Medimix soap story: ಮೆಡಿಮಿಕ್ಸ್ ಸೋಪ್ ಹೆಣ್ಣುಮಕ್ಕಳಿಗಲ್ಲ! ಮತ್ಯಾರಿಗೆ
ಮೆಡಿಮಿಕ್ಸ್ ಸೋಪ್ ಹುಡುಗಿಯರ ಅಚ್ಚುಮೆಚ್ಚಿನ ಸೋಪ್. ಆದರೆ ಈ ಸೋಪ್ ಗಳನ್ನು ಹೆಣ್ಣುಮಕ್ಕಳಿಗಾಗಿ ತಯಾರು ಮಾಡಿದ್ದಲ್ಲ ಎಂದರೆ ನಂಬುತ್ತೀರಾ? ಹೌದು. ಈ ಸೋಪ್ ತಯಾರು ಮಾಡುವುದಕ್ಕೆ ಒಂದು ಉದ್ದೇಶವಿತ್ತು. ಅದು ತಿಳಿದರೆ ಬಹುಶಃ ನಿಮಗೆ ಬಹಳ ಆಶ್ಚರ್ಯವಾಗಬಹುದು. ಆದರೆ ಅದೇ ಸತ್ಯ. ಇದು ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ. ಹಾಗಾದರೆ ಇದನ್ನು ಯಾರಿಗಾಗಿ ತಯಾರು ಮಾಡಲಾಗುತ್ತಿತ್ತು? ಅದರ ಹಿಂದಿನ ಉದ್ದೇಶವೇನು ತಿಳಿದುಕೊಳ್ಳಿ.

ಮೆಡಿಮಿಕ್ಸ್ ಸೋಪ್ (Medimix Soap) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಇದರ ಪರಿಮಳ ಎಂತವರನ್ನಾದರೂ ಸೆಳೆಯುವ ಶಕ್ತಿ ಹೊಂದಿದೆ. ಮಾರುಕಟ್ಟೆಗಳಲ್ಲಿ ಎಷ್ಟೇ ಬಗೆಯ ಸೋಪುಗಳಿದ್ದರೂ ಮೆಡಿಮಿಕ್ಸ್ ಬಿಟ್ಟು ಬೇರೆ ಬಳಕೆ ಮಾಡದವರಿದ್ದಾರೆ. ಅದರಲ್ಲಿಯೂ ಕೆಲವು ಹುಡುಗಿಯರಿಗೆ ಈ ಸೋಪ್ ಬಳಕೆ ಮಾಡುವುದು ಬಹಳ ಇಷ್ಟವಾಗುತ್ತದೆ ಹಾಗಾಗಿ ಇದನ್ನು ಅತಿ ಹೆಚ್ಚು ಹುಡುಗಿಯರು ದಿನನಿತ್ಯ ಬಳಸುತ್ತಾರೆ. ಆದರೆ ಈ ಮೆಡಿಮಿಕ್ಸ್ ಸೋಪ್ ಅನ್ನು ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದ್ದಲ್ಲಾ ಎಂದರೆ ನಂಬುತ್ತೀರಾ? ಹೌದು ಕಣ್ರೀ. ಈ ಸೋಪ್ ಅನ್ನು ತಯಾರು ಮಾಡಿದ್ದೆ ಬೇರೆ ಉದ್ದೇಶಕ್ಕೆ ಆದರೆ ಅದನ್ನು ತಿಳಿಯದ ಹುಡುಗಿಯರು ತಮಗಾಗಿಯೇ ಇದೆ ಎಂದು ಬಳಕೆ ಮಾಡುತ್ತಾರೆ. ಇದು ತಪ್ಪಲ್ಲ. ಆದರೆ ಈ ಸೋಪು ತಯಾರಿಕೆಯ ಉದ್ದೇಶ ತಿಳಿದರೆ ನಿಮಗೆ ಆಶ್ಚರ್ಯ ಆಗದಿರಲು ಸಾಧ್ಯವೇ ಇಲ್ಲ. ಹಾಗಾದರೆ ಏನದು ಉದ್ದೇಶ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈಲ್ವೆ ಕೆಲಸಗಾರರಿಗಾಗಿ ತಯಾರುಗುತ್ತಿತ್ತು ಸೋಪ್
ಮೆಡಿಮಿಕ್ಸ್ ಸೋಪ್ ಅನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ತಯಾರು ಮಾಡಲಾಗುತ್ತಿತ್ತು. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು, ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಅವರಿಗಾಗಿ ಈ ಸೋಪ್ ಗಳನ್ನು ತಯಾರು ಮಾಡಿದರು. ಏಕೆಂದರೆ ಇವರಿಗಾಗಿ ಮೆಡಿಸಿನ್ ತಯಾರು ಮಾಡಿದರೆ ತೆಗೆದುಕೊಳ್ಳುತ್ತಾರೆಯೋ? ಇಲ್ಲವೋ ಎಂಬ ಅನುಮಾನದಿಂದ ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಆ ಮೂಲಕ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಸೋಪ್ ಗಳನ್ನು ತಯಾರು ಮಾಡಿದರು. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಮಳ ನೀಡುತ್ತಿತ್ತು. ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ. ಇಂದು ಇದೆ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಾರೆ. ಆದರೆ ಇದು ಒಂದು ಸಮಯದಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವವರ ಆರೋಗ್ಯ ಕಾಪಾಡುತ್ತಿತ್ತು ಎಂದರೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡುವ ವಿಷಯವಾಗಿದೆ. ಈ ವಿಷಯವನ್ನು Freeschool01 ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Sun, 13 April 25