AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ರಿಲೀಸ್​​ಗೆ ಮುನ್ನ ಯಶ್ ಟೆಂಪನ್ ರನ್

Yash Temple run: ‘ಟಾಕ್ಸಿಕ್’ ಸಿನಿಮಾ ನಾಳೆ (ಆಗಸ್ಟ್ 26) ರಿಲೀಸ್ ಆಗುತ್ತಿದೆ. ಯಶ್ ಅವರ ಸಿನಿಮಾ ಒಂದು ರಿಲೀಸ್ ಆಗಿ ನಾಲ್ಕು ವರ್ಷಗಳಾಗಿವೆ. ಇದೀಗ ನಾಲ್ಕು ವರ್ಷದ ಬಳಿಕ ತಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ, ಯಶ್ ಸಹ ಉತ್ಸುಕರಾಗಿದ್ದು, ಸಿನಿಮಾಕ್ಕೆ ಒಳಿತಾಗಲಿ ಎಂದು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಾಹಿತಿ ಇಲ್ಲಿದೆ ನೋಡಿ....

‘ಟಾಕ್ಸಿಕ್’ ರಿಲೀಸ್​​ಗೆ ಮುನ್ನ ಯಶ್ ಟೆಂಪನ್ ರನ್
Yash Temple Run
ಮಂಜುನಾಥ ಸಿ.
|

Updated on: Aug 25, 2026 | 5:15 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.
  • ಸಿನಿಮಾ ರಿಲೀಸ್​​ಗೆ ಮುಂಚೆ ಯಶ್ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
  • ಧರ್ಮಸ್ಥಳ ಸೇರಿದಂತೆ ಇನ್ನೂ ಕೆಲ ದೇವಾಲಯಗಳಲ್ಲಿ ಯಶ್ ಭೇಟಿ ನೀಡಿದ್ದಾರೆ.

‘ಕೆಜಿಎಫ್ 2’ (KGF 2) ಸಿನಿಮಾ 2022 ರಲ್ಲಿ ಬಿಡುಗಡೆ ಆಗಿತ್ತು. ನಾಲ್ಕು ವರ್ಷಗಳ ಬಳಿಕ ಯಶ್ (Yash) ಅವರ ಸಿನಿಮಾ ಒಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆ ಆಗುವ ಮುಂಚೆ ನಟ ಯಶ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಇಂದು (ಆಗಸ್ಟ್ 25) ನಟ ಯಶ್, ನಿರ್ಮಾಪಕ ವೆಂಕಟ್ ಅವರ ಜೊತೆ ಕರಾವಳಿ ಭಾಗದ ಕೆಲ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಮೊದಲಿಗೆ ಧರ್ಮಸ್ಥಳಕ್ಕೆ ಬಂದ ಯಶ್ ಹಾಗೂ ವೆಂಕಟ್ ಆ ಬಳಿಕ ಉಜಿರೆಯ ದೇವಾಲಯಕ್ಕೆ ಸಹ ಭೇಟಿ ನೀಡಿದ್ದಾರೆ.

ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟ ಯಶ್ ಮತ್ತು ನಿರ್ಮಾಪಕ ವೆಂಕಟ್ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಗರ್ಭಗುಡಿಯ ಮುಂದೆ ಕೆಲ ಸಮಯ ನಿಂತು ಪ್ರಾರ್ಥನೆ ಮಾಡಿದರು. ಅದಾದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದ ನಟ ಯಶ್ ಮತ್ತು ನಿರ್ಮಾಪಕ ವೆಂಕಟ್ ಅವರು ಹೆಗ್ಗಡೆಯವರ ಆಶೀರ್ವಾದವನ್ನು ಸಹ ಪಡೆದರು. ಕೆಲ ಸಮಯ ಮಾತುಕತೆ ಸಹ ನಡೆಸಿದ್ದಾರೆ.

ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಯಶ್ ಹಾಗೂ ವೆಂಕಟ್ ಅವರು ಉಜಿರೆಯು ಸುರಿಯ ಸದಾಶಿವರುದ್ರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿರುವ ದೇವಾಲಯ ಇದಾಗಿದೆ. ಈ ಹಿಂದೆ ‘ಕೆಜಿಎಫ್ 2’ ಸಿನಿಮಾದ ಬಿಡುಗಡೆ ಸಮಯದಲ್ಲಿಯೂ ಸಹ ಯಶ್ ಅವರು ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ದೇವರಲ್ಲಿ ವಿಶೇಷ ಭಕ್ತಿಯುಳ್ಳ ಯಶ್, 2024ರ ಆಗಸ್ಟ್ 6 ರಂದು ಕುಟುಂಬ ಸಮೇತರಾಗಿ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಆಗ ಸಿನಿಮಾ ರೀಲ್​​ ಮಾದರಿ ಮಣ್ಣಿನ ಆಕೃತಿ ಹರಕೆಯನ್ನು ಯಶ್ ಸಲ್ಲಿಸಿದ್ದರು.

ಇದನ್ನೂ ಓದಿ:‘ಟಾಕ್ಸಿಕ್’ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್

ಯಶ್, ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಸಮಯಕ್ಕೆ ಕೆಲವು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೆ. ಅದರಂತೆ ಅವರ ಮಹಾತ್ವಾಕಾಂಕ್ಷೆಯ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಆಗುವ ವೇಳೆಯೂ ಕೆಲವು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದಾರೆ. ‘ಕೆಜಿಎಫ್’ ಸಿನಿಮಾ ಬಿಡುಗಡೆ ವೇಳೆ ಅಂಬರೀಶ್ ಅವರ ಮನೆಗೆ ಹೋಗಿ ಫೋಟೊಕ್ಕೆ ನಮಸ್ಕರಿಸಿ ಆಶೀರ್ವಾದ ಸಹ ಪಡೆದಿದ್ದರು. ಈ ಬಾರಿಯೂ ಅಂಬರೀಶ್ ಅವರ ನಿವಾಸಕ್ಕೆ ಹೋಗುತ್ತಾರೋ ಇಲ್ಲವೋ ನೋಡಬೇಕಿದೆ.

‘ಟಾಕ್ಸಿಕ್’ ಸಿನಿಮಾ ನಾಳೆ (ಆಗಸ್ಟ್ 26) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ. ಕೆವಿಎನ್ ಜೊತೆಗೆ ತಮ್ಮ ಮಾನ್​​​ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಅನ್ನು ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!