AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಹೂರ್ತ ಮಾಡಿಕೊಂಡ ‘ಲಾಕ್​ಡೌನ್ 21 ಡೇಸ್’ ಸಿನಿಮಾ; ಕೊರೊನಾ ಕಾಲದ ಕಥೆ

ಕೊರೊನಾ ಲಾಕ್​ಡೌನ್ ಕುರಿತಂತೆ ಈಗಾಗಲೇ ಕೆಲವು ಸಿನಿಮಾ ಬಂದಿದೆ. ಅವುಗಳಿಗೆ ಹೊಸದಾಗಿ ಸೇರ್ಪಡೆ ಆಗಲಿದೆ ‘ಲಾಕ್ ಡೌನ್ 21 ಡೇಸ್’ ಸಿನಿಮಾ. ಈ ಸಿನಿಮಾದಲ್ಲಿ ಅನಿಲ್, ಅರುಣಾ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು ಮುಂತಾದವರು ಅಭಿನಯಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಮುಹೂರ್ತ ಮಾಡಿಕೊಂಡ ‘ಲಾಕ್​ಡೌನ್ 21 ಡೇಸ್’ ಸಿನಿಮಾ; ಕೊರೊನಾ ಕಾಲದ ಕಥೆ
Lockdown 21 Days Movie Team
ಮದನ್​ ಕುಮಾರ್​
|

Updated on: Aug 28, 2026 | 10:53 PM

Share

ಲಾಕ್​ಡೌನ್ ಸಂದರ್ಭದಲ್ಲಿ ಜನರಿಗೆ ಆದ ಅನುಭವಗಳು ತುಂಬಾ ಹೊಸದಾಗಿದ್ದವು. ಕೊರೊನಾ (Corona) ಸಂದರ್ಭದಲ್ಲಿ ದೇಶಾದ್ಯಂತ ಜಾರಿಯಾದ 21 ದಿನಗಳ ಲಾಕ್‌ಡೌನ್ ಪ್ರತಿಯೊಬ್ಬರ ಜೀವನದಲ್ಲೂ ದೊಡ್ಡ ಆರ್ಥಿಕ ಹೊಡೆತ ಮತ್ತು ಗೊಂದಲಗಳನ್ನು ಸೃಷ್ಟಿಸಿತ್ತು. ಸಾಮಾನ್ಯ ಜನರ ಬದುಕು-ಬವಣೆ ಹಾಗೂ ಅವರು ಎದುರಿಸಿದ ನೈಜ ಸವಾಲುಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ಲಾಕ್‌ಡೌನ್ 21 ಡೇಸ್’ (Lockdown 21 Days) ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು.

ಈ ಮೊದಲು ಒಂದಷ್ಟು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಜೋಡಿ ನಿರ್ದೇಶಕರಾದ ಮಧುಮೋಹನ್ ಮತ್ತು ಮಾಚಯ್ಯ ಅವರು ‘ಲಾಕ್‌ಡೌನ್ 21 ಡೇಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶ್ರೀ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ ಮಾಡಲಾಯಿತು. ‘ನಮ್ ಗಣಿ ಬಿಕಾಂ ಪಾಸ್’ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಂದ ಚಿತ್ರಕ್ಕೆ ಚಾಲನೆ ನೀಡಲಾಯಿತು.

‘ಲಾಕ್‌ಡೌನ್ 21 ಡೇಸ್’ ಸಿನಿಮಾದಲ್ಲಿ ಅನಿಲ್ ಸಿ.ಕೆ., ಅರುಣಾ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು, ಅಕ್ಷಯ್, ಎಂ.ಕೆ. ಮಠ, ಚಂದನ್ ಗೌಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ​ಸಾಮಾಜಿಕ ಗಂಭೀರತೆಯ ಜೊತೆಗೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ದೇಶವೇ ಸ್ತಬ್ಧವಾಗಿದ್ದ 21 ದಿನಗಳ ಕಠಿಣ ಲಾಕ್‌ಡೌನ್ ಸಮಯದಲ್ಲಿ ಅರಳುವ ಒಂದು ಸುಂದರ ಪ್ರೇಮಕಥೆ ಹಾಗೂ ಮಾನವ ಸಂಬಂಧಗಳ ಗಟ್ಟಿತನವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ‘ಅರುಣಾ ಯಾದವ್ ಫಿಲ್ಮ್ ಹೌಸ್’ ಬ್ಯಾನರ್ ಮೂಲಕ ಅರುಣಾ ಯಾದವ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿತು.

ಇದನ್ನೂ ಓದಿ: ಕೊರೊನಾ ಲಾಕ್​ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್​ಇಡಿ ಬಲ್ಬ್​​ ತಯಾರಿಸುವ ಕಲೆ

‘ಶಾರ್ಟ್ ಫಿಲ್ಮ್‌ಗಳನ್ನು ನಿರ್ದೇಶಿಸಿದ ನಂತರ ದೊಡ್ಡ ಮಟ್ಟದ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ನನ್ನ ಈ ಕನಸಿಗೆ ಸಾಥ್ ನೀಡಿ, ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು’ ಎಂದು ನಿರ್ದೇಶಕ ಮಧುಮೋಹನ್ ಮಾಚಯ್ಯ ಹೇಳಿದರು. ‘ಒಬ್ಬ ಮಹಿಳಾ ನಿರ್ಮಾಪಕಿಯಾಗಿ ಸಮಾಜಕ್ಕೆ ಹತ್ತಿರವಾದ ಹಾಗೂ ಉತ್ತಮ ಅಭಿರುಚಿಯುಳ್ಳ ಇಂತಹ ಕಥೆಯನ್ನು ತೆರೆಯ ಮೇಲೆ ತರುತ್ತಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆ ಮತ್ತು ಸಂತಸ ತಂದಿದೆ’ ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!