AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ನನ್ನ ಕೆಲಸವಲ್ಲ’; ಬಿಗ್ ಬಾಸ್ ಸೆಟ್​​ನಲ್ಲೇ ಸಲ್ಮಾನ್ ಖಾನ್ ಗರಂ

ಬಿಗ್ ಬಾಸ್ ಸೀಸನ್ 20ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಫೋಟೋಗ್ರಾಫರ್‌ಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೌಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡ ಸಲ್ಲು ತಮ್ಮಿಂದ ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ಕ್ಯಾಮೆರಾಮೆನ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 6ರಿಂದ ಬಿಗ್ ಬಾಸ್ ಪ್ರಸಾರ ಆರಂಭವಾಗಲಿದೆ.

‘ಇದು ನನ್ನ ಕೆಲಸವಲ್ಲ’; ಬಿಗ್ ಬಾಸ್ ಸೆಟ್​​ನಲ್ಲೇ ಸಲ್ಮಾನ್ ಖಾನ್ ಗರಂ
ಸಲ್ಮಾನ್
ರಾಜೇಶ್ ದುಗ್ಗುಮನೆ
|

Updated on:Sep 05, 2026 | 8:46 AM

Share

ಮುಖ್ಯಾಂಶಗಳು

  • ಸೆಪ್ಟೆಂಬರ್ 6ರಿಂದ ಬಿಗ್ ಬಾಸ್ ಹಬ್ಬ
  • ಪ್ರಾಪರ್ ಡಿಸ್ಟೆನ್ಸ್ ಇಡದ ಪಪಾರಾಜಿಗಳ ವಿರುದ್ಧ ಸಲ್ಲು ಗರಂ!
  • ಕೌಬಾಯ್ ಗೆಟಪ್‌ನಲ್ಲಿ ಸಲ್ಮಾನ್ ಧಮಾಕಾ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ವಾರಾಂತ್ಯದಲ್ಲಿ ಆರಂಭವಾಗಲಿರುವ ಬಿಗ್ ಬಾಸ್ ಸೀಸನ್ 20ರ ಶೂಟಿಂಗ್ ಹಂತದಲ್ಲೇ ಸಲ್ಲು ಭಾರಿ ಸುದ್ದಿಯಾಗಿದ್ದಾರೆ. ತಮ್ಮ ವಿಶಿಷ್ಟ ಕೌಬಾಯ್ ಲುಕ್ ಮೂಲಕ ಅವರು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಅವರ ಕೋಪವೂ ಈಗ ಚರ್ಚೆಯ ಕೇಂದ್ರಬಿಂದು ಆಗಿದೆ.

ಗ್ರ್ಯಾಂಡ್ ಪ್ರಿಮಿಯರ್ ಆರಂಭಕ್ಕೂ ಮುನ್ನ ಮಾಧ್ಯಮದವರನ್ನು ಬಿಗ್ ಬಾಸ್ ಸೆಟ್​ ಒಳಗೆ ಬಿಟ್ಟುಕೊಳ್ಳಲಾಯಿತು. ಕ್ಯಾಮೆರಾಮೆನ್‌ಗಳು ವೇದಿಕೆಯ ಹತ್ತಿರಕ್ಕೆ ಬಂದು ಗೊಂದಲ ಸೃಷ್ಟಿಸಿದರು. ಈ ವೇಳೆ ಸಲ್ಲು ಫೋಟೋಗ್ರಾಫರ್‌ಗಳ ವಿರುದ್ಧ ತುಸು ಅಸಮಾಧಾನಗೊಂಡರು. ಬಳಿಕ ಕೆರಳಿದ ಸಲ್ಮಾನ್ ಖಾನ್, ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಸೂಚನೆ ನೀಡಿದರು.

‘ಇದು ನನ್ನ ಕೆಲಸವಲ್ಲ. ಕ್ಯಾಮೆರಾ ಮುಂದೆ ಬಂದು ನಿಲ್ಲುವ ಅಗತ್ಯ ನನಗೆ ಖಂಡಿತ ಇಲ್ಲ’ ಎಂದು ಅವರು ಗರಂ ಆದರು. ನಂತರ ಮತ್ತೆ ಫೋಟೋ ನೀಡುವಂತೆ ಕೇಳಿದಾಗ ಸಲ್ಲು ಕಿರಿಕಿರಿಗೊಳಗಾದರು. ಪ್ರಾಪರ್ ಡಿಸ್ಟೆನ್ಸ್ ಕಾಯ್ದುಕೊಳ್ಳುವಂತೆ ಅವರು ಕಟ್ಟುನಿಟ್ಟಾಗಿ ಹೇಳಿದರು.

ಸಲ್ಮಾನ್ ಕೌಬಾಯ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಡಾರ್ಕ್ ಬ್ರೌನ್ ಲೆದರ್ ಹ್ಯಾಟ್ ಧರಿಸಿದ್ದ ಅವರು, ಅದಕ್ಕೆ ಮ್ಯಾಚ್ ಆಗುವಂತೆ ಬೆಳ್ಳಿ ಬಕಲ್ ಇರುವ ಬೆಲ್ಟ್ ಹಾಕಿದ್ದಾರೆ. ಕೈಯಲ್ಲಿ ಅವರ ಸಿಗ್ನೇಚರ್ ಟರ್ಕೋಯಿಶ್ ಬ್ರೇಸ್‌ಲೆಟ್ ಇತ್ತು. ಈ ಬಾರಿ ಹಿಂದಿ ಬಿಗ್ ಬಾಸ್​​ನಲ್ಲಿ ಯಾವ ಥೀಮ್ ಇರಲಿದೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇ ನೋಡಿ; ವಿಡಿಯೋದಲ್ಲೇ ರಿವೀಲ್

ಬಿಗ್ ಬಾಸ್ ಸೀಸನ್ 20 ಸೆಪ್ಟೆಂಬರ್ 6ರಂದು ಕಲರ್ಸ್ ಟಿವಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಇದರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆವೃತ್ತಿಗಳು ಒಂದೇ ದಿನ ಆರಂಭವಾಗಲಿವೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ಮಲಯಾಳಂನಲ್ಲಿ ಮೋಹನ್​ಲಾಲ್ ಅವರು ಶೋನ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:46 am, Sat, 5 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್