‘ಡರ್ಟಿ ಪಿಕ್ಚರ್ 2’ನಲ್ಲಿ ನಟಿಸಲಿದ್ದಾರೆ ತಮನ್ನಾ ಭಾಟಿಯಾ?
ಇತ್ತೀಚೆಗೆ ತಮನ್ನಾ ಭಾಟಿಯಾ ಹೆಚ್ಚು ಗ್ಲಾಮರಸ್ ಆದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಹೆಚ್ಚು-ಹೆಚ್ಚು ಐಟಂ ಹಾಡುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ತಮನ್ನಾ ಭಾಟಿಯಾ, ಹಿಂದಿಯ ಐಕಾನಿಕ್ ಸಿನಿಮಾ ಒಂದರ ಸೀಕ್ವೆಲ್ನಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾವುದು ಆ ಐಕಾನಿಕ್, ಕಲ್ಟ್ ಕ್ಲಾಸಿಕ್ ಸಿನಿಮಾ? ಇಲ್ಲಿದೆ ಮಾಹಿತಿ...

ತಮನ್ನಾ ಭಾಟಿಯಾ, ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಎರಡು ದಶಕದ ಬಳಿಕ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗಲೂ ಸಹ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಆದರೆ ಇತ್ತೀಚೆಗೆ ತಮನ್ನಾ ಭಾಟಿಯಾ ಹೆಚ್ಚು ಗ್ಲಾಮರಸ್ ಆದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಹೆಚ್ಚು-ಹೆಚ್ಚು ಐಟಂ ಹಾಡುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ತಮನ್ನಾ ಭಾಟಿಯಾ, ಹಿಂದಿಯ ಐಕಾನಿಕ್ ಸಿನಿಮಾ ಒಂದರ ಸೀಕ್ವೆಲ್ನಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
2011 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ಹಿಂದಿಯ ‘ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವೆಲ್ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. 2011ರ ‘ಡರ್ಟಿ ಪಿಕ್ಚರ್’ ಸಿನಿಮಾನಲ್ಲಿ ವಿದ್ಯಾ ಬಾಲನ್ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಸಿನಿಮಾನಲ್ಲಿ ವಿದ್ಯಾ ಬಾಲನ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ವಿದ್ಯಾ ಬಾಲನ್ ಮಾತ್ರವೇ ಅಲ್ಲದೆ ನಸಿರುದ್ಧೀನ್ ಶಾ, ಇಮ್ರಾನ್ ಹಾಶ್ಮಿ, ತುಷಾರ್ ಕಪೂರ್ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ನಟಿಸಿದ್ದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ಕಂಡಿದ್ದು ಮಾತ್ರವೇ ಅಲ್ಲದೆ ವಿಮರ್ಶಕರಿಂದಲೂ ಭರಪೂರ ಮೆಚ್ಚುಗೆ ಗಳಿಸಿಕೊಂಡಿತ್ತು. ವಿದ್ಯಾ ಬಾಲನ್ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರಾದರೂ ಸಿನಿಮಾನಲ್ಲಿ ಅವರ ನಟನೆಗೆ ಹಾಗೂ ಸಿನಿಮಾದಲ್ಲಿನ ಭಾವುಕ ಅಂಶಗಳ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.
ಇದನ್ನೂ ಓದಿ:ನಿಂತು ಹೋಯ್ತೆ ತಮನ್ನಾ ಭಾಟಿಯಾ ಸಿನಿಮಾ? ‘ವಿ ಶಾಂತಾರಾಮ್’ ಕತೆ ಏನಾಯ್ತು?
ಆ ಕಲ್ಟ್ ಸಿನಿಮಾದ ಸೀಕ್ವೆಲ್ಗೆ ಯೋಜನೆ ಸಿದ್ದಗೊಂಡಿದ್ದು, ಈ ಬಾರಿಯೂ ಸಹ ನಾಯಕಿಯ ಪಾತ್ರ ಗ್ಲಾಮರಸ್ ಆಗಿಯೇ ಮೂಡಿ ಬರಲಿದ್ದು ಇದೇ ಕಾರಣಕ್ಕೆ ತಮನ್ನಾ ಭಾಟಿಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ‘ದಿ ಡರ್ಟಿ ಪಿಕ್ಚರ್’ ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್ ಅವರೇ ಸಿನಿಮಾದ ಸೀಕ್ವೆಲ್ ಸಹ ನಿರ್ಮಾಣ ಮಾಡಲಿದ್ದು, ಈ ಬಗ್ಗೆ ಖುದ್ದು ಅವರೇ ಮಾಹಿತಿ ಹಂಚಿಕೊಂಡಿದ್ದರು.
‘ದಿ ಡರ್ಟಿ ಪಿಕ್ಚರ್ 2’ ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲಿಗೆ ತೃಪ್ತಿ ದಿಮ್ರಿ ಹೆಸರು ಕೇಳಿ ಬಂದಿತ್ತು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ತಮನ್ನಾ ಭಾಟಿಯಾ ಅವರೇ ಸಿನಿಮಾದ ನಾಯಕಿ ಎನ್ನಲಾಗುತ್ತಿದ್ದು ಅವರೊಟ್ಟಿಗೆ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ಸಹ ಸಿನಿಮಾನಲ್ಲಿ ಇರಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Tue, 13 October 26




