ಐಪಿಎಲ್ ಅಬ್ಬರಕ್ಕೆ ಕನ್ನಡ ಧಾರಾವಾಹಿಗಳು ತತ್ತರ; ಟಿಆರ್ಪಿಯಲ್ಲಿ ಕುಸಿತ
ಐಪಿಎಲ್‌ನಿಂದಾಗಿ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಗಣನೀಯವಾಗಿ ಕುಸಿದಿದೆ. ಪ್ರಮುಖ ಧಾರಾವಾಹಿಗಳ ಪ್ರಸಾರ ಸಮಯ ಐಪಿಎಲ್ ಪಂದ್ಯಗಳೊಂದಿಗೆ ಘರ್ಷಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಶ್ರಾವಣಿ ಸುಬ್ರಹ್ಮಣ್ಯ, ನಾ ನಿನ್ನ ಬಿಡಲಾರೆ, ಲಕ್ಷ್ಮೀ ನಿವಾಸ ಮುಂತಾದ ಧಾರಾವಾಹಿಗಳು ಉನ್ನತ ಸ್ಥಾನಗಳಲ್ಲಿದ್ದರೂ, ಒಟ್ಟಾರೆ ಟಿಆರ್‌ಪಿ ಕಡಿಮೆಯಾಗಿದೆ.

ಧಾರಾವಾಹಿಗಳ ಟಿಆರ್ಪಿಯ (TRP) ಮೇಲೆ ಸಾಕಷ್ಟು ವಿಚಾರಗಳು ಪ್ರಭಾವ ಬೀರುತ್ತವೆ. ಈಗ ಐಪಿಎಲ್ ಮೇನಿಯಾ. ಹೀಗಾಗಿ, ಧಾರಾವಾಹಿಗಳ ಟಿಆರ್ಪಿಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಪ್ರತಿನಿತ್ಯ ಸಂಜೆ 7 ಗಂಟೆಗೆ ಐಪಿಎಲ್ ಮ್ಯಾಚ್ನ ಟಾಸ್ ನಡೆಯುತ್ತದೆ. 7.30ಕ್ಕೆ ಪಂದ್ಯ ಆರಂಭ. ಬಹುತೇಕ ಪ್ರಮುಖ ಧಾರಾವಾಹಿಗಳು ಪ್ರಸಾರ ಆರಂಭಿಸೋದೆ 7 ಗಂಟೆ ಬಳಿಕ. ಈಗ ಐಪಿಎಲ್ ಕಾರಣದಿಂದ ಧಾರಾವಾಹಿಗಳ ಟಿಆರ್ಪಿಗೆ ಸಾಕಷ್ಟು ಹೊಡೆತ ಕೊಟ್ಟಿದೆ.
ಈ ಮೊದಲು ಕೆಲವು ಧಾರಾವಾಹಿಗಳು 10 ಟಿವಿಆರ್ ದಾಟಿದ ಉದಾಹರಣೆ ಇದೆ. ಆದರೆ, ಈಗ ಹಾಗಿಲ್ಲ. ಅನೇಕರು ಐಪಿಎಲ್ ವೀಕ್ಷಿಸುತ್ತಿರೋ ಹಿನ್ನೆಲೆಯಲ್ಲಿ ಧಾರಾವಾಹಿಗಳ ಟಿಆರ್‌ಪಿ ಕುಸಿದೇ ಹೋಗಿದೆ. ಈ ಬಾರಿ 7.3 ಟಿವಿಆರ್ ಗರಿಷ್ಠ ಎನಿಸಿಕೊಂಡಿದೆ. ಇದಕ್ಕೆ ಐಪಿಎಲ್ ನೇರ ಕಾರಣ ಎಂಬ ಮಾತುಗಳು ವ್ಯಕ್ತವಾಗಿದೆ.
ಈ ಬಾರಿ ಮೊದಲ ಸ್ಥಾನದಲ್ಲಿ ಜೀ ಕನ್ನಡದ ‘ಶ್ರಾವಣಿ ಸುಬ್ರಹ್ಮಣ್ಯ’ ದಾರಾವಾಹಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್‌ಪಿ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಟಾಪ್ ಐದರಲ್ಲಿ ಯಾವುದೇ ಕಲರ್ಸ್ನ ಧಾರಾವಾಹಿಗಳು ಸ್ಥಾನ ಪಡೆದಿಲ್ಲ.
ಇನ್ನು, ಹೊಸದಾಗಿ ಆರಂಭ ಆದ ‘ಮುದ್ದು ಸೊಸೆ’ ಧಾರಾವಾಹಿ ಆರನೇ ಸ್ಥಾನ ಪಡೆದಿದೆ. ಈ ಧಾರಾವಾಹಿಗೆ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಂ ಹೀರೋ. ಧಾರಾವಾಹಿ ಆರಂಭ ಆಗಿ ಕೆಲವೇ ದಿನಗಳು ಕಳೆದಿರುವುದರಿಂದ ಇದಕ್ಕೆ ಉತ್ತಮ ಟಿಆರ್‌ಪಿ ಸಿಕ್ಕಿದೆ. ಮುಂದಿನ ದಿನಗಳಲ್ಲೂ ಈ ಧಾರಾವಾಹಿ ಇಷ್ಟೇ ಬೇಡಿಕೆ ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಉತ್ತಮ ಟಿಆರ್‌ಪಿ ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್ನ ಟಾಪ್ 1 ಧಾರಾವಾಹಿ?
ಐಪಿಎಲ್ ಪಂದ್ಯಗಳು ಮೇ ಕೊನೆಯವರೆಗೂ ಇರಲಿದೆ. ಅಲ್ಲಿಯವರೆಗೂ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದೆ. ಆ ಬಳಿಕ ಧಾರಾವಾಹಿಗಳ ಟಿಆರ್‌ಪಿ ಹೆಚ್ಚೋ ನಿರೀಕ್ಷೆ ಇದೆ. ಇನ್ನು, ಐಪಿಎಲ್ ಎಂಬ ಕಾರಣದಿಂದಲೇ ಅನೇಕರು ಸಿನಿಮಾಗಳನ್ನು ರಿಲೀಸ್ ಮಾಡಲು ಮುಂದೆ ಬರುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.