿದೆ.

ಬಹುನಿರೀಕ್ಷಿತ ಆರ್ಆರ್ಆರ್ (RRR) ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ರಾಜಮೌಳಿ (Rajamouli ) ನಿರ್ದೇಶನದ ಚಿತ್ರ ಎಂದರೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆ ಇರುತ್ತದೆ. ಅವರ ಜೊತೆಗೆ ಜ್ಯೂ. ಎನ್ಟಿಆರ್ (Jr NTR) ಮತ್ತು ರಾಮ್ ಚರಣ್ (Ram Charan)ಕೈ ಜೋಡಿಸಿರುವ ಕಾರಣ ಆರ್ಆರ್ಆರ್ ಸಿನಿಮಾದ ನಿರೀಕ್ಷೆಯ ಮಟ್ಟ ತುಸು ಹೆಚ್ಚಾಗಿಯೇ ಇದೆ. ಈಗ ಚಿತ್ರದ ಬಗ್ಗೆ ಇನ್ನಷ್ಟು ಹೈಪ್ ಸೃಷ್ಟಿಸಲು ಆಡಿಯೋ ಬಿಡುಗಡೆ ಆಗುತ್ತಿದೆ. ಮೊದಲ ಸಾಂಗ್ ರಿಲೀಸ್ ಮಾಡಲು ದಿನಾಂಕ ನಿಗದಿ ಆಗಿದೆ. ಆಗಸ್ಟ್ 1ರಂದು ‘ದೋಸ್ತಿ’ ಎಂಬ ಗೀತೆ ಬಿಡುಗಡೆ ಆಗಲಿದೆ.
‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾ ಮಾಡಿದ ತಂತ್ರಜ್ಞರೇ ಸೇರಿಕೊಂಡು ಆರ್ಆರ್ಆರ್ ಚಿತ್ರ ಮಾಡುತ್ತಿದ್ದಾರೆ. ಬಾಹುಬಲಿ ಚಿತ್ರಕ್ಕೆ ಸುಮಧುರ ಹಾಡುಗಳನ್ನು ನೀಡಿದ ಎಂಎಂ ಕೀರವಾಣಿ ಅವರೇ ಆರ್ಆರ್ಆರ್ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಈ ಸಿನಿಮಾದ ‘ದೋಸ್ತಿ’ ಎಂಬ ಮೊದಲ ಹಾಡು ಬಿಡುಗಡೆ ಆಗುತ್ತಿದೆ. ಆ.1ರಂದು ಬೆಳಗ್ಗೆ 11 ಗಂಟೆಗೆ ಲಹರಿ ಮ್ಯೂಸಿಕ್ ಮೂಲಕ ಈ ಗೀತೆ ರಿಲೀಸ್ ಆಗಲಿದೆ. ಹೆಸರೇ ಸೂಚಿಸುವಂತೆ ಈ ಹಾಡಿನಲ್ಲಿ ಗೆಳೆತನದ ಬಗ್ಗೆ ವಿವರಿಸಲಾಗುವುದು ಎಂಬ ನಿರೀಕ್ಷೆಯಲ್ಲಿ ಸಿನಿಪ್ರಿಯರು ಕಾಯುತ್ತಿದ್ದಾರೆ.
The First Song from #RRRMovie on August 1st, 11 AM.?#Dosti #Natpu #Priyam ??
An @mmkeeravaani Musical.?
?@itsvedhem @anirudhofficial @ItsAmitTrivedi @IAMVIJAYYESUDAS #YazinNizar@ssrajamouli @tarak9999 @AlwaysRamCharan @ajaydevgn @aliaa08 @DVVMovies @LahariMusic @TSeries pic.twitter.com/dyBaFxQPxt
— RRR Movie (@RRRMovie) July 27, 2021
ಕೆಲವೇ ದಿನಗಳ ಹಿಂದೆ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಆಡಿಯೋ ಪ್ರಸಾರ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿತ್ತು. ಈಗ ಆರ್ಆರ್ಆರ್ ಸಿನಿಮಾದ ಹಾಡುಗಳು ಕೂಡ ಇದೇ ಸಂಸ್ಥೆಯ ಪಾಲಾಗಿವೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿವೆ. ಎಲ್ಲ ಭಾಷೆಯಲ್ಲೂ ಹಾಡುಗಳ ಪ್ರಸಾರದ ಹಕ್ಕನ್ನು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ. ಬರೋಬ್ಬರಿ 25 ಕೋಟಿ ರೂ.ಗಳನ್ನು ನೀಡಿ ಆಡಿಯೋ ರೈಟ್ಸ್ ಖರೀದಿಸಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಅವರಿಗೆ ದಕ್ಷಿಣ ಭಾರತದಲ್ಲಿ ಇದು ಮೊದಲ ಸಿನಿಮಾ. ನಟ ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲೂ ಈ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.
ಇದನ್ನೂ ಓದಿ:
Roar of RRR: ಅಬ್ಬಬ್ಬಾ… ಆರ್ಆರ್ಆರ್ ಮೇಕಿಂಗ್ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?
ಆರ್ಆರ್ಆರ್ ಚಿತ್ರದ ಒಂದು ಹಾಡಿನ ಶೂಟ್ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು
Published On - 11:54 am, Tue, 27 July 21