AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್ ಬೇಡ! ಕೇವಲ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಿಗುತ್ತೆ 5 ಅದ್ಭುತ ಆರೋಗ್ಯ ಪ್ರಯೋಜನ

ಇಂದಿನ ವೇಗದ ಜೀವನದಲ್ಲಿ, ಎಲ್ಲರಿಗೂ ಪ್ರತಿನಿತ್ಯ ವ್ಯಾಯಾಮಕ್ಕೆ ಸರಿಯಾದ ಸಮಯ ಸಿಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಮೆಟ್ಟಿಲುಗಳನ್ನು ಹತ್ತುವುದು ಸುಲಭ ಮತ್ತು ಪರಿಣಾಮಕಾರಿ ದೈಹಿಕ ಚಟುವಟಿಕೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಒಂದು ಅಭ್ಯಾಸದಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಮತ್ತು ಈ ಅಭ್ಯಾಸ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜಿಮ್ ಬೇಡ! ಕೇವಲ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಿಗುತ್ತೆ 5 ಅದ್ಭುತ ಆರೋಗ್ಯ ಪ್ರಯೋಜನ
Stair Climbing BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 07, 2026 | 7:35 PM

Share

ಮುಖ್ಯಾಂಶಗಳು

  • ಪ್ರತಿದಿನ ಮೆಟ್ಟಿಲು ಹತ್ತುವುದರಿಂದ ಕ್ಯಾಲೊರಿ ಕರಗಿ ದೇಹ ಫಿಟ್ ಆಗುತ್ತದೆಯೇ?
  • ಮೆಟ್ಟಿಲು ಹತ್ತುವುದರಿಂದ ಏನೆಲ್ಲ ಲಾಭವಿದೆ ಗೊತ್ತಾ? ತಜ್ಞರು ಹೇಳಿರುವ ಆರೋಗ್ಯಕರ ಮಾಹಿತಿ ಇಲ್ಲಿದೆ
  • ಮೆಟ್ಟಿಲು ಹತ್ತಿ ಇಳಿಯುವ ಮೊದಲು ತಿಳಿದುಕೊಂಡಿರಬೇಕಾದ ಸಂಗತಿಗಳು

ಇಂದಿನ ವೇಗದ ಜೀವನಶೈಲಿಯಲ್ಲಿ ಪ್ರತಿದಿನ ಜಿಮ್ ಅಥವಾ ವ್ಯಾಯಾಮಕ್ಕೆ ಸಮಯ ಮೀಸಲಿಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ದಿನನಿತ್ಯದ ಸಣ್ಣ ದೈಹಿಕ ಚಟುವಟಿಕೆಗಳೂ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಅವುಗಳಲ್ಲಿ ಮೆಟ್ಟಿಲು ಹತ್ತುವುದು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಎಲ್ಲೆಡೆ ಮಾಡಬಹುದಾದ ಈ ವ್ಯಾಯಾಮ ದೇಹವನ್ನು ಚುರುಕುಗೊಳಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳೇನು, ಯಾರಿಗೆ ಇದು ಒಳ್ಳೆಯದಲ್ಲ ಮತ್ತು ಯಾಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಉತ್ತಮ: ಮೆಟ್ಟಿಲು ಹತ್ತುವುದು ಪರಿಣಾಮಕಾರಿ ಕಾರ್ಡಿಯೊ ವ್ಯಾಯಾಮವಾಗಿದ್ದು, ಇದು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತಸಂಚಾರ ಸುಧಾರಿಸಲು ಸಹಾಯ ಮಾಡುತ್ತದೆ.

ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ: ತೊಡೆ, ಕಾಲಿನ ಸ್ನಾಯುಗಳು, ಸೊಂಟ ಮತ್ತು ಗ್ಲೂಟ್ಸ್ ಭಾಗದ ಸ್ನಾಯುಗಳು ಹೆಚ್ಚು ಕಾರ್ಯನಿರ್ವಹಿಸುವುದರಿಂದ ಅವುಗಳ ಶಕ್ತಿ ಮತ್ತು ಸಹನಶಕ್ತಿ ಹೆಚ್ಚಾಗುತ್ತದೆ.

ಕ್ಯಾಲೊರಿ ವೇಗವಾಗಿ ಕರಗುತ್ತದೆ: ಸಾಮಾನ್ಯವಾಗಿ ನಡೆಯುವುದಕ್ಕಿಂತ ಮೆಟ್ಟಿಲು ಹತ್ತುವಾಗ ಹೆಚ್ಚು ಶಕ್ತಿ ಬಳಸಲಾಗುತ್ತದೆ. ಇದರಿಂದ ಹೆಚ್ಚಿನ ಕ್ಯಾಲೊರಿ ಕರಗಿ, ತೂಕ ನಿಯಂತ್ರಣಕ್ಕೂ ನೆರವಾಗಬಹುದು.

ಸ್ಟಾಮಿನಾ ಮತ್ತು ಫಿಟ್ನೆಸ್ ಹೆಚ್ಚುತ್ತದೆ: ನಿಯಮಿತವಾಗಿ ಮೆಟ್ಟಿಲು ಹತ್ತುವುದರಿಂದ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಉತ್ತಮವಾಗಿ, ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ಇದನ್ನೂ ಓದಿ: ದೇಹದ ಅಲ್ಲಲ್ಲಿ ಊತ ಕಾಣಿಸಿಕೊಳ್ಳುವುದು ಈ ಆರೋಗ್ಯ ಸಮಸ್ಯೆ ಬರುವ ಸೂಚನೆಯಾಗಿರಬಹುದು!

ಎಲುಬುಗಳು ಗಟ್ಟಿಯಾಗುತ್ತವೆ: ಇದು ದೇಹದ ತೂಕವನ್ನು ಹೊರುವ ವ್ಯಾಯಾಮವಾಗಿರುವುದರಿಂದ ಎಲುಬುಗಳ ಬಲವನ್ನು ಕಾಪಾಡಲು ಸಹಕಾರಿ.

ಯಾರು ಎಚ್ಚರಿಕೆ ವಹಿಸಬೇಕು?

ಮೊಣಕಾಲು ನೋವು, ಸಂಧಿವಾತ, ಹೃದಯರೋಗ, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾದವರು ವೈದ್ಯರ ಸಲಹೆ ಪಡೆದ ಬಳಿಕವೇ ಈ ವ್ಯಾಯಾಮ ಮಾಡಬೇಕು. ವಯೋವೃದ್ಧರು ಸಹ ಜಾಗ್ರತೆ ವಹಿಸಬೇಕು.

ಮೆಟ್ಟಿಲು ಹತ್ತುವಾಗ ಗಮನಿಸಬೇಕಾದ ವಿಷಯಗಳು:

ಆರಂಭದಲ್ಲಿ ನಿಧಾನವಾಗಿ ಪ್ರಾರಂಭಿಸಿ. ಉತ್ತಮ ಹಿಡಿತವಿರುವ ಶೂ ಧರಿಸಿ, ಅಗತ್ಯವಿದ್ದರೆ ರೈಲಿಂಗ್ ಹಿಡಿದು ಹತ್ತಿ. ವ್ಯಾಯಾಮದ ವೇಳೆ ಎದೆನೋವು, ಉಸಿರಾಟದ ತೊಂದರೆ ಅಥವಾ ತಲೆಸುತ್ತು ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?