ದರ್ಶನ್ಗೆ ಮಾಫಿ ಸಾಕ್ಷಿ ಸಂಕಷ್ಟ, ದೈವದ ಮೊರೆ ಹೋದ ವಿಜಯಲಕ್ಷ್ಮಿ
Darshan Thoogudeepa: ದರ್ಶನ್ಗೆ ಮಾಫಿ ಸಾಕ್ಷಿ ಸಂಕಷ್ಟ ಎದುರಾಗಿದೆ. ದರ್ಶನ್, ಆಪ್ತನಾಗಿದ್ದ, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯೂ ಆಗಿರುವ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಇದು ದರ್ಶನ್ಗೆ ತೀವ್ರ ಸಂಕಷ್ಟ ತಂದಿದೆ. ಪ್ರಕರಣದಲ್ಲಿ ದರ್ಶನ್ಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಿರುವ ಕಾರಣ ಇದೀಗ ವಿಜಯಲಕ್ಷ್ಮಿ ದರ್ಶನ್ ಅವರು ದೈವದ ಮೊರೆ ಹೋಗಿದ್ದಾರೆ.

ಮುಖ್ಯಾಂಶಗಳು
- ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ಗೆ ಹಿನ್ನಡೆ ಉಂಟಾಗುತ್ತಿದೆ.
- ದರ್ಶನ್ ಆಪ್ತ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾನೆ.
- ಪತಿಯ ಒಳಿತಿಗಾಗಿ ದೈವಕ್ಕೆ ಮೊರೆ ಹೋಗಿದ್ದಾರೆ ವಿಜಯಲಕ್ಷ್ಮಿ
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ದಿನೇ ದಿನೇ ಸಂಕಷ್ಟಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಜಾಮೀನು ಅರ್ಜಿ ರದ್ದಾಗಿ ಮುಂದಿನ ಒಂದು ವರ್ಷಗಳ ಕಾಲ ದರ್ಶನ್ ಜಾಮೀನಿಗೆ ಅರ್ಜಿಯೇ ಸಲ್ಲಿಸದಂತೆ ಆಗಿದೆ. ಇದೆಲ್ಲದರ ನಡುವೆ ಇದೀಗ ದರ್ಶನ್ಗೆ ಮಾಫಿ ಸಾಕ್ಷಿ ಸಂಕಷ್ಟ ಎದುರಾಗಿದೆ. ದರ್ಶನ್, ಆಪ್ತನಾಗಿದ್ದ, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯೂ ಆಗಿರುವ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಇದು ದರ್ಶನ್ಗೆ ತೀವ್ರ ಸಂಕಷ್ಟ ತಂದಿದೆ. ಪ್ರಕರಣದಲ್ಲಿ ದರ್ಶನ್ಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಿರುವ ಕಾರಣ ಇದೀಗ ವಿಜಯಲಕ್ಷ್ಮಿ ದರ್ಶನ್ ಅವರು ದೈವದ ಮೊರೆ ಹೋಗಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಇದೀಗ ಮಂಗಳೂರಿಗೆ ಹೋಗಿದ್ದು ದೈವಾರಾಧನೆ ಮಾಡಿದ್ದಾರೆ. ಕರಾವಳಿ ಭಾಗದ ಅತ್ಯಂತ ಶಕ್ತಿಶಾಲಿ, ಮಹಿಮಾಶಾಲಿ ದೈವಗಳು ಎನ್ನಲಾಗುವ ಮಂತ್ರಜಾವದೆ ಮತ್ತು ಗುಳಿಗ ದೈವಗಳ ಆರಾಧನೆ ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಮಂದಾರಬೈಲು ರಕ್ತೇಶ್ವರಿ ಸನ್ನಿಧಿಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದು ವಿಶೇಷ ಪೂಜೆಯನ್ನು ಅಲ್ಲಿ ಅವರು ಮಾಡಿಸಿದ್ದಾರೆ. ದೈವಗಳಿಗೆ ಸೇವೆಯನ್ನು ಸಲ್ಲಿಕೆ ಮಾಡಿದ್ದಾರೆ.
ಈ ಹಿಂದೆಯೂ ಸಹ ವಿಜಯಲಕ್ಷ್ಮಿ ಅವರು ಹಲವು ದೇವಾಲಯಗಳಿಗೆ ದೈವ ಸ್ಥಾನಕ್ಕೆ ಭೇಟಿ ನೀಡಿ ಪತಿಯ ಒಳಿತಾಗಿ ಪ್ರಾರ್ಥನೆ, ವಿಶೇಷ ಪೂಜೆಗಳನ್ನು ಮಾಡಿದ್ದರು. ಕರಾವಳಿಯ ಕೆಲವು ದೇವಾಲಯಗಳಿಗೆ ಈ ಹಿಂದೆಯೂ ಸಹ ವಿಜಯಲಕ್ಷ್ಮಿ ಅವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಮಾಡಿದ್ದರು. ಈಗ ದೈವ ಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ, ಸೇವೆಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:ದರ್ಶನ್ ಅಭಿಮಾನಿಯಾಗಿ ಡಿ ಬಾಸ್ ಕಟೌಟ್ ಮುಂದೆ ‘ದೇವಿ’ ಹೀರೋ ಚೇತನ್ ಸಾಹಸ
ಕಳೆದ ಕೆಲ ತಿಂಗಳುಗಳಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಪದೇ ಪದೇ ಹಿನ್ನಡೆ ಆಗುತ್ತಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಿಂದ ದರ್ಶನ್ಗೆ ನೆಗೆಟಿವ್ ಆಯ್ತು. ಬಳಿಕ ದರ್ಶನ್ ಹಾಕಿದ ಖುದ್ದು ಹಾಜರಿ ಅರ್ಜಿಯನ್ನು ರದ್ದು ಮಾಡಲಾಯ್ತು. ಆಪ್ತ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಪ್ರದೋಶ್ ಹೇಳಿಕೆ ಪರಿಗಣಿಸಬಾರದು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸಹ ನ್ಯಾಯಾಲಯ ರದ್ದು ಮಾಡಿದೆ. ಒಟ್ಟಾರೆ ಒಂದರ ಹಿಂದೊಂದು ಹಿನ್ನಡೆಯೇ ದರ್ಶನ್ಗೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




