AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಏರ್‌ಪೋರ್ಟ್ ಬಳಿ ಮಾಂಸ ತ್ಯಾಜ್ಯದ ಹಾವಳಿ: ದುರ್ವಾಸನೆಗೆ ಗ್ರಾಮಸ್ಥರು ಕಂಗಾಲು; ನಾಯಿ, ಹದ್ದುಗಳು ಹೆಚ್ಚಳ

ಬೆಂಗಳೂರು ಏರ್‌ಪೋರ್ಟ್ ಸಮೀಪದ ನಲ್ಲೂರು ಗ್ರಾಮ ಮಾಂಸ ತ್ಯಾಜ್ಯ ಸಮಸ್ಯೆಯಿಂದ ತತ್ತರಿಸಿದೆ. ಬೇಕಾಬಿಟ್ಟಿ ತ್ಯಾಜ್ಯ ಸುರಿಯುವುದರಿಂದ ದುರ್ವಾಸನೆ, ರೋಗಗಳ ಭೀತಿ ಹೆಚ್ಚಾಗಿದೆ. ನಾಯಿ, ಹದ್ದುಗಳು ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಹಾಗೂ ವಿಮಾನ ಹಾರಾಟಕ್ಕೂ ಸಂಕಷ್ಟ ಎದುರಾಗಿದೆ. ಗ್ರಾಮ ಪಂಚಾಯತ್ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್ ಬಳಿ ಮಾಂಸ ತ್ಯಾಜ್ಯದ ಹಾವಳಿ: ದುರ್ವಾಸನೆಗೆ ಗ್ರಾಮಸ್ಥರು ಕಂಗಾಲು; ನಾಯಿ, ಹದ್ದುಗಳು ಹೆಚ್ಚಳ
ಮಾಂಸ ತ್ಯಾಜ್ಯ
ನವೀನ್ ಕುಮಾರ್ ಟಿ.
| Edited By: |

Updated on: Nov 05, 2026 | 9:14 AM

Share

ದೇವನಹಳ್ಳಿ, ನವೆಂಬರ್​​ 05: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಾಂಸದ ತ್ಯಾಜ್ಯದ ಸಮಸ್ಯೆ ತೀವ್ರಗೊಂಡಿದೆ. ರಸ್ತೆಗಳ ಬದಿ, ರಾಜಕಾಲುವೆಗಳಲ್ಲಿ ಬೇಕಾಬಿಟ್ಟಿಯಾಗಿ ಮಾಂಸದ ತ್ಯಾಜ್ಯ ಸುರಿಯುತ್ತಿರುವುದರಿಂದ ಗ್ರಾಮಸ್ಥರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ. ಮತ್ತೊಂದೆಡೆ, ತ್ಯಾಜ್ಯಕ್ಕೆ ನಾಯಿಗಳು ಹಾಗೂ ಹುದ್ದುಗಳು ಬರುತ್ತಿರುವುದರಿಂದ ವಾಹನ ಸವಾರರು ಮತ್ತು ವಿಮಾನಗಳ ಹಾರಾಟಕ್ಕೂ ಆತಂಕ ಎದುರಾಗಿದೆ.

ಗ್ರಾಮದ ವೇಗದ ಬೆಳವಣಿಗೆಯೇ ಸಮಸ್ಯಗೆ ಕಾರಣವಾಯಿತೇ?

ಅಂದಹಾಗೆ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣ ತಲೆ ಎತ್ತಿರುವ ಕಾರಣ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಮಾಂಸದ ಅಂಗಡಿಗಳು, ಹೋಟೆಲ್​ಗಳು ಹೆಚ್ಚಾಗಿದೆ. ಆದರೆ ಇಲ್ಲಿ ಉತ್ಪತ್ತಿಯಾಗುವ ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಗ್ರಾಮದ ರಸ್ತೆಗಳ ಬದಿ ಹಾಗೂ ರಾಜಕಾಲುವೆಗಳಲ್ಲಿ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಾಂಸದ ತ್ಯಾಜ್ಯದಿಂದ ದುರ್ವಾಸನೆ: ಸ್ಥಳೀಯರು ಆಕ್ರೋಶ

ರಸ್ತೆಗಳ ಬದಿ ರಾಶಿ ರಾಶಿ ಮಾಂಸದ ತ್ಯಾಜ್ಯದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೂ ದುರ್ವಾಸನೆ ಹರಡುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತಾಗಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನಗಳ ಹಾರಾಟಕ್ಕೂ ಹದ್ದುಗಳ ಹಾವಳಿ ಆತಂಕ

ಮಾಂಸದ ತ್ಯಾಜ್ಯಕ್ಕೆ ನಾಯಿಗಳು, ಹದ್ದುಗಳು ಸಹ ಹೆಚ್ಚಾಗಿವೆ. ನಾಯಿಗಳು ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದ್ದು, ಹಲವರು ಬಿದ್ದು ಗಾಯಗೊಂಡಿದ್ದಾರೆ. ಜೊತೆಗೆ ಹದ್ದುಗಳ ಸಂಖ್ಯೆ ಸಹ ಹೆಚ್ಚಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವುದರಿಂದ ವಿಮಾನಗಳ ಟೇಕ್​ಆಪ್​​​ ಮತ್ತು ಲ್ಯಾಂಡಿಂಗ್​​ ಸಂದರ್ಭದಲ್ಲಿ ಹದ್ದುಗಳ ಹಾವಳಿ ಆತಂಕಕ್ಕೆ ಕಾರಣವಾಗಿದೆ. ವಿಮಾನಗಳು ಗ್ರಾಮದ ಸಮೀಪದಲ್ಲಿ ಕೆಳಮಟ್ಟದಲ್ಲಿ ಹಾರಾಟ ನಡೆಸುವ ಹಿನ್ನೆಲೆಯಲ್ಲಿ ಹದ್ದುಗಳಿಂದ ವಿಮಾನಗಳ ಸುರಕ್ಷೆತೆಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.

LIVE TV

ಇನ್ನು ರಾಜಕಾಲುವೆ ತುಂಬಾ ಮಾಂಸದ ತ್ಯಾಜ್ಯವೇ ತುಂಬಿದ್ದು, ಮಳೆ ಬಂದರೆ ತ್ಯಾಜ್ಯವೆಲ್ಲಾ ಕೆರೆ ಹಾಗೂ ರೈತರ ಜಮೀನುಗಳಿಗೆ ಸೇರುತ್ತದೆ. ಇತ್ತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್​​ಪೋರ್ಟ್​ ಪರ್ಯಾಯ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್: ಸವಾರರ ಪಾಲಿಗೆ ಮೃತ್ಯು ಕೂಪವಾದ ರಸ್ತೆ

ಒಟ್ಟಾರೆ ಗ್ರಾಮ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಾಂಸದ ಅಂಗಡಿಗಳ ಮಾಲೀಕರ ದುರ್ವತನೆಯಿಂದ ಇದೀಗ ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಅನಾಹುತ ಸಂಭವಿಸುವ ಮುನ್ನ ಗ್ರಾಮದ ರಾಜಕಾಲುವೆ ಸ್ವಚ್ಛ ಮಾಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ನವೀನ್ ಕುಮಾರ್ ಟಿ.
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?