ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿದ ಮೌನ ಗುಡ್ಡೇಮನೆ; ಯಾವುದು ಈ ಸಿನಿಮಾ?
ಕಿರುತೆರೆ ನಟಿ ಮೌನ ಗುಡ್ಡೇಮನೆ ತಮ್ಮ ಟ್ರೆಡಿಷನಲ್ ಇಮೇಜ್ ಮೀರಿ 'ಲವ್ ಪಂಚ್' ಎಂಬ ಮೈಕ್ರೋ ಸರಣಿಯಲ್ಲಿ ಅನಿರೀಕ್ಷಿತ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಮಾಚಾರಿ' ಹಾಗೂ 'ಕೃಷ್ಣ ರುಕ್ಕು' ಧಾರಾವಾಹಿಗಳಲ್ಲಿ ಸಾದಾ ಸೀದಾ ಪಾತ್ರಗಳಲ್ಲಿ ಕಂಡಿದ್ದ ಮೌನ, ಈ ಹೊಸ ಸರಣಿಯ ವೈರಲ್ ಕ್ಲಿಪ್‌ಗಳಿಂದ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಶರತ್ ಪದ್ಮನಾಭ್ ಜೊತೆಗಿನ ಅವರ ಹೊಸ ಕೆಮಿಸ್ಟ್ರಿ ಈಗ ಸದ್ದು ಮಾಡುತ್ತಿದೆ.

ಬಹುತೇಕ ಕಿರುತೆರೆ ನಟಿಯರು ತೆರೆಮೇಲೆ ಹೆಚ್ಚು ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ತೆರೆಯ ಹಿಂದೆ ಅಥವಾ ಬೇರೆ ಸಿನಿಮಾಗಳಲ್ಲಿ ಅವರು ಹಾಗೆಯೇ ಕಾಣಿಸಿಕೊಳ್ಳಬೇಕು ಎಂಬ ಯಾವುದೇ ಕಂಡೀಷನ್ ಇಲ್ಲ. ಈಗ ಮೌನ ಗುಡ್ಡೇಮನೆ ವಿಷಯದಲ್ಲಿ ಹೀಗೆಯೇ ಆಗಿದೆ. ಕಿರುತೆರೆಯಲ್ಲಿ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋ ಅವರು, ಮೈಕ್ರೋ ಸರಣಿಗಾಗಿ ಬೋಲ್ಡ್ ಅವತಾರ ತಾಳಿದ್ದಾರೆ. ‘ಲವ್ ಪಂಚ್’ ಹೆಸರಿನ ಮೈಕ್ರೋ ಸರಣಿ ಮಾಡಿದ್ದಾರೆ. ಈ ಸರಣಿಯ ಕ್ಲಿಪ್ಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಫ್ಯಾನ್ಸ್ ಆಶ್ಚರ್ಯಚಕಿತರಾಗಿದ್ದಾರೆ.
ಮೌನ ಗುಡ್ಡೇಮನೆ ಅವರು ಈ ಮೊದಲು ‘ರಾಮಾಚಾರಿ’ ಹೆಸರಿನ ಧಾರಾವಾಹಿ ಮಾಡಿ ಗಮನ ಸೆಳೆದಿದ್ದರು. ಈ ಧಾರಾವಾಹಿಯಲ್ಲಿ ಚಾರುಲತಾ ಹೆಸರಿನ ಪಾತ್ರ ಮಾಡಿದ್ದರು. ಈ ಸೀರಿಯಲ್ ಗಮನ ಸೆಳೆಯಲು ಅವರ ಕೊಡುಗೆಯೂ ಹೆಚ್ಚಿದೆ. ಈಗ ‘ಕೃಷ್ಣ ರುಕ್ಕು’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಹೀಗಿರುವಾಗಲೇ ಅವರ ಹೊಸ ಸರಣಿ ಸದ್ದು ಮಾಡುತ್ತಿದೆ.
View this post on Instagram
‘ಪಾರು’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ಶರತ್ ಪದ್ಮನಾಭ್ ಈ ಸರಣಿಗೆ ಹೀರೋ. ಅವರು ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗ ಮೌನ ಹಾಗೂ ಶರತ್ ಅವರ ಬೋಲ್ಡ್ ಕೆಮಿಸ್ಟ್ರಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಬುಲೆಟ್ ಮೈಕ್ರೋ ಡ್ರಾಮಾದಲ್ಲಿ ‘ಲವ್ ಪಂಚ್’ ಹೆಸರಿನ ಸರಣಿಯ ಟ್ರೇಲರ್ ತೆರೆಗೆ ಬಂದಿದೆ. ಇದೊಂದು ಕಾಲೇಜ್ ಲವ್ ಸ್ಟೋರಿ. ಆರಂಭದಲ್ಲಿ ಕಿತ್ತಾಡಿಕೊಳ್ಳೋ ಇವರು ನಂತರ ಒಂದಾಗುತ್ತಾರೆ. ಪ್ರೀತಿ ಮೂಡುತ್ತದೆ. ಆದರೆ, ಕೊನೆಯಲ್ಲಿ ಒಂದು ಟ್ವಿಸ್ಟ್ ಕೂಡ ಇದೆ. ಇಷ್ಟು ವಿಷಯಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





