AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುರುಳಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆಯೇ? ಈ ಕಾಳಿನ ಆರೋಗ್ಯ ಪ್ರಯೋಜನಗಳೇನು?

ಹುರುಳಿ ಕಾಳು ಪ್ರೋಟೀನ್, ಫೈಬರ್ ಮತ್ತು ಹಲವು ಖನಿಜಗಳಿಂದ ಸಮೃದ್ಧವಾಗಿರುವ ಪೌಷ್ಟಿಕ ಆಹಾರ. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ, ತೂಕ ನಿರ್ವಹಣೆ ಹಾಗೂ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೆರವಾಗಬಹುದು. ಕೆಲವು ಆರೋಗ್ಯ ಸಮಸ್ಯೆಗೆ ಹುರುಳಿ ಔಷಧಿಯಲ್ಲದಿದ್ದರೂ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇದು ಯಾಕೆ ಮತ್ತು ಯಾರಿಗೆ ಒಳ್ಳೆಯದು ಎಂಬುದರ ಬಗೆಗಿನ ಮಾಹಿತಿ ಸ್ಟೋರಿಯಲ್ಲಿದೆ.

ಹುರುಳಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆಯೇ? ಈ ಕಾಳಿನ ಆರೋಗ್ಯ ಪ್ರಯೋಜನಗಳೇನು?
Horse Gram BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 30, 2026 | 3:54 PM

Share

ನೋಡಲು ಚಿಕ್ಕದಾಗಿದ್ದರೂ ಹುರುಳಿ (Horse Gram) ಕಾಳಿನಲ್ಲಿ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಸಮೃದ್ಧವಾಗಿದೆ. ಪ್ರೋಟೀನ್, ಆಹಾರದ ನಾರಿನಾಂಶ, ಖನಿಜಗಳು ಮತ್ತು ವಿವಿಧ ಸಸ್ಯ ಸಂಯುಕ್ತಗಳನ್ನು ಹೊಂದಿರುವ ಹುರುಳಿ ಸಾಂಪ್ರದಾಯಿಕವಾಗಿ ಭಾರತೀಯ ಆಹಾರ ಪದ್ಧತಿಯಲ್ಲಿ ಬಳಸಲಾಗುತ್ತಿದೆ. ಹುರುಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ, ಮೂಳೆಗಳು ಬಲವಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ ಇದು ಸತ್ಯವೇ, ಹುರುಳಿಯನ್ನು ಯಾವ ರೀತಿ ಸೇವನೆ ಮಾಡುವುದು ಒಳ್ಳೆಯದು ಮತ್ತು ಯಾರು ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹುರುಳಿಯಲ್ಲಿರುವ ಪೋಷಕಾಂಶಗಳು?

ಸಾಮಾನ್ಯವಾಗಿ ಹುರುಳಿ ಸಸ್ಯ ಆಧಾರಿತ ಪ್ರೋಟೀನ್ ಮತ್ತು ಆಹಾರದ ನಾರಿನಾಂಶವನ್ನು ಒದಗಿಸುವ ಕಾಳಾಗಿದೆ. ಇದರ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಪೊಟ್ಯಾಸಿಯಂ ಸೇರಿದಂತೆ ಹಲವು ಖನಿಜಗಳು ಮತ್ತು ವಿವಿಧ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ನೀಡಲು ಸಹಾಯ ಮಾಡಬಹುದು. ಹೀಗಾಗಿ ಸಮತೋಲಿತ ಆಹಾರದ ಭಾಗವಾಗಿ ಹುರುಳಿಯನ್ನು ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿಗೆ ಸಹಕಾರಿಯಾಗಬಹುದು.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಹುರುಳಿ ಸಹಾಯವಾಗುತ್ತದೆಯೇ?

ಹುರುಳಿನಲ್ಲಿರುವ ನಾರಿನಾಂಶ ಹಾಗೂ ಕೆಲವು ಸಸ್ಯ ಸಂಯುಕ್ತಗಳು ಹೃದಯದ ಆರೋಗ್ಯಕ್ಕೆ ಅನುಕೂಲಕರವಾಗಿರಬಹುದು. ಹೆಚ್ಚಿನ ಫೈಬರ್ ಇರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಒಟ್ಟಾರೆ ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡಬಹುದು. ಆದರೆ ಹುರುಳಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ಅಗತ್ಯವಿದ್ದರೆ ವೈದ್ಯರು ಸೂಚಿಸುವ ಔಷಧಿಗಳೂ ಕೂಡ ಮುಖ್ಯವಾಗುತ್ತದೆ.

ಡಯಾಬಿಟಿಸ್ ಇರುವವರು ಹುರುಳಿ ತಿನ್ನಬಹುದೇ?

ಹುರುಳಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ತ್ವರಿತವಾಗಿ ಏರಿಕೆಯಾಗುವುದನ್ನು ತಡೆಯುತ್ತದೆ. ಆದ್ದರಿಂದ ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಹುರುಳಿಯನ್ನು ಸೇರಿಸಿಕೊಳ್ಳಬಹುದು. ಆದರೆ ಹುರುಳಿ ಡಯಾಬಿಟಿಸ್‌ಗೆ ಔಷಧಿಯಲ್ಲ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ವೈದ್ಯರು ಸೂಚಿಸಿರುವ ಔಷಧಿ ಅಥವಾ ಇನ್ಸುಲಿನ್ ಅನ್ನು ನಿಲ್ಲಿಸಿ ಕೇವಲ ಹುರುಳಿನ ಮೇಲೆ ಅವಲಂಬನೆ ಅಪಾಯಕಾರಿ.

ಮೂಳೆಗಳ ಆರೋಗ್ಯಕ್ಕೆ ಹುರುಳಿ ಎಷ್ಟು ಉಪಯುಕ್ತ?

ಹುರುಳಿನಲ್ಲಿ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳು ಕಂಡುಬರುತ್ತವೆ. ಇವು ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳ ಭಾಗವಾಗಿವೆ. ಆದರೆ ಮೂಳೆ ನೋವು, ಮೊಣಕಾಲು ನೋವು ಅಥವಾ ನಡೆಯಲು ಕಷ್ಟವಿರುವವರು ಹುರುಳಿ ತಿಂದರೆ ಓಡಾಡಲು ಆರಂಭಿಸುತ್ತಾರೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಮೂಳೆಗಳ ಬಲಕ್ಕೆ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟೀನ್ ಮತ್ತು ನಿಯಮಿತ ವ್ಯಾಯಾಮ ಸೇರಿದಂತೆ ಹಲವು ಅಂಶಗಳು ಮುಖ್ಯ.

ತೂಕ ನಿಯಂತ್ರಣಕ್ಕೂ ಹುರುಳಿ ಸಹಾಯ ಮಾಡಬಹುದೇ?

ಹುರುಳಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುವುದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸವನ್ನು ನಿಯಂತ್ರಿಸಲು ನೆರವಾಗುವ ಸಾಧ್ಯತೆಯಿದೆ. ಆದರೆ ತೂಕ ಇಳಿಸಲು ಹುರುಳಿಯನ್ನು ಮಾತ್ರ ಸೇವಿಸುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಒಟ್ಟಾರೆ ಕ್ಯಾಲೊರಿ ಸೇವನೆ, ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಆಹಾರ ಬಹಳ ಮುಖ್ಯ.

ಮಹಿಳೆಯರಿಗೆ ಹುರುಳಿ ಉಪಯುಕ್ತವೇ?

ಹುರುಳಿ ಕಬ್ಬಿಣ, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಒದಗಿಸುವುದರಿಂದ ಮಹಿಳೆಯರ ಒಟ್ಟಾರೆ ಪೌಷ್ಟಿಕಾಂಶಕ್ಕೆ ಸಹಾಯ ಮಾಡಬಹುದು. ವಿಶೇಷವಾಗಿ ಸಮತೋಲಿತ ಆಹಾರದ ಭಾಗವಾಗಿ ಇದನ್ನು ಸೇರಿಸಿಕೊಳ್ಳಬಹುದು. ಆದರೆ ಮುಟ್ಟಿನ ನೋವು, ಹಾರ್ಮೋನ್ ಸಮಸ್ಯೆ ಅಥವಾ ಇತರ ಮಾಸಿಕ ಸಮಸ್ಯೆಗಳನ್ನು ಹುರುಳಿ ನಿವಾರಿಸುತ್ತದೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಹುರುಳಿಯನ್ನು ಹೇಗೆ ಸೇವಿಸಬಹುದು?

ಹುರುಳಿಯನ್ನು ಚೆನ್ನಾಗಿ ನೆನೆಸಿ ಬೇಯಿಸಿ ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಬಹುದು. ಹುರುಳಿ ಸಾರು, ಚಟ್ನಿ, ಹುರುಳಿ ಸಲಾಡ್ ಮತ್ತು ದೋಸೆ ಮಾಡಿ ಸವಿಯಬಹುದು.

ಯಾರು ಹುರುಳಿ ಸೇವಿಸುವಾಗ ಎಚ್ಚರಿಕೆ ವಹಿಸಬೇಕು?

ಹುರುಳಿ ಆರೋಗ್ಯಕರ ಆಹಾರದ ಭಾಗವಾಗಬಹುದಾದರೂ ಎಲ್ಲರಿಗೂ ಒಂದೇ ರೀತಿಯ ಪಲಿತಾಂಶ ಸಿಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಜೀರ್ಣಕ್ರಿಯೆಯ ಅಸ್ವಸ್ಥತೆ ಉಂಟಾಗಬಹುದು. ಅದರಲ್ಲಿಯೂ ಕಿಡ್ನಿ ಸಮಸ್ಯೆ, ಕೆಲವು ಆಹಾರ ನಿರ್ಬಂಧಗಳು ಅಥವಾ ಯಾವುದೇ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಹುರುಳಿ ಸೇವಿಸುವ ಮೊದಲು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಉತ್ತಮ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಕಾರಣಕ್ಕೂ ಹುರುಳಿಯನ್ನು ಔಷಧಿಯ ಬದಲಿಗೆ ಬಳಸಬೇಡಿ. ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗೆ ಅರ್ಹ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ