AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಡನ ಬಗ್ಗೆ ಕೇಳಿದ ಬಳಿಕ ಮುತ್ತಿಟ್ಟರು’; ಕರಾಳ ಅನುಭವ ಬಿಚ್ಚಿಟ್ಟ ಶಿವಣ್ಣನ ಸಿನಿಮಾ ನಟಿ

ಸುರ್ವೀನ್ ಚಾವ್ಲಾ ಅವರು ಬಾಲಿವುಡ್ ನಿರ್ದೇಶಕನಿಂದ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ, ಒಂದು ಸಭೆಯ ನಂತರ ನಿರ್ದೇಶಕನು ಅವರನ್ನು ಚುಂಬಿಸಲು ಪ್ರಯತ್ನಿಸಿದ್ದನ್ನು ಹೇಳಿದ್ದಾರೆ. ಇದಲ್ಲದೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಅವರಿಗೆ ಅನುಚಿತ ವರ್ತನೆ ನಡೆದಿವೆ ಎಂದು ಹೇಳಿದ್ದಾರೆ.

‘ಗಂಡನ ಬಗ್ಗೆ ಕೇಳಿದ ಬಳಿಕ ಮುತ್ತಿಟ್ಟರು’; ಕರಾಳ ಅನುಭವ ಬಿಚ್ಚಿಟ್ಟ ಶಿವಣ್ಣನ ಸಿನಿಮಾ ನಟಿ
ಸುರ್ವೀನ್
ರಾಜೇಶ್ ದುಗ್ಗುಮನೆ
|

Updated on: May 31, 2025 | 7:35 AM

Share

ಚಿತ್ರರಂಗದ ಅನೇಕರು ತಮಗೆ ಚಿತ್ರರಂಗದಲ್ಲಿ ಆದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಾರೆ. ಈ ರೀತಿ ಕೆಟ್ಟ ಅನುಭವ ಹೊಂದಿದವರಲ್ಲಿ ಸುರ್ವೀನ್ ಛಾವ್ಲಾ ಕೂಡ ಒಬ್ಬರು. ಶಿವರಾಜ್​ಕುಮಾರ್ (Shivarajkumar) ನಟನೆಯ ‘ಪರಮೇಶ ಪಾನ್​ವಾಲಾ’  ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುರ್ವೀನ್ ಆ ಬಳಿಕ ಹಿಂದಿ, ಪಂಜಾಬಿ, ತಮಿಳು ರಂಗದಲ್ಲಿ ಮಿಂಚಿದರು. ಅವರು ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಹೇಳಿದ್ದಾರೆ. ಆದರೆ, ಅದು ಯಾವ ಚಿತ್ರರಂಗ ಎಂಬುದನ್ನು ವಿವರಿಸಿಲ್ಲ. ಅವರು ಮುಂಬೈ ಎಂದು ಉಲ್ಲೇಖ ಮಾಡಿದ್ದರಿಂದ ಬಾಲಿವುಡ್ ನಿರ್ದೇಶಕನ ಕೆಲಸ ಇದು ಎಂದು ಊಹಿಸಲಾಗಿದೆ.

‘ಮುಂಬೈನ ವೀರ ದೇಸಾಯಿ ರಸ್ತೆಯಲ್ಲಿ ನಡೆದ ಘಟನೆಯ ಬಗ್ಗೆ ಮಾತ್ರ ನಾನು ನಿಮಗೆ ಹೇಳುತ್ತೇನೆ. ಆಫೀಸ್ ಕ್ಯಾಬಿನ್‌ನಲ್ಲಿ ನಡೆದ ಸಭೆಯ ನಂತರ ನಿರ್ದೇಶಕರು ನನ್ನನ್ನು ಗೇಟ್‌ನಲ್ಲಿ ಬಿಡಲು ಬಂದರು. ಈ ಘಟನೆ ನಡೆದಿದ್ದು ನನ್ನ ಮದುವೆಯ ನಂತರ. ವಿಚಿತ್ರವೆಂದರೆ ನಾವು ಸಭೆಯಲ್ಲಿ ನನ್ನ ಮದುವೆಯ ಬಗ್ಗೆಯೂ ಮಾತನಾಡಿದ್ದೆವು’ ಎಂದು ಸುರ್ವೀನ್ ಹೇಳಿದ್ದಾರೆ.

‘ಮದುವೆಯ ನಂತರ ನನ್ನ ಜೀವನ ಹೇಗೆ ನಡೆಯುತ್ತಿದೆ, ನನ್ನ ಪತಿ ಏನು ಮಾಡುತ್ತಿದ್ದಾರೆ ಮುಂತಾದ ಪ್ರಶ್ನೆಗಳನ್ನು ಅವರು ನನಗೆ ಕೇಳಿದರು. ಸಭೆಯ ನಂತರ, ಅವರು ನನ್ನನ್ನು ಗೇಟ್‌ನಲ್ಲಿ ಬಿಡಲು ಅವರು ಬಂದರು. ಆ ಕ್ಷಣದಲ್ಲಿ ಅವರು ನನ್ನನ್ನು ಚುಂಬಿಸಲು ಮುಂದಕ್ಕೆ ಬಾಗಿದರು. ಬಹುತೇಕ ಅವರು ಚುಂಬಿಸಿಯೇ ಬಿಟ್ಟಿದ್ದರು. ನಾನು ಆ ನಿರ್ದೇಶಕನ ಹಿಂದಕ್ಕೆ ತಳ್ಳಿದೆ. ನನಗೆ ಆಘಾತವಾಯಿತು. ನೀವು ಏನು ಮಾಡುತ್ತಿದ್ದೀರಿ ಎಂದು ನಾನು ಅವರನ್ನು ಕೇಳಿದೆ ಮತ್ತು ಅಲ್ಲಿಂದ ಹೊರಟೆ’ ಎಂದು ಸುರ್ವೀನ್ ಹೇಳಿದ್ದಾರೆ.

ಇದನ್ನೂ ಓದಿ
Image
ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
Image
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
Image
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಈ ಹಿಂದಿನ ಸಂದರ್ಶನವೊಂದರಲ್ಲಿ ಸುರ್ವೀನ್ ಅವರು ದಕ್ಷಿಣ ಸಿನಿಮಾ ರಂಗದಲ್ಲಿ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದರು. ಒಬ್ಬ ನಿರ್ದೇಶಕರು ಅವಳೊಂದಿಗೆ ರಾತ್ರಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರಂತೆ. ಆ ನಿರ್ದೇಶಕನಿಗೆ ಹಿಂದಿ ಅಥವಾ ಇಂಗ್ಲಿಷ್ ಸರಿಯಾಗಿ ಬರದ ಕಾರಣ, ಅವರು ಮೂರನೇ ವ್ಯಕ್ತಿಯ ಮೂಲಕ ಸುರ್ವೀನ್‌ಗೆ ಈ ಆಶಯವನ್ನು ತಿಳಿಸಿದ್ದರು.

ಇದನ್ನೂ ಓದಿ: ಸೌತ್ ಬಳಿಕ ಬಾಲಿವುಡ್​ನಲ್ಲೂ ಶ್ರೀಲೀಲಾಗೆ ಸಿಗುತ್ತಿದೆ ಸ್ಟಾರ್ ನಟಿ ಪಟ್ಟ

ಸುರ್ವೀನ್ 2003 ರಲ್ಲಿ ‘ಕಹಿನ್ ತೋ ಹೋಗಾ’ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಅವರು ‘ಕಸೌತಿ ಜಿಂದಗಿ ಕಿ’, ‘ಕಾಜಲ್’ ಮತ್ತು ’24’ ನಂತಹ ಧಾರಾವಾಹಿಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2008ರ ಬಳಿಕ ಸಿನಿಮಾದಲ್ಲಿ ಬ್ಯುಸಿ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌