AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್-ಉಪೇಂದ್ರ ನಡುವೆ ಸ್ಪರ್ಧೆ: ಹಿಂದೆ ಸರಿಯುತ್ತಾರಾ ಉಪ್ಪಿ?

Upendra-Sudeep: ಉಪೇಂದ್ರ ಹಾಗೂ ಸುದೀಪ್ ಒಳ್ಳೆಯ ಗೆಳೆಯರು. ಇಬ್ಬರೂ ಸಹ ‘ಮುಕುಂದ ಮುರಾರಿ’, ‘ಕಬ್ಜ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ಈಗ ಇಬ್ಬರ ನಡುವೆ ಬಾಕ್ಸ್ ಆಫೀಸ್​ನಲ್ಲಿ ಫೈಟ್ ಶುರುವಾಗಿದೆ. ಇಬ್ಬರಲ್ಲಿ ಗೆಲ್ಲುವವರು ಯಾರು?

ಸುದೀಪ್-ಉಪೇಂದ್ರ ನಡುವೆ ಸ್ಪರ್ಧೆ: ಹಿಂದೆ ಸರಿಯುತ್ತಾರಾ ಉಪ್ಪಿ?
Sudeep-Uppi
ಮಂಜುನಾಥ ಸಿ.
| Updated By: Digi Tech Desk|

Updated on:Nov 28, 2024 | 10:05 AM

Share

ಸುದೀಪ್ ಹಾಗೂ ಉಪೇಂದ್ರ ‘ಮುಕುಂದ-ಮುರಾರಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಗೆಳೆತನ ಇದೆ. ಆದರೆ ಈಗ ಈ ಇಬ್ಬರ ನಡುವೆ ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಶುರುವಾಗಿದೆ. ನಿನ್ನೆಯಷ್ಟೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಸಿನಿಮಾ ಡಿಸೆಂಬರ್ 25 ರಂದು ತೆರೆಗೆ ಬರಲಿದೆ. ಆದರೆ ಅದರ ಐದು ದಿನ ಮುಂಚೆ ಅಂದರೆ ಡಿಸೆಂಬರ್ 20 ರಂದು ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ.

ಇಬ್ಬರು ದೊಡ್ಡ ನಟರ ಸಿನಿಮಾಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಒಳ್ಳೆಯದಲ್ಲ ಅಲ್ಲದೆ ಸಿನಿಮಾ ಪ್ರೇಮಿಗಳಿಗೂ ಇದು ಬೇಸರದ ಸಂಗತಿ. ಅಲ್ಲದೆ ಸುದೀಪ್ ಹಾಗೂ ಉಪೇಂದ್ರ ಒಳ್ಳೆಯ ಗೆಳೆಯರಾಗಿದ್ದು ಒಬ್ಬರ ಸಿನಿಮಾ ಇನ್ನೊಬ್ಬರ ಸಿನಿಮಾ ಮೇಲೆ ಸ್ಪರ್ಧೆಗೆ ಬೀಳಲಿದೆ. ಇದು ಚಿತ್ರರಂಗದಿಂದ ಒಳಿತಲ್ಲ. ಆದರೆ ಸುದೀಪ್​ರ ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಳಿಕ ‘ಯುಐ’ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಆದರೆ ಈ ಸುದ್ದಿಯನ್ನು ತಳ್ಳಿ ಹಾಕಿರುವ ‘ಯುಐ’ ಸಿನಿಮಾದ ನಿರ್ಮಾಪಕ ಕೆಪಿ ಶ್ರೀಕಾಂತ್, ‘ಯಾವುದೇ ಕಾರಣಕ್ಕೂ ನಾವು ‘ಯುಐ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿಲ್ಲ. ಪಿವಿಆರ್ ಇನ್ನಿತರೆ ಕಡೆಗಳಲ್ಲಿ ಜಾಹೀರಾತು ಪೋಸ್ಟರ್​ಗಳನ್ನು ಪ್ರದರ್ಶಿಸಲು ಈಗಾಗಲೇ ಆರಂಭ ಮಾಡಿದ್ದೇವೆ. ಸಿನಿಮಾದ ಪ್ರಚಾರ ಸಾಮಗ್ರಿಗಳು ಎಲ್ಲವೂ ರೆಡಿಯಾಗಿದೆ. ಹೀಗಿರುವಾಗ ನಾವು ಸಿನಿಮಾದ ಬಿಡುಗಡೆ ಮುಂದೂಡುವುದಿಲ್ಲ, ಡಿಸೆಂಬರ್ 20ಕ್ಕೆ ನಮ್ಮ ಸಿನಿಮಾ ಬಿಡುಗಡೆ ಆಗುವುದು ಪಕ್ಕಾ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರಿ ಬೆಲೆಗೆ ಸುದೀಪ್​ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕು ಮಾರಾಟ

ಕೆಪಿ ಶ್ರೀಕಾಂತ್ ಮತ್ತು ಸುದೀಪ್ ಉತ್ತಮ ಗೆಳೆಯರು. ಈ ಹಿಂದೆ ಸುದೀಪ್​ರ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಸಹ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದ ‘ಭೀಮ’ ಸಿನಿಮಾದ ಎದುರು ಆ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ‘ಭೀಮ’ ಸಿನಿಮಾ ಹಾಗೂ ‘ಕೋಟಿಗೊಬ್ಬ 3’ ಸಿನಿಮಾ ಒಂದೇ ದಿನ ಬಿಡುಗಡೆ ಆಗಲಿಕ್ಕಿತ್ತು. ಆದರೆ ಕಾರಣಾಂತರಗಳಿಂದ ‘ಕೋಟಿಗೊಬ್ಬ 3’ ಸಿನಿಮಾದ ಬಿಡುಗಡೆ ಒಂದು ದಿನ ತಡವಾಯ್ತು. ಆದರೆ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಜಯ ಗಳಿಸಿತು. ‘ಕೋಟಿಗೊಬ್ಬ 3’ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ಆದರೆ ಕೆಲವು ವಿವಾದಗಳಿಗೆ ಕಾರಣವಾಯ್ತು.

ಸುದೀಪ್ ನಾಯಕನಾಗಿ ನಟಿಸಿದ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಗಳಾಗಿದ್ದು ಇದೀಗ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ. ಇನ್ನು ಉಪೇಂದ್ರ ನಿರ್ದೇಶನ ಮಾಡಿರುವ ‘ಸೂಪರ್’ ಸಿನಿಮಾ ಬಿಡುಗಡೆ ಆಗಿ ಸುಮಾರು 10 ವರ್ಷಗಳಾಗುತ್ತಾ ಬಂದಿದ್ದು, ‘ಸೂಪರ್’ ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ‘ಯುಐ’ ಈಗ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:11 am, Thu, 28 November 24