ನಟಿ ಸಮಂತಾಗೆ ಮಧ್ಯ ರಸ್ತೆಯಲ್ಲಿ ಕಿರುಕುಳ; ವೈರಲ್ ಆಗಿದೆ ವಿಡಿಯೋ
ಮುಂಬೈನ ಬೀದಿಯಲ್ಲಿ ಈ ಘಟನೆ ನಡೆದಿದೆ. ಸಮಂತಾ ರುತ್ ಪ್ರಭು ಅವರನ್ನು ಒಂದಷ್ಟು ಜನರು ಸುತ್ತುವರಿದಿದ್ದಾರೆ. ಪಾಪರಾಜಿಗಳ ಈ ವರ್ತನೆಗೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದವರು ಇದನ್ನು ‘ಕಿರುಕುಳ’ ಎಂದು ಹೇಳಿದ್ದಾರೆ. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ..

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮುಂಬೈನಲ್ಲಿದ್ದಾರೆ. ಅಲ್ಲಿಯೇ ಅವರು ಜಿಮ್ಗೆ ತೆರಳಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ಚಿತ್ರಿಸುವ ಸಲುವಾಗಿ ಪಾಪರಾಜಿಗಳು (Paparazzi) ಮುಗಿಬಿದ್ದಿದ್ದಾರೆ. ಇದರಿಂದ ಸಮಂತಾ ಅವರಿಗೆ ಕೋಪ ಬಂದಿದೆ. ಬೇಡ ಎಂದರೂ ಕೂಡ ತಮ್ಮ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಸಮಂತಾ (Samantha) ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಪಾಪರಾಜಿಗಳ ಈ ವರ್ತನೆಯನ್ನು ಕಿರುಕುಳ ಎಂದು ನೆಟ್ಟಿಗರು ಹೇಳಿದ್ದಾರೆ. ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಪಾಪರಾಜಿಗಳ ಎದುರು ಸೆಲೆಬ್ರಿಟಿಗಳು ಖುಷಿಯಿಂದಲೇ ಪೋಸ್ ನೀಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಕೋಪಗೊಳ್ಳುತ್ತಾರೆ. ನಟಿ ಸಮಂತಾ ಅವರು ಈಗ ಒಳ್ಳೆಯ ಮೂಡ್ನಲ್ಲಿ ಇಲ್ಲ ಎನಿಸುತ್ತದೆ. ಆ ಕಾರಣದಿಂದಲೇ ಅವರು ಪಾಪರಾಜಿಗಳಿಗೆ ಪೋಸ್ ನೀಡಲು ಒಪ್ಪಲಿಲ್ಲ. ಸಮಂತಾ ಪರವಾಗಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸಮಂತಾ ಅವರು ಜಿಮ್ನಲ್ಲಿ ವರ್ಕೌಟ್ ಮುಗಿಸಿಕೊಂಡು ಹೊರಗೆ ಬಂದರು. ಆದರೆ ಅವರ ಕಾರು ಇನ್ನೂ ಬಂದಿರಲಿಲ್ಲ. ಸಮಂತಾ ಅವರು ಫೋನಿನಲ್ಲಿ ಮಾತನಾಡುತ್ತಾ ರಸ್ತೆಗೆ ಬಂದೇ ಬಿಟ್ಟರು. ಅಲ್ಲಿ ಅವರಿಗೆ ಕಾರು ಕಾಣಿಸಲಿಲ್ಲ. ಅಲ್ಲದೇ ಅವರು ಯಾವುದೋ ಟೆನ್ಷನ್ನಲ್ಲಿ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಿದ್ದರೂ ಕೂಡ ಅವರನ್ನು ಪಾಪರಾಜಿಗಳು ಮುತ್ತಿಕೊಂಡರು. ಇದರಿಂದ ಅವರಿಗೆ ಕಿರಿಕಿರಿ ಆಯಿತು.
View this post on Instagram
‘ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ..’ ಎಂದು ಸಮಂತಾ ಅವರು ಕೂಗಾಡಿದ್ದಾರೆ. ಆದರೂ ಸಹ ಅವರ ಮಾತಿಗೆ ಪಾಪರಾಜಿಗಳು ಬೆಲೆ ಕೊಟ್ಟಿಲ್ಲ. ನಡು ರಸ್ತೆಯಲ್ಲಿ ನಟಿಯ ಫೋಟೋ, ವಿಡಿಯೋಗಾಗಿ ಈ ರೀತಿ ನಡೆದುಕೊಂಡ ಪಾಪರಾಜಿಗಳಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಇನ್ನು, ಸಮಂತಾ ಅವರು ಯಾವ ಕಾರಣದಿಂದ ಇಷ್ಟು ಟೆನ್ಷನ್ನಲ್ಲಿ ಇದ್ದರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಇದನ್ನೂ ಓದಿ: ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ
ಸಿನಿಮಾ, ವೆಬ್ ಸಿರೀಸ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಸಮಂತಾ ರುತ್ ಪ್ರಭು ಅವರಿಗೆ ಸಖತ್ ಬೇಡಿಕೆ ಇದೆ. ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡರಲ್ಲೂ ಅವರು ಜನಪ್ರಿಯತೆ ಹೊಂದಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸಿಟಾಡೆಲ್: ಹನಿಬನಿ’ ವೆಬ್ ಸರಣಿಗಳಿಂದ ಹಿಂದಿ ಪ್ರೇಕ್ಷಕರನ್ನು ಸಮಂತಾ ಸೆಳೆದುಕೊಂಡಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಜೊತೆ ಅವರು ಸುತ್ತಾಡುತ್ತಿರುವುದು ಕೂಡ ಹೆಚ್ಚು ಸುದ್ದಿ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








