AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕೇರಳ ಸ್ಟೋರಿ’ ಬಗ್ಗೆ ಮಲಯಾಳಂ ಸ್ಟಾರ್ ನಟ ಟೊವಿನೊ ಥಾಮಸ್ ಹೇಳಿದ್ದೇನು?

The Kerala story 2: ‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗಕ್ಕೆ ಬಂದಷ್ಟು ವಿರೋಧ ವಿಶೇಷವಾಗಿ ಕೇರಳದಿಂದ ಈ ಬಾರಿ ವ್ಯಕ್ತವಾಗಲಿಲ್ಲ. ಮೊದಲ ಭಾಗ ಬಿಡುಗಡೆ ಆಗುವಾಗ ಖುದ್ದು ಸರ್ಕಾರವೇ ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತ್ತು. ಕೆಲವಾರು ಸೆಲೆಬ್ರಿಟಿಗಳು ಸಹ ಸಿನಿಮಾದ ವಿರುದ್ಧ ಮಾತನಾಡಿದ್ದರು. ಆದರೆ ಈ ಬಾರಿ ಅಂಥಹದ್ದೇನೂ ಹೆಚ್ಚಿಗೆ ಕಂಡು ಬರಲಿಲ್ಲ. ಮಲಯಾಳಂನ ಸ್ಟಾರ್ ನಟರುಗಳಲ್ಲಿ ಒಬ್ಬರಾದ ಟೊವಿನೊ ಥಾಮಸ್ ಈ ಬಗ್ಗೆ ಮಾತನಾಡಿದ್ದಾರೆ.

‘ದಿ ಕೇರಳ ಸ್ಟೋರಿ’ ಬಗ್ಗೆ ಮಲಯಾಳಂ ಸ್ಟಾರ್ ನಟ ಟೊವಿನೊ ಥಾಮಸ್ ಹೇಳಿದ್ದೇನು?
Tovino Thomas
ಮಂಜುನಾಥ ಸಿ.
|

Updated on: Apr 03, 2026 | 4:09 PM

Share

ಇತ್ತೀಚೆಗಷ್ಟೆ ‘ದಿ ಕೇರಳ ಸ್ಟೋರಿ 2’ (The Kerala story 2) ಸಿನಿಮಾ ಬಿಡುಗಡೆ ಆಯ್ತು. ಮೊದಲ ಭಾಗದಷ್ಟು ದೊಡ್ಡ ಹಿಟ್ ಆಗದಿದ್ದರೂ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಸೋಲನ್ನೇನೂ ಕಾಣಲಿಲ್ಲ. ಆದರೆ ಸಿನಿಮಾದ ಮೊದಲ ಭಾಗಕ್ಕೆ ಬಂದಷ್ಟು ವಿರೋಧ ವಿಶೇಷವಾಗಿ ಕೇರಳದಿಂದ ಈ ಬಾರಿ ವ್ಯಕ್ತವಾಗಲಿಲ್ಲ. ಮೊದಲ ಭಾಗ ಬಿಡುಗಡೆ ಆಗುವಾಗ ಖುದ್ದು ಸರ್ಕಾರವೇ ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತ್ತು. ಕೆಲವಾರು ಸೆಲೆಬ್ರಿಟಿಗಳು ಸಹ ಸಿನಿಮಾದ ವಿರುದ್ಧ ಮಾತನಾಡಿದ್ದರು. ಆದರೆ ಈ ಬಾರಿ ಅಂಥಹದ್ದೇನೂ ಹೆಚ್ಚಿಗೆ ಕಂಡು ಬರಲಿಲ್ಲ. ಮಲಯಾಳಂನ ಸ್ಟಾರ್ ನಟರುಗಳಲ್ಲಿ ಒಬ್ಬರಾದ ಟೊವಿನೊ ಥಾಮಸ್ ಈ ಬಗ್ಗೆ ಮಾತನಾಡಿದ್ದಾರೆ.

ಟೊವಿನೊ ಥಾಮಸ್ ಅವರು ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಗ್ಗೆ ಪ್ರಶ್ನೆ ಎದುರಾಗಿದೆ. ನೀವೇಕೆ ಸಿನಿಮಾದ ವಿರುದ್ಧ ಮಾತನಾಡಲಿಲ್ಲ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವ ಸಂದೇಶವನ್ನೂ ಸಹ ಹಂಚಿಕೊಂಡಿಲ್ಲ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಜಾಣತನದ ಉತ್ತರವನ್ನು ಟೊವಿನೋ ಥಾಮಸ್ ನೀಡಿದ್ದಾರೆ ಅಲ್ಲದೆ, ಆ ಸಿನಿಮಾದ ಬಗ್ಗೆ ತಮ್ಮ ಸ್ಪಷ್ಟ ನಿಲವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

‘ನಾನು ‘ಕೇರಳ ಸ್ಟೋರಿ’ ಮೊದಲ ಭಾಗ ನೋಡಿದೆ. ಎರಡನೇ ಭಾಗ ನಾನು ನೋಡಿಲ್ಲ. ನಾನು ಮಾತ್ರವಲ್ಲ ಕೇರಳದಲ್ಲಿ ಯಾರೂ ನೋಡಿದಂತಿಲ್ಲ. ಸುಮ್ಮನೆ ಮಾತನಾಡಿ, ಅದಕ್ಕೆ ಪ್ರಚಾರ ನೀಡುವ ಬದಲಿಗೆ ಸುಮ್ಮನಿರುವುದು ಒಳ್ಳೆಯದು ಎನಿಸಿ ನಾನು ಆ ಸಿನಿಮಾದ ಬಗ್ಗೆ ಏನೂ ಮಾತನಾಡಲಿಲ್ಲ. ಪೋಸ್ಟ್ ಸಹ ಮಾಡಲಿಲ್ಲ. ನಾವು ಅದನ್ನು ವಿರೋಧಿಸಿದ್ದರೂ ಸಹ ಅದಕ್ಕೆ ಪ್ರಚಾರ ನೀಡಿದಂತಾಗುತ್ತಿತ್ತು’ ಎಂದಿದ್ದಾರೆ ಟೊವಿನೊ ಥಾಮಸ್.

‘ಮೊದಲ ಭಾಗ ಬಿಡುಗಡೆ ಆದಾಗ ನಾನು ಅದನ್ನು ವಿರೋಧಿಸಿ ಪೋಸ್ಟ್ ಹಾಕಿದ್ದೆ, ಅದು ಒಂದು ರೀತಿಯಲ್ಲಿ ಆ ಸಿನಿಮಾಕ್ಕೆ ಪ್ರಚಾರವೇ ಆಗಿಬಿಟ್ಟಿತು. ಅದನ್ನು ಗಮನಿಸಿದ್ದೆ ಹಾಗಾಗಿ ಈ ಬಾರಿ ಹಾಗೇನೂ ಮಾಡಲಿಲ್ಲ. ಕೇರಳದಲ್ಲಿ ಕೋಟ್ಯಂತರ ಮಂದಿ ಮಹಿಳೆಯರಿದ್ದಾರೆ. ಯಾವುದೋ 3 ಘಟನೆಗಳನ್ನು ಇರಿಸಿಕೊಂಡು ಇಡೀ ಕೇರಳದಲ್ಲಿ ಇಂಥಹುದ್ದೇ ನಡೆಯುತ್ತಿದೆ ಎಂದು ಬಿಂಬಿಸುವುದು ಕೆಟ್ಟದು. ಅದು ಸರಿಯಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ