ಪಾಕಿಸ್ತಾನದ ಹಳ್ಳಿಗಳಲ್ಲೂ ‘ಕೆಜಿಎಫ್’ ಹವಾ; ಇದು ರಾಕಿ ಭಾಯ್ ಕ್ರೇಜ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರದ ಜನಪ್ರಿಯತೆ ಪಾಕಿಸ್ತಾನದ ಹಳ್ಳಿಗಳಿಗೂ ತಲುಪಿದೆ. 'ಗ್ಲೋಬಲ್ ಕನ್ನಡಿಗ' ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಒಂದು ವೀಡಿಯೊದಲ್ಲಿ, ಪಾಕಿಸ್ತಾನದ ಮಕ್ಕಳು ಕೆಜಿಎಫ್ ಮತ್ತು ರಾಕಿ ಭಾಯ್ ಬಗ್ಗೆ ತಿಳಿದಿರುವುದು ಬಹಿರಂಗವಾಗಿದೆ ಅನ್ನೋದು ವಿಶೇಷ .

ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ (KGF Chapter 2) ಮೂಲಕ ವಿಶ್ವಾದ್ಯಂತ ತಲುಪಿದ್ದಾರೆ. ಅವರನ್ನು ವಿದೇಶದಲ್ಲೂ ಗುರುತಿಸುತ್ತಾರೆ. ಅಮೆರಿಕ, ಇಂಗ್ಲೆಂಡ್ ಜನರಿಗೆ ಯಶ್ ಪರಿಚಯ ಇದೆ ಎಂದರೆ ಅದು ಅಂಥ ದೊಡ್ಡ ವಿಚಾರ ಏನೂ ಅಲ್ಲ. ಆದರೆ, ಶತ್ರು ರಾಷ್ಟ್ರ ಎಂದೇ ಕರೆಸಿಕೊಳ್ಳುವ ನೆರೆಯ ಪಾಕಿಸ್ತಾನದ ಹಳ್ಳಿಯವರಿಗೂ ಯಶ್ ಪರಿಚಯ ಇದೆ ಎಂದರೆ ನೀವು ನಂಬುತ್ತೀರಾ? ನಿಜಕ್ಕೂ ನಂಬಲೇ ಬೇಕು. ಇದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ‘ಗ್ಲೋಬಲ್ ಕನ್ನಡಿಗ’ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಚಾರ ರಿವೀಲ್ ಆಗಿದೆ.
ಮಹಾಬಲ ರಾಮ್ ಅವರು ‘ಗ್ಲೋಬಲ್ ಕನ್ನಡಿಗ’ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದಕ್ಕೆ 3 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಅವರು ಇತ್ತೀಚೆಗೆ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಕರಾಚಿ, ಇಸ್ಲಾಮಾಬಾದ್ ನಗರಗಳನ್ನು ಅವರು ಎಕ್ಸ್ಪ್ಲೋರ್ ಮಾಡಿದ್ದರು. ಇಸ್ಲಾಮಾಬಾದ್ನ ಸಮೀಪ ಇರುವ ಹಳ್ಳಿ ಒಂದಕ್ಕೆ ರಾಮ್ ತೆರಳಿದ್ದಾರೆ. ಅಲ್ಲಿನ ಮಕ್ಕಳು ‘ಕೆಜಿಎಫ್’ ಬಗ್ಗೆ ಮಾತನಾಡಿದ್ದಾರೆ.
ಮೊದಲು ತೆಲುಗಿನ ‘ಪುಷ್ಪ 2’ ಚಿತ್ರದ ‘ತಗ್ಗದೆಲೆ..’ ಸ್ಟೈಲ್ ಮಾಡಿದ್ದಾರೆ. ‘ಪಾಕಿಸ್ತಾನ ಹಳ್ಳಿಗಳಲ್ಲಿ ದಕ್ಷಿಣ ಭಾರತದ ಕ್ರೇಜ್ ಇದೆ. ಪಾಕ್ ಹಳ್ಳಿಯಲ್ಲಿ ಇದನ್ನು ಮಾಡುತ್ತಿದ್ದಾರೆ. ಸಿನಿಮಾದ ಪವರ್ ಇದು. ನಾವು ಇನ್ನೂ ಉತ್ತಮ ಸಿನಿಮಾ ಮಾಡಬೇಕು. ವಿಶ್ವಕ್ಕೆ ತಲುಪಬೇಕು’ ಎಂದು ರಾಮ್ ಅವರು ಹೇಳಿದ್ದಾರೆ.
‘ಕೆಜಿಎಫ್ ಗೊತ್ತಿದೆಯೇ’ ಎಂದು ಕೇಳುತ್ತಿದ್ದಂತೆ ಅಲ್ಲಿನ ಮಕ್ಕಳು, ‘ರಾಕಿ ಭಾಯ್’ ಎಂದು ಮಕ್ಕಳು ಕೂಗಿದ್ದಾರೆ. ಇದನ್ನು ಕೇಳಿ ರಾಮ್ ಅಚ್ಚರಿಗೊಂಡರು. ಈ ಸಿನಿಮಾ ಬಗ್ಗೆ ಪಾಕಿಸ್ತಾನದ ಯಾವುದೋ ಒಂದು ಹಳ್ಳಿಯಲ್ಲಿ ತಿಳಿದಿದೆ ಎಂಬುದನ್ನು ಕೇಳಿ ಅವರು ಖುಷಿಪಟ್ಟರು.
ಇದನ್ನೂ ಓದಿ: ‘ಕೆಜಿಎಫ್ 2’ ಕೆಟ್ಟ ಸಿನಿಮಾ ಹೇಗೆ ಗೆದ್ದಿತೊ‘: ಯಶ್ ಅಭಿಮಾನಿಗಳ ಕೆಣಕಿದ ವರ್ಮಾ
ಇಲ್ಲಿ ಒಂದು ಅಚ್ಚರಿಯ ವಿಚಾರ ಇದೆ. ಅದೇನೆಂದರೆ ಪಾಕ್ನಲ್ಲಿ ಭಾರತದ ಯಾವುದೇ ಸಿನಿಮಾಗಳು ಥಿಯೇಟರ್ನಲ್ಲಿ ಪ್ರಸಾರ ಕಾಣುವುದಿಲ್ಲ. ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ, ಒಟಿಟಿಯಲ್ಲಿ ಭಾರತೀಯ ಸಿನಿಮಾಗಳನ್ನು ನೋಡಬಹುದಾಗಿದೆ. ‘ಅಮೇಜಾನ್ ಪ್ರೈಮ್ ವಿಡಿಯೋ’ದಲ್ಲಿ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಇದೆ. ಅದನ್ನು ಪಾಕ್ ಮಂದಿ ವೀಕ್ಷಿಸಿ ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Sat, 5 April 25