ಸೀಕ್ರೆಟ್ ಆಗಿ ಮದುವೆ ಆದ ದಕ್ಷಿಣ ಭಾರತದ ನಟಿಯರಿವರು; ನಿಜವೆಷ್ಟು? ವದಂತಿ ಎಷ್ಟು?
ಸಾಯಿ ಪಲ್ಲವಿ ಅವರು ರಾಜ್ಕುಮಾರ್ ಪೆರಿಯಸ್ವಾಮಿ ಜೊತೆ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂದು ಅವರದಿ ಆಗಿತ್ತು. ಆದರೆ, ಇದು ಸಿನಿಮಾ ಮುಹೂರ್ತ ಸಂದರ್ಭದ ಫೋಟೋ ಇದು ಎಂಬುದು ಸಾಬೀತಾಗಿತ್ತು. ಸೀಕ್ರೇಟ್ ಆಗಿ ಮದುವೆ ಆದ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಎಲ್ಲಾ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನದ ಬಗ್ಗೆ ಹೇಳಿಕೊಳ್ಳೋಕೆ ಇಷ್ಟಪಡುವುದಿಲ್ಲ. ಪ್ರೀತಿ-ಪ್ರೇಮದ ವಿಚಾರವನ್ನು ಸೀಕ್ರೆಟ್ ಆಗಿ ಇಟ್ಟುಕೊಳ್ಳುತ್ತಾರೆ. ಮದುವೆ ವಿಚಾರವನ್ನು ಅನೇಕರು ಮುಚ್ಚಿಡುತ್ತಾರೆ. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ರಾಜ್ಕುಮಾರ್ ಪೆರಿಯಸ್ವಾಮಿ (Rajkumar Periasamy) ಜೊತೆ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಇದು ಸಿನಿಮಾ ಮುಹೂರ್ತ ಸಂದರ್ಭದ ಫೋಟೋ ಎಂಬುದು ಸಾಬೀತಾಗಿತ್ತು. ಸಾಯಿ ಪಲ್ಲವಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದರು. ಸೀಕ್ರೇಟ್ ಆಗಿ ಮದುವೆ ಆದ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಯನತಾರಾ ಹಾಗೂ ವಿಘ್ನೇಶ್ ಶಿವನ್
ನಯನತಾರಾ ಹಾಗೂ ವಿಗ್ನೇಶ್ ಶಿವನ್ ಅವರು ಜೂನ್ 9, 2022ರಂದು ಕುಟುಂಬದ ಸಮ್ಮುಖದಲ್ಲೇ ಮದುವೆ ಆದರು. ಅವರು ಏಳು ವರ್ಷಗಳ ಕಾಲ ಡೇಟ್ ಮಾಡುತ್ತಿದ್ದರು. ಮೂಲಗಳ ಪ್ರಕಾರ ಇವರು ಆರು ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು ಎನ್ನಲಾಗಿದೆ. ಬಾಡಿಗೆ ತಾಯ್ತನದ ವಿಚಾರ ವಿವಾದ ಸೃಷ್ಟಿಸಿದಾಗ ಅವರು ರಿಜಿಸ್ಟರ್ ಮ್ಯಾರೇಜ್ ಬಗ್ಗೆ ಗೊತ್ತಾಯಿತು. ಈ ವಿಚಾರ ತಿಳಿದು ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಸದ್ಯ ಇಬ್ಬರೂ ಹಾಯಾಗಿ ಸಂಸಾರ ಮಾಡುತ್ತಿದ್ದಾರೆ.
ರಿಚಾ ಗಂಗೋಪಾಧ್ಯಾಯ
ದಕ್ಷಿಣ ಭಾರತದ ನಟಿ ರಿಚಾ ಗಂಗೋಪಾಧ್ಯಾಯ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟನೆಯಿಂದ ದೂರ ಇದ್ದು ದಶಕ ಕಳೆದಿದೆ. ರಿಚಾ ಅಮೆರಿಕದಲ್ಲಿ ಮದುವೆ ಆಗಿದ್ದರು. ಬಾಲ್ಯದ ಗೆಳೆಯನ ಜೊತೆ ಈ ಮದುವೆ ನಡೆದಿತ್ತು. ಸದ್ಯ ಅವರು ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಉದ್ಯಮ ಒಂದನ್ನು ಅವರು ನಡೆಸುತ್ತಿದ್ದಾರೆ.
ಜಯಸುಧಾ
ಹಿರಿಯ ತೆಲುಗು ನಟಿ ಜಯಸುಧಾ ಅವರು ಮೂರನೇ ಬಾರಿ ಮದುವೆ ಆಗಿದ್ದಾರೆ ಎಂದು ವರದಿ ಆಗಿತ್ತು. 64ನೇ ವಯಸ್ಸಿಗೆ ಅವರು ಅಮೆರಿಕದ ಉದ್ಯಮಿಯನ್ನು ವರಿಸಿದ್ದರು ಎಂದು ಹೇಳಾಯಿತು. ಅವರು ಮೊದಲು ರಾಜೇಂದ್ರ ಪ್ರಸಾದ್ ಅವರನ್ನು ಮದುವೆ ಆಗಿದ್ದರು. ಆ ಬಳಿಕ ನಿತೀನ್ ಕಪೂರ್ ಅವರನ್ನು ವರಿಸಿದರು. ಬಳಿಕ ಇಬ್ಬರೂ ಬೇರೆ ಆದರು. ಮೂರನೇ ಮದುವೆ ವಿಚಾರವನ್ನು ಅವರು ಅಲ್ಲಗಳೆದಿದ್ದರು.
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬ್ರೇಕಪ್ ಬಳಿಕ ಅವರ ಬಗ್ಗೆ ಮತ್ತೊಂದು ವದಂತಿ ಹುಟ್ಟಿಕೊಂಡಿತ್ತು. ದುಬೈ ಮೂಲದ ಉದ್ಯಮಿ ಜೊತೆ ಅವರು ಮದುವೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ಪಿಎಚ್ಡಿ ಕನಸು ನನಸು ಮಾಡಿಕೊಳ್ಳಲು ಮೊದಲ ಹೆಜ್ಜೆ ಇಟ್ಟ ನಟಿ ಪವಿತ್ರಾ ಲೋಕೇಶ್
ಧನ್ಯಾ ಬಾಲಕೃಷ್ಣ
ಧನ್ಯಾ ಬಾಲಕೃಷ್ಣ ಅವರು ನಿರ್ದೇಶಕ ಬಾಲಾಜಿ ಕೃಷ್ಣಮೋಹನ್ ಜೊತೆ ಗುಟ್ಟಾಗಿ ಮದುವೆ ಆದರು. 2022ರಲ್ಲಿ ಈ ಮದುವೆ ನಡೆದಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು.
ಪವಿತ್ರಾ ಲೋಕೇಶ್ ಹಾಗೂ ನರೇಶ್
ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಮದುವೆ ಆದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ನರೇಶ್ಗೆ ಇದು ನಾಲ್ಕನೇ ಮದುವೆ. ಪವಿತ್ರಾ ಅವರನ್ನು ಗುಟ್ಟಾಗಿ ವರಿಸಿದ್ದರು. ಈ ವಿಚಾರ ಮುಚ್ಚಿಡಲಾಗಿತ್ತು. ಹಲವು ಸಮಯದ ಬಳಿಕ ಇವರು ಇದನ್ನು ಒಪ್ಪಿಕೊಂಡರು. ಇವರ ಪ್ರೇಮದ ಕಥೆ ಆಧರಿಸಿ ‘ಮತ್ತೆ ಮದುವೆ’ ಹೆಸರಿನ ಸಿನಿಮಾ ಕೂಡ ಬಂತು. ಇದನ್ನು ನರೇಶ್ ಅವರೇ ನಿರ್ಮಾಣ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sat, 23 September 23



