AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಟಮೂರಿ ಮಹಿಳೆ ವಿವಸ್ತ್ರ ಕೇಸ್; 12 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ

ಬೆಳಗಾವಿಯ ಹೆಚ್ಚುವರಿ 10ನೇ ಜಿಲ್ಲಾ ನ್ಯಾಯಾಲಯವು ವಂಟಮೂರಿ ಗ್ರಾಮದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಿಸಿದೆ. 12 ಆರೋಪಿಗಳಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ನ್ಯಾಯಾಧೀಶ ಎಚ್.ಎಸ್. ಮಂಜುನಾಥ್ ತೀರ್ಪು ನೀಡಿದ್ದಾರೆ. ಈ ತೀರ್ಪು ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಸಂದೇಶ ರವಾನಿಸಿದೆ.

ವಂಟಮೂರಿ ಮಹಿಳೆ ವಿವಸ್ತ್ರ ಕೇಸ್; 12 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್​​Image Credit source: Google
ಸಹದೇವ್​ ಮಾನೆ
| Edited By: |

Updated on:Feb 04, 2026 | 2:47 PM

Share

ಬೆಳಗಾವಿ, ಫೆಬ್ರುವರಿ 04: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಜನ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ಬೆಳಗಾವಿಯ (Belagavi) ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ. ಈ ಕುರಿತು ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 12 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ಒಂದೊಂದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಆರೋಪಿಗಳಾದ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರಿಗೆ ಶಿಕ್ಷೆ ವಿಧಿಸಲಾಗಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ದಲ್ಲೇ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಮಗಳನ್ನು ಕರೆದುಕೊಂಡು ಹೋಗಿದ್ದವನ ತಾಯಿಯ ಮೇಲೆ ಕ್ರೌರ್ಯ

2023ರ ಡಿಸೆಂಬರ್ 10ರಂದು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ರಾಜ್ಯದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಯುವಕ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬಸ್ಥರು, ಆತನ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಆತನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯಲಾಗಿತ್ತು. ಈ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಇದನ್ನೂ ಓದಿ ವಂಟಮೂರಿಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಚಾರ್ಜ್​​ಶೀಟ್ ಸಲ್ಲಿಕೆಗೆ CID ಸಿದ್ಧತೆ, ಆರೋಪಿಗಳ ವಿರುದ್ಧವೇ ಮಗಳ ಹೇಳಿಕೆ

ಓರ್ವ ಬಾಲಾಪರಾಧಿ ಬಿಟ್ಟು ಉಳಿದವರಿಗೆ ಶಿಕ್ಷೆ

ಈ ಘಟನೆಯ ನಂತರ ಪೊಲೀಸರು ಓಡಿಹೋಗಿದ್ದ ಪ್ರೇಮಿಗಳನ್ನು ಪತ್ತೆಹಚ್ಚಿ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಿದ್ದು, ದಂಪತಿ ಪ್ರಸ್ತುತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಬಾಲಾಪರಾಧಿ ಸೇರಿ 13 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪೊಲೀಸ್ ವಾಹನಗಳಲ್ಲಿ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಎರಡು ವರ್ಷಗಳ ವಿಚಾರಣೆಯ ಬಳಿಕ, ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:12 pm, Wed, 4 February 26

Follow Us
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!