AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ನಿರ್ದೇಶಕನಾಗಿದ್ದು ಹೇಗೆ? ಅವರೇ ವಿವರಿಸಿದ್ದು ಹೀಗೆ 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಿನಿಪಯಣದ ಅಪರೂಪದ ಹಳೆಯ ನೆನಪು ಇಲ್ಲಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಕಷ್ಟದ ಸಮಯದಲ್ಲಿ ಯಾರೂ ನಿರ್ದೇಶನ ಮಾಡಲು ಮುಂದೆ ಬರದಿದ್ದಾಗ, ಪರಿಸ್ಥಿತಿಯ ಒತ್ತಡದಿಂದಾಗಿಯೇ 'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಟ ಸುದೀಪ್ ಆಕಸ್ಮಿಕವಾಗಿ ನಿರ್ದೇಶಕನಾಗಿ ಬದಲಾದ ಕಥೆಯನ್ನು ಹಂಚಿಕೊಂಡಿದ್ದರು.

ಸುದೀಪ್ ನಿರ್ದೇಶಕನಾಗಿದ್ದು ಹೇಗೆ? ಅವರೇ ವಿವರಿಸಿದ್ದು ಹೀಗೆ 
ಸುದೀಪ್ Image Credit source: Sudeep
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 02, 2026 | 8:07 AM

Share

ಮುಖ್ಯಾಂಶಗಳು

  • 2005ರ ಹಿನ್ನಡೆಯ ದಿನಗಳು
  • ಆಕಸ್ಮಿಕವಾಗಿ ನಿರ್ದೇಶಕರಾದ ಕಿಚ್ಚ
  • ಬಾಕ್ಸ್ ಆಫೀಸ್ ಇತಿಹಾಸ ಬರೆದಿದ್ದ 'ಮೈ ಆಟೋಗ್ರಾಫ್'

ನಟ ಕಿಚ್ಚ ಸುದೀಪ್ ಅವರಿಗೆ (Kichcha Sudeep) ಇಂದು ಜನ್ಮದಿನ. ಅವರು ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಾರೆ. ಈ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುದೀಪ್ ತಮ್ಮ ವೃತ್ತಿಜೀವನದ ಅನೇಕ ಹಳೆಯ ನೆನಪುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಈ ವೇಳೆ ತಮಿಳಿನ ಸೂಪರ್ ಹಿಟ್ ‘ಆಟೋಗ್ರಾಫ್’ ಸಿನಿಮಾವನ್ನು ‘ಮೈ ಆಟೋಗ್ರಾಫ್’ ಹೆಸರಿನಲ್ಲಿ ಕನ್ನಡಕ್ಕೆ ತಂದು ನಿರ್ದೇಶನ ಮಾಡಿದ್ದು ಹೇಗೆ ಎಂಬುದನ್ನು ಸುದೀಪ್ ಬಹಿರಂಗಪಡಿಸಿದರು.

ಸುದೀಪ್ ತಮ್ಮ ಪಯಣದ ಬಗ್ಗೆ ಮಾತನಾಡುತ್ತಾ, ತಮಗೆ ನಿರ್ದೇಶಕನಾಗುವ ಯಾವುದೇ ಪೂರ್ವ ಯೋಜನೆ ಇರಲಿಲ್ಲ ಹಾಗೂ ಸಂದರ್ಭವೇ ತಮ್ಮನ್ನು ಆ ಸ್ಥಾನದಲ್ಲಿ ಕೂರಿಸಿತು ಎಂದು ತಿಳಿಸಿದರು. ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಸುದೀಪ್, ನಿರ್ದೇಶನಕ್ಕೆ ಕಾಲಿಟ್ಟ ಆ ಕ್ಷಣಗಳನ್ನು ತಮ್ಮದೇ ಮಾತುಗಳಲ್ಲಿ ವಿವರಿಸಿದರು.

‘ನಾನು 2005ರ ಬಗ್ಗೆ ಮಾತನಾಡುತ್ತಿದ್ದೇನೆ. ಅದು ನನ್ನ ಜೀವನದ ಅತ್ಯಂತ ಹಿನ್ನಡೆಯ ಕಾಲವಾಗಿತ್ತು. ಇತರ ನಟರ ಸಿನಿಮಾಗಳು ಭರ್ಜರಿ ಯಶಸ್ಸು ಕಾಣುತ್ತಿದ್ದಾಗ, ನನ್ನ ಸಾಲು ಸಾಲು ಸಿನಿಮಾಗಳು ಸೋಲುತ್ತಿದ್ದವು. ಆ ಕಠಿಣ ಸಮಯದಲ್ಲಿ ನನ್ನ ಬಳಿ ತಮಿಳಿನ ‘ಆಟೋಗ್ರಾಫ್’ ಚಿತ್ರದ ರಿಮೇಕ್ ಹಕ್ಕುಗಳಿದ್ದವು’ ಎಂದಿದ್ದಾರೆ ಸುದೀಪ್.

‘ಆದರೆ ನನಗಾಗಿ ಆ ಸಿನಿಮಾವನ್ನು ನಿರ್ದೇಶಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ. ಯಾರೂ ಸಿಗದಿದ್ದಾಗ ನಾನೇ ಆ ಸಿನಿಮಾವನ್ನು ನಿರ್ದೇಶಿಸುವ ಸಾಹಸದ ನಿರ್ಧಾರ ಕೈಗೊಂಡೆ. ನನಗೆ ಬೇರೆ ಯಾವುದೇ ದಾರಿ ಇರಲಿಲ್ಲ. ಯಾರನ್ನೋ ಮೆಚ್ಚಿಸಲು ಅಥವಾ ನಿರೂಪಿಸಲು ಅಲ್ಲ, ಕೇವಲ ಪರಿಸ್ಥಿತಿಯ ಒತ್ತಡದಿಂದಾಗಿ ಆ ದಿನ ನಾನೇ ಆಕ್ಷನ್-ಕಟ್ ಹೇಳಬೇಕಾಯಿತು’ ಎಂದು ಸುದೀಪ್ ಮುಕ್ತವಾಗಿ ಹೇಳಿದ್ದರು.

ಇದೇ ವೇಳೆ ಇಂದಿನ ಯುವ ಪೀಳಿಗೆಯ ಸಿನಿಮಾ ಆಸಕ್ತಿ ಮತ್ತು ಕೌಶಲ್ಯವನ್ನು ಸುದೀಪ್ ಮುಕ್ತಕಂಠದಿಂದ ಶ್ಲಾಘಿಸಿದರು. “‘ಇವತ್ತಿನ ಯುವ ನಟರು ಅತ್ಯಂತ ಪ್ರತಿಭಾವಂತರು. ನಟನೆ ಮತ್ತು ನಿರ್ದೇಶನ ಎರಡನ್ನೂ ಒಟ್ಟಿಗೆ ಮಾಡುವ ಸಾಮರ್ಥ್ಯ ಅವರಲ್ಲಿದೆ. ತಮಗೆ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಯುವ ಕಲಾವಿದರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Kichcha Sudeep Birthday: ಕಿಚ್ಚ ಸುದೀಪ್ ಜನ್ಮದಿನ; ನಟ ಆಸ್ತಿ ಎಷ್ಟು ಗೊತ್ತಾ?

ಸುದೀಪ್ ನಿರ್ದೇಶನದ ‘ಮೈ ಆಟೋಗ್ರಾಫ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಇತಿಹಾಸ ಎಲ್ಲರಿಗೂ ತಿಳಿದಿದ್ದೇ. ಆ ನಂತರ ಅವರು ಸುಮಾರು ಅರ್ಧ ಡಜನ್ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಶೀಘ್ರದಲ್ಲೇ ಮತ್ತೊಂದು ಹೊಸ ಸಿನಿಮಾಗೆ ಆಕ್ಷನ್-ಕಟ್ ಹೇಳುವ ಯೋಜನೆ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ