ಇಲಿಯಾನಾ ದಕ್ಷಿಣ ಭಾರತ ಚಿತ್ರರಂಗದಿಂದ ಬ್ಯಾನ್ ಆಗಿದ್ದೇಕೆ? ರಹಸ್ಯ ಬಿಚ್ಚಿಟ್ಟ ನಿರ್ಮಾಪಕ
Ileana D'Cruz: ಇಲಿಯಾನಾ ಡಿಕ್ರೂಜ್ ಅವರ ಸಪೂರ ದೇಹ, ಕೋಲು ಮುಖ, ಒಳ್ಳೆಯ ನಟನೆ ಅವರಿಗೆ ಸಾಕಷ್ಟು ಅಭಿಮಾನಿಗಳು ಮತ್ತು ಅವಕಾಶಗಳನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಇಲಿಯಾನಾ ಡಿ ಕ್ರೂಜ್, ಇದ್ದಕ್ಕಿಂತಲೇ ತೆಲುಗು ಚಿತ್ರರಂಗದಿಂದ ಮರೆಯಾದರು. ಇದಕ್ಕೆ ಕಾರಣ ಏನೆಂದು ಇದೀಗ ನಿರ್ಮಾಪಕರೊಬ್ಬರು ಹೆಳಿದ್ದಾರೆ.

ಇಲಿಯಾನ ಡಿ ಕ್ರೂಜ್ (ileana d’cruz) , ಒಂದು ಸಮಯದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದರು, ತೆಲುಗಿನ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದರು. ಅವರ ಸಪೂರ ದೇಹ, ಕೋಲು ಮುಖ, ಒಳ್ಳೆಯ ನಟನೆ ಅವರಿಗೆ ಸಾಕಷ್ಟು ಅಭಿಮಾನಿಗಳು ಮತ್ತು ಅವಕಾಶಗಳನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಇಲಿಯಾನಾ ಡಿ ಕ್ರೂಜ್, ಇದ್ದಕ್ಕಿಂತಲೇ ತೆಲುಗು ಚಿತ್ರರಂಗದಿಂದ ಮರೆಯಾದರು. ಇದಕ್ಕೆ ಕಾರಣ ಏನೆಂದು ಇದೀಗ ನಿರ್ಮಾಪಕರೊಬ್ಬರು ಹೆಳಿದ್ದಾರೆ.
ಇಲಿಯಾನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ತೆಲುಗಿನ ‘ದೇವದಾಸು’ ಚಿತ್ರದ ಮೂಲಕ. ‘ಪೋಕಿರಿ’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಯುವಕರ ಮನಗೆದ್ದ ಇಲಿಯಾನಾ, ಮಹೇಶ್ ಬಾಬು, ಎನ್.ಟಿ.ಆರ್, ಪ್ರಭಾಸ್, ರವಿತೇಜ ಅಂತಹ ಸ್ಟಾರ್ ನಟರ ಜೊತೆ ನಟಿಸಿ ದಕ್ಷಿಣ ಭಾರತದಲ್ಲಿ ಭಾರಿ ಕ್ರೇಜ್ ಹೊಂದಿದ್ದರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರು ಸದ್ದಿಲ್ಲದೆ ಚಿತ್ರರಂಗದಿಂದ ದೂರವಾದರು. ಅಸಲಿಗೆ ಇಲಿಯಾನಾ ಬೇಕೆಂದೆ ತೆಲುಗು ಚಿತ್ರರಂಗ ಬಿಡಲಿಲ್ಲ, ಬದಲಿಗೆ ಬಿಸಿಲಾಯ್ತು. ನಿರ್ಮಾಪಕ ಕಟಗಡ್ಡ ಪ್ರಸಾದ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ನಿರ್ಮಾಪಕರ ಹೇಳಿರುವ ಪ್ರಕಾರ, ಇಲಿಯಾನಾ ತಮಿಳು ಸಿನಿಮಾದ ನಿರ್ಮಾಪಕರೊಬ್ಬರಿಂದ ಸುಮಾರು 40 ಲಕ್ಷ ರೂಪಾಯಿ ಹಣವನ್ನು ಮುಂಗಡ ಸಂಭಾವನೆಯಾಗಿ ಪಡೆದಿದ್ದರು. ಆದರೆ, ಆ ಚಿತ್ರದಲ್ಲಿ ನಟಿಸಲಿಲ್ಲ ಮತ್ತು ಪಡೆದ ಹಣವನ್ನೂ ಹಿಂತಿರುಗಿಸಲಿಲ್ಲ. ಈ ವಿಚಾರವಾಗಿ ಸಂಬಂಧಪಟ್ಟ ನಿರ್ಮಾಪಕರು ‘ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ದೂರು ನೀಡಿದ್ದರು. ತಾನು ಚಿತ್ರಕ್ಕಾಗಿ ಕಾಲ್‌ಶೀಟ್ ನೀಡಿದ್ದೆ ಎಂದು ಇಲಿಯಾನಾ ವಾದಿಸಿದ್ದರು. ಆದರೆ ನಿರ್ಮಾಪಕರು ಆ ದಿನಾಂಕಗಳನ್ನು ಬಳಸಿಕೊಳ್ಳದ ಕಾರಣ ಹಣ ಹಿಂತಿರುಗಿಸುವ ಅಗತ್ಯವಿಲ್ಲ ಎಂದು ಇಲಿಯಾನಾ ವಾದಿಸಿದರಂತೆ.
ಇದನ್ನೂ ಓದಿ:ಬಾಲಿವುಡ್ ನಟಿ ಸಾರಾಗೆ ಕೇದಾರನಾಥ, ಬದ್ರಿನಾಥ್ ದೇವಾಲಯಕ್ಕೆ ಪ್ರವೇಶವಿಲ್ಲ
ಚಲನಚಿತ್ರ ಮಂಡಳಿಯು ದಾಖಲೆಗಳನ್ನು ಪರಿಶೀಲಿಸಿದಾಗ, ಇಲಿಯಾನಾ ಅವರು ಆ ನಿರ್ದಿಷ್ಟ ದಿನಾಂಕಗಳಲ್ಲಿ ಬೇರೆ ಚಿತ್ರಗಳಿಗಾಗಿ ಕೆಲಸ ಮಾಡುತ್ತಿದ್ದರು ಎಂಬುದು ಸಾಬೀತಾಯಿತು. ಚಿತ್ರಕ್ಕಾಗಿ ಮೇಕಪ್ ಹಾಕಿಕೊಳ್ಳದಿದ್ದಲ್ಲಿ ಅಥವಾ ಶೂಟಿಂಗ್ ಸ್ಥಳಕ್ಕೆ ಬರದಿದ್ದಲ್ಲಿ ಮುಂಗಡ ಹಣವನ್ನು ಹಿಂತಿರುಗಿಸಬೇಕು ಎಂಬ ನಿಯಮದ ಅಡಿಯಲ್ಲಿ ಮಂಡಳಿಯು ಇಲಿಯಾನಾಗೆ ಸೂಚನೆ ನೀಡಿತು.
ಆ 40 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸುವವರೆಗೂ ದಕ್ಷಿಣ ಭಾರತದ ಯಾವುದೇ ಸಿನಿಮಾಗಳಲ್ಲಿ ನಟಿಸದಂತೆ ಅವರಿಗೆ ನಿಷೇಧ ಹೇರಲಾಯಿತು. ಈ ಹಣವನ್ನು ಪಾವತಿಸದ ಕಾರಣ ಇಲಿಯಾನಾ ದಕ್ಷಿಣದ ಚಿತ್ರರಂಗದಿಂದ ದೂರ ಉಳಿಯಬೇಕಾಯಿತು ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ವಿವಾದದ ನಂತರ ಅವರು ಬಾಲಿವುಡ್‌ನತ್ತ ಗಮನ ಹರಿಸಿದರು ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು.
2012 ರವರೆಗೆ ಇಲಿಯಾನಾ ಸತತವಾಗಿ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅದಾದ ಬಳಿಕ ಹಠಾತ್ತನೆ ಅವರು ಬಾಲಿವುಡ್ ಸಿನಿಮಾಗಳತ್ತ ಹೊರಳಿದರು. 2024ರ ಬಳಿಕ ಅವರು ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಟಿಸಿಲ್ಲ. 2023 ರಲ್ಲಿ ಮೈಖಲ್ ಡೋಲನ್ ಎಂಬುವರನ್ನು ವಿವಾಹವಾದ ಇಲಿಯಾನಾ, ಇಬ್ಬರು ಮಕ್ಕಳ ತಾಯಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




