Bladder Dock Chukkaku: ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!

ತೆಲುಗು ಭಾಷೆಯಲ್ಲಿ ಚುಕ್ಕಾಕು (Chukka Kura) ಎಂದು ಜನಜನಿತವಾಗಿರುವ ಹುಣಚಿಕ್ಕಿ ಪಲ್ಲೆ, ಚುಕ್ಕಿ ಸೊಪ್ಪು, ಹುಳಿ ಚಕೋತ ತರಕಾರಿಯ ಆರೋಗ್ಯ ಉಪಯೋಗಗಳನ್ನು ತಿಳಿದುಕೊಳ್ಳಿ.

Bladder Dock Chukkaku: ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!
ಚುಕ್ಕಾಕು ಅಥವಾ ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಜನಜನಿತವಾದ ತರಕಾರಿ ಸೊಪ್ಪಿನ ಮಹಿಮೆ ತಿಳಿದುಕೊಳ್ಳಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 28, 2022 | 6:06 AM

ಹುಣಚಿಕ್ಕಿ ಪಲ್ಲೆ, ಚುಕ್ಕಿ ಸೊಪ್ಪು, ಹುಳಿ ಚಕೋತ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸಲ್ಪಡುವ ಸಿಹಿ ಹುಳಿ ರುಚಿಯ ಈ ಸೊಪ್ಪಿಗೆ ಆಂಗ್ಲ ಭಾಷೆಯಲ್ಲಿ Rumex Vesicarius, Ruby dock, Bladder Dock annual herb, ಸಂಸ್ಕೃತ ಭಾಷೆಯಲ್ಲಿ ಚುಕ್ರಿಕಾ , ಶತವೇಧಿ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಚುಕ್ಕಾ ಭಾಜಿ , ಖಠ್ಠಾ ಪಾಲಕ, ಚುಕೇಕಿ ಭಾಜಿ, ಖಠ್ಠಾ ಮೀಠಾ ಮತ್ತು ತೆಲುಗು ಭಾಷೆಯಲ್ಲಿ ಚುಕ್ಕಾಕು (Chukka Kura) ಎಂದು ಜನಜನಿತವಾಗಿದೆ.

ಚುಕ್ಕಾಕು ತವ್ವೆ ರುಚಿಕಟ್ಟಾಗಿರುತ್ತದೆ… ಪಾಲಕ್ ನಂತೆ ಹಸಿರಿನಿಂದ ಕಂಗೊಳಿಸುವ, ವಿಶೇಷವಾದ ಸಿಹಿ ಹುಳಿ ರುಚಿ ಹೊಂದಿರುವ ಈ ಚುಕ್ಕಾಕು ಅಥವಾ ಹುಣಚಿಕ್ಕಿ ಸೊಪ್ಪು ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂವುಗಳನ್ನು ಹೊಂದಿದ್ದು ಇದರಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ಹುಣಚಿಕ್ಕಿ ಸೊಪ್ಪು ಹಾಕಿ ಮಾಡಿದ ಬೇಳೆ ಸಾರು ಉತ್ತಮ ರುಚಿ ನೀಡುತ್ತದೆ. ಚುಕ್ಕಾಕು ತವ್ವೆಯೂ ರುಚಿಕಟ್ಟಾಗಿರುತ್ತದೆ. ಮಾಂಸಾಹಾರ ಅಡುಗೆಗಳಲ್ಲಿ ಯಥೇಚ್ಛವಾಗಿ ಇದನ್ನು ಬಳಸುತ್ತಾರೆ. ಅತ್ಯಧಿಕ “ಎ” ಹಾಗೂ “ಸಿ” ವಿಟಮಿನ್ ಈ ಸೊಪ್ಪಿನಲ್ಲಿ ಇದೆ.

ಹುಳಿಚಿಕ್ಕಿಯ ಔಷಧೀಯ ಗುಣಗಳು:

  1. ತರಕಾರಿಯಾಗಿ ಬಳಸುವ ಈ ಹುಳಿ ಚಕೋತ ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಹಿಂದಿನಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿದೆ.
  2. ಸಂಧಿವಾತಕ್ಕೆ ಹುಣಚಿಕ್ಕಿ ಸೊಪ್ಪನ್ನು ಅರೆದು 30 ಎಂ ಎಲ್ ನಷ್ಟು ರಸವನ್ನು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.
  3. ಮೂಲವ್ಯಾಧಿ/ ರಕ್ತ ಮೂಲವ್ಯಾಧಿಗೆ ಈ ಸೊಪ್ಪಿನ ರಸಕ್ಕೆ ಮೊಸರು ಸೇರಿಸಿ ಸೇವಿಸಬೇಕು.
  4. ವಾಂತಿಯಾದಲ್ಲಿ 15 ಎಂ ಎಲ್ ನಷ್ಟು ಸೊಪ್ಪಿನ ರಸಕ್ಕೆ ಮಜ್ಜಿಗೆ ಬೆರೆಸಿ ಕುಡಿಯಬೇಕು.
  5. ರಕ್ತ ಭೇದಿಗೆ ಇದರ ಬೀಜಗಳನ್ನು ಹುರಿದು ಎರಡರಿಂದ ಮೂರು ಗ್ರಾಂ ನಷ್ಟು ಚೂರ್ಣವನ್ನು ಸೇವನೆ ಮಾಡಬಹುದು.
  6. ಕಾಮಾಲೆಗೆ ಹುಣಚಿಕ್ಕಿ ಪಲ್ಲೆ ರಸ ಉಪಯುಕ್ತವಾಗಿದೆ.
  7. ಇದರ ಸೊಪ್ಪಿನ ರಸ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ.
  8. ಚೇಳು ಕಚ್ಚಿದಾಗ ಇದರ ಬೀಜಗಳನ್ನು ಹುರಿದು ಅರೆದು ಲೇಪಿಸಬೇಕು. (ಸಂಗ್ರಹ ಮಾಹಿತಿ ಲೇಖನ: ಎಸ್​ ಹೆಚ್​ ನದಾಫ್)

Also Read:

KUWSDB: ದೂರ ಶಿಕ್ಷಣದ ಪದವಿ ಕಾರಣಕ್ಕೆ 5 ವರ್ಷ ಸೇವೆ ಸಲ್ಲಿಸಿದ ಬಳಿಕ, ಸರ್ಕಾರಿ ನೌಕರಿ ಕಳೆದುಕೊಂಡ ಎಂಜಿನಿಯರ್! ಮತ್ತೆ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ

ಆರೋಗ್ಯ ಕುರಿತಾದ ಹೆಚ್ಚಿನ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ