AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ.ಎಂ. ಗಿರಿರಾಜ್ ಹೊಸ ಸಿನಿಮಾ ‘ಕಲ್ಯಾಣಿ’: ಆಡಿಯೋ ಬಿಡುಗಡೆ ಮಾಡಿದ ಶಶಾಂಕ್

ಲೇಖಕ ಬಸವ ರೆಡ್ಡಿ ಬರೆದ ಕಥೆ ಆಧರಿಸಿ ‘ಕಲ್ಯಾಣಿ’ ಶೀರ್ಷಿಕೆಯಲ್ಲಿ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ಸಿನಿಮಾ ಮಾಡುತ್ತಿದ್ದಾರೆ. ಭಟ್ಕಳ, ಉಡುಪಿ, ಬೆಂಗಳೂರು ಸುತ್ತಮುತ್ತ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಬಿ.ಎಂ. ಗಿರಿರಾಜ್ ಹೊಸ ಸಿನಿಮಾ ‘ಕಲ್ಯಾಣಿ’: ಆಡಿಯೋ ಬಿಡುಗಡೆ ಮಾಡಿದ ಶಶಾಂಕ್
Kalyani Movie Audio Launch
ಮದನ್​ ಕುಮಾರ್​
|

Updated on: Nov 02, 2026 | 9:43 PM

Share

ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ.ಎಂ. ಗಿರಿರಾಜ್ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಲೇಖಕ ಬಸವ ರೆಡ್ಡಿ ಅವರ ಕಥೆಗೆ ಬಿ.ಎಂ. ಗಿರಿರಾಜ್ ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲವು ತಿಂಗಳ ಹಿಂದೆಯೇ ಈ ಸಿನಿಮಾದ ಶೂಟಿಂಗ್ ಸದ್ದಿಲ್ಲದೆ ಶುರುವಾಗಿತ್ತು. ಸದ್ಯ ಸಂಪೂರ್ಣ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಚಿತ್ರದ ಆಡಿಯೋ ಬಿಡುಗಡೆ ಮಾಡಿ, ಸಿನಿಮಾ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ‘ಆರ್.ಕೆ. ಸಿನಿಮಾಸ್’ ಬ್ಯಾನರಿನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಈಗಾಗಲೇ ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ನಟ ಸಾಮ್ರಾಟ್ ಶೆಟ್ಟಿ ಅವರು ‘ಕಲ್ಯಾಣಿ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಭಾರತದ ನಟಿ ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ.ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ರಂಗು ಸಮರ್ಪಣ್, ಶೈಲೇಂದ್ರ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ‘ಕಲ್ಯಾಣಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಈ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಬಿ.ಎಂ. ಗಿರಿರಾಜ್, ‘ನವಿರಾದ ಒಲವಿನ ಕಥೆಯನ್ನು ಮುನ್ನಲೆಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳು ಇದರಲ್ಲಿವೆ. ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾ. ಉತ್ತರ ಭಾರತದಿಂದ ಬರುವ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣ ಮಾಡಲು ಈ ಚಿತ್ರದಲ್ಲಿ ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಖ್ಯಾತಿಯ ಶನೀಲ್ ಗೌತಮ್ ನಟನೆಯ ಮುಂದಿನ ಚಿತ್ರ ‘ಶ್ರೀರಾಮಚಂದ್ರ’

‘ಕಲ್ಯಾಣಿ’ ಸಿನಿಮಾದ 3 ಹಾಡುಗಳಿಗೆ ಬಿ.ಜೆ. ಭರತ್ ಅವರು ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ವರಕವಿ ದ.ರಾ. ಬೇಂದ್ರೆ, ಮತ್ತೊಂದು ಹಾಡಿನಲ್ಲಿ ವಿಜಯ್ ಈಶ್ವರ್ ಅವರ ಸಾಹಿತ್ಯವಿದೆ. ಚಿತ್ರದ ರ‍್ಯಾಪ್ ಶೈಲಿಯ ಗೀತೆಗೆ ಕನ್ನಡದ ಜನಪ್ರಿಯ ರ‍್ಯಾಪ್ ಗಾಯಕ ಆಲ್ ಓಕೆ (ಅಲೋಕ್) ಸಾಹಿತ್ಯ ಬರೆದು ಧ್ವನಿ ನೀಡಿದ್ದಾರೆ. ನಿರ್ದೇಶಕ ಶಶಾಂಕ್ ಅವರು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ, ಮೊಸರಿನ ದರ ಇಳಿಕೆ
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ, ಮೊಸರಿನ ದರ ಇಳಿಕೆ
ರಾಜ್ಯದ ಬೆಲೆ ಏರಿಕೆ, ಆರ್ಥಿಕ ನಿರ್ಧಾರಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ರಾಜ್ಯದ ಬೆಲೆ ಏರಿಕೆ, ಆರ್ಥಿಕ ನಿರ್ಧಾರಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ಖಾಸಗಿ ಕೆಲಸ ಬಿಟ್ಟು ಬಂದ ಶಿಕ್ಷಕರಿಗೆ 15 ತಿಂಗಳಿಂದ ಸಂಬಳ ನೀಡದ ಸರ್ಕಾರ
ಖಾಸಗಿ ಕೆಲಸ ಬಿಟ್ಟು ಬಂದ ಶಿಕ್ಷಕರಿಗೆ 15 ತಿಂಗಳಿಂದ ಸಂಬಳ ನೀಡದ ಸರ್ಕಾರ
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ