Parking Policy 2.0; ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ಇದು ಸರಿಯಾದ ಸಮಯ

ಟ್ರಾಫಿಕ್ ಮತ್ತು ಪಾರ್ಕಿಂಗ್​ ಸಮಸ್ಯೆ ಅರಿತು, ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸಿದ್ಧಪಡಿಸಿರುವ ಮತ್ತು ಬಿಡುಗಡೆ ಮಾಡಿದ ಪಾರ್ಕಿಂಗ್ ನೀತಿ 2.0 ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ನೀತಿ 2.O ಅನುಷ್ಠಾನಕ್ಕೆ ಅನುಮೋದನೆ ನೀಡಿದ ಹಿನ್ನೆಲೆ ಎಲ್ಲೆಂದರಲ್ಲಿ ಉಚಿತವಾಗಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಮನೆ ಮುಂದೆ ವಾಹನ ಪಾರ್ಕಿಂಗ್​ಗೆ ಅನುಮತಿ ಕಡ್ಡಾಯವಾಗಿದೆ.

Parking Policy 2.0; ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ಇದು ಸರಿಯಾದ ಸಮಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jul 24, 2021 | 2:36 PM

ಬೆಂಗಳೂರು: ಕೊವಿಡ್​ ಹೆಚ್ಚಳವನ್ನು ನಿಯಂತ್ರಿಸಲು ಜಾರಿಗೆ ತಂದ ಲಾಕ್​ಡೌನ್​ ಕೇವಲ ಕೊರೊನಾ ಸೋಂಕು ಹರಡುವಿಕೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಬದಲಾಗಿ ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್​ ಸಮಸ್ಯೆ, ವಾಹನ ದಟ್ಟಣೆ, ಪಾರ್ಕಿಂಗ್​ ವ್ಯವಸ್ಥೆ ಕೂಡ ಸುಧಾರಿಸಿದೆ ಎನ್ನುವುದು ವಿಶೇಷ. ಆದರೆ ಕೊವಿಡ್ ಪೂರ್ವದಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ. ಬದಲಾಗಿ, ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸಾರಿಗೆ ಸಮಸ್ಯೆ, ವಾಹನ ದಟ್ಟಣೆ, ಟ್ರಾಫಿಕ್​ ಕಿರಿಕಿರಿ ಹೆಚ್ಚಳವಾಗಿತ್ತು. ದಿನನಿತ್ಯ ಆಫಿಸ್​, ಶಾಲಾ-ಕಾಲೇಜು, ಇನ್ನಿತರ ಕೆಲಸಗಳಿಗೆ ಹೋಗುವವರ ತೊಳಲಾಟ ಹೇಳ ತೀರದು. ಅದರಲ್ಲೂ ಕಂಪನಿಗಳ ಮುಂದೆ ನಿಲ್ಲಿಸುತ್ತಿದ್ದ ವಾಹನಗಳು ಅಂತಿಮವಾಗಿ ಟ್ರಾಫಿಕ್​ ಸಮಸ್ಯೆಗೆ ಕಾರಣವಾಗುತ್ತಿದ್ದವು. ಇದಕ್ಕೆ ಕಾರಣ ಸರಿಯಾದ ಪಾರ್ಕಿಂಗ್​ ವ್ಯವಸ್ಥೆ ಇಲ್ಲದೇ ಇರುವುದೇ ಆಗಿತ್ತು.

ಪಾರ್ಕಿಂಗ್​ ಸಮಸ್ಯೆಗೆ ಪರಿಹಾರ ಟ್ರಾಫಿಕ್ ಮತ್ತು ಪಾರ್ಕಿಂಗ್​ ಸಮಸ್ಯೆ ಅರಿತು, ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸಿದ್ಧಪಡಿಸಿರುವ ಮತ್ತು ಬಿಡುಗಡೆ ಮಾಡಿದ ಪಾರ್ಕಿಂಗ್ ನೀತಿ 2.0 ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ನೀತಿ 2.O ಅನುಷ್ಠಾನಕ್ಕೆ ಅನುಮೋದನೆ ನೀಡಿದ ಹಿನ್ನೆಲೆ ಎಲ್ಲೆಂದರಲ್ಲಿ ಉಚಿತವಾಗಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಮನೆ ಮುಂದೆ ವಾಹನ ಪಾರ್ಕಿಂಗ್​ಗೆ ಅನುಮತಿ ಕಡ್ಡಾಯವಾಗಿದೆ. ವಾಹನಗಳ ಗಾತ್ರಕ್ಕೆ ತಕ್ಕಂತೆ ಅನುಮತಿಗೆ ಏರಿಯಾವೈಸ್ ಪಾರ್ಕಿಂಗ್ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಅಲ್ಲದೇ ವಾಹನ ಪಾರ್ಕಿಂಗ್​ಗೆ ವಾರ್ಷಿಕ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ವೈಯಕ್ತಿಕ ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ, ವಾಕಿಂಗ್ ಮತ್ತು ಸೈಕ್ಲಿಂಗ್‌ ವ್ಯವಸ್ಥೆಗೆ ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಕಡಿಮೆ ವಾರ್ಷಿಕ ಪರವಾನಗಿ ಶುಲ್ಕಗಳು ಚಿಕ್ಕ ವಾಹನಗಳಿಗೆ ವಾರ್ಷಿಕ 1 ಸಾವಿರ ರೂಪಾಯಿ, ಮಧ್ಯಮ ಗಾತ್ರದ ಕಾರಿಗೆ ವಾರ್ಷಿಕ 3ರಿಂದ 4 ಸಾವಿರ ರೂಪಾಯಿ, MUV, SUV ಕಾರುಗಳಿಗೆ 5 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ. ಪರ್ಮಿಟ್ ಪಡೆಯುವಾಗ ದರ ಪಾವತಿ ಮಾಡಬೇಕು. ವಾಹನ ಪಾರ್ಕ್ ಮಾಡುವುದಕ್ಕೆ ಆಯಾ ಸ್ಥಳಕ್ಕೆ ಹಾಗೂ ಸಮಯಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗುತ್ತದೆ. ಇದು ವೈಯಕ್ತಿಕ ವಾಹನ ನಿಲುಗಡೆಯಿಂದ ಉಂಟಾಗುವ ಟ್ರಾಫಿಕ್​ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಪಾರ್ಕ್-ಆ್ಯಂಡ್​-ರೈಡ್​ಗಾಗಿ ನಿರ್ದಿಷ್ಟಪಡಿಸಿದ ಪಾರ್ಕಿಂಗ್ ಶುಲ್ಕವನ್ನು ಮರುಪರಿಶೀಲಿಸಲು ಉತ್ತಮ ಅವಕಾಶವಿದ್ದು, ಈ ನೀತಿಯು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಕೆ ಮಾಡಲು ಉತ್ತೇಜಿಸುತ್ತದೆ. ಅಲ್ಲದೆ ಹಲವು ಸಮೀಕ್ಷೆ ಮತ್ತು ಅಭಿಪ್ರಾಯದ ಪ್ರಕಾರ ಪಾರ್ಕಿಂಗ್​ ನೀತಿ ಹೆಚ್ಚು ಉಪಯುಕ್ತವಾಗಿದೆ ಮತ್ತು ಜನ ಜೀವನವನ್ನು ಸುಧಾರಿಸುತ್ತದೆ.

ವಿಶ್ವಾಸಾರ್ಹ ಪಾರ್ಕಿಂಗ್ ತಂತ್ರಜ್ಞಾನ ಪಾರ್ಕಿಂಗ್ ನಿರ್ವಹಣೆಗೆ ತಂತ್ರಜ್ಞಾನವನ್ನು ಹೆಚ್ಚು ಬಳಸುವುದು ಒಳ್ಳೆಯದು. ಆದಾಗ್ಯೂ, ಈಗಾಗಲೇ ಅಳವಡಿಸಿಕೊಂಡ ವ್ಯವಸ್ಥೆಯು ಬಳಸಲು ಸುಲಭ ಮತ್ತು ವಿಶ್ವಾಸಾರ್ಹವಾಗಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಕೂಡ ಮುಖ್ಯ. ಪ್ರಸ್ತುತ ಅಪ್ಲಿಕೇಶನ್ ಆಧಾರಿತ ಪಾರ್ಕಿಂಗ್ ಪಾವತಿ ವ್ಯವಸ್ಥೆಯನ್ನು ಹೊಂದಿರುವ ಎಂ.ಜಿ ರಸ್ತೆಯಂತಹ ಸ್ಥಳಗಳಲ್ಲಿ, ಅಪ್ಲಿಕೇಶನ್ ಹೆಚ್ಚಾಗಿ ಕಾರ್ಯನಿರ್ವಹಿಸುವುದಿಲ್ಲ, ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆರೋಪಗಳು ಕೇಳಿ ಬಂದಿದೆ.

ಒಟ್ಟಾರೆಯಾಗಿ, ಪಾರ್ಕಿಂಗ್ ನೀತಿಯ ನಿರ್ದೇಶನವು ಉತ್ತಮವಾಗಿದ್ದರೂ, ಅದನ್ನು ಎಷ್ಟು ಪರಿಣಾಮಕಾರಿಯಾಗಿ ಪರಿಚಯಿಸಲಾಗಿದೆ, ಜಾರಿಗೊಳಿಸಲಾಗಿದೆ ಮತ್ತು ಮೇಲ್ವಿಚಾರಣೆ ಮಾಡಲಾಗಿದೆ ಎಂಬುವುದು ಅದರ ಅನುಷ್ಠಾನದ ನಂತರವಷ್ಟೇ ತಿಳಿಯಬೇಕಿದೆ.

ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯನ್ನು ಸುಧಾರಿಸಲು ಪಾರ್ಕಿಂಗ್​ ನೀತಿ ಹೇಗೆ ಮತ್ತು ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಪಾರ್ಕಿಂಗ್ ನೀತಿಯ ಕಾರ್ಯಕ್ಷಮತೆ ಮತ್ತು ಈ ನೀತಿಯಲ್ಲಿ ಪ್ರಸ್ತುತ ಪಡಿಸಿದ ಗುರಿಗಳು ಮತ್ತು ಉದ್ದೇಶಗಳ ಸಾಧನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್ಸ್ (ಕೆಪಿಐ) ಜಾರಿಗೆ ತರಬೇಕು ಮತ್ತು ಆ ಮೂಲಕ ಗೊಂದಲದ ನಿವಾರಣೆಯಾಗಬೇಕು.

ಅಲ್ಲದೆ, ಅನೇಕ ಸಂಸ್ಥೆಗಳಿಗೆ, ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ, ಕೊವಿಡ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ (WHF) ನೀಡಲಾಗಿದೆ. ಪಾರ್ಕಿಂಗ್ ಅವಶ್ಯಕತೆಯ ಮಾನದಂಡಗಳು ಮತ್ತು ಅದಕ್ಕೆ ಅನುಗುಣವಾಗಿ ವಿವಿಧ ಪ್ರದೇಶಗಳಲ್ಲಿನ ಪಾರ್ಕಿಂಗ್ ಸ್ಥಳದ ಅವಶ್ಯಕತೆಗಳು ಸಾಮಾನ್ಯ ಜನ ಜೀವನಕ್ಕೆ ಬಂದ ನಂತರದಲ್ಲಿಯೇ ನೋಡಬೇಕಿದೆ.

ನಗರದಲ್ಲಿ ಮೇ 2020 ವೇಳೆಗೆ ವಾಹನಗಳ ಸಂಖ್ಯೆ 94 ಲಕ್ಷ ದಾಟಿದ್ದು, ವಾಹನ ನೋಂದಣಿಯ ವಾರ್ಷಿಕ ಏರಿಕೆ ದರ ಶೇ. 10 ಕ್ಕಿಂತ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಮೆಟ್ರೋ ರೈಲು ಕಾರ್ಯಚರಣೆ ಆರಂಭ ಮತ್ತು ಫ್ಲೈ ಓವರ್​ಗಳ ನಿರ್ಮಾಣ ಮಾಡಿದರೂ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ವಾಹನಗಳ ನಿಲುಗಡೆ ಸಮಸ್ಯೆಗೆ ಪರಿಹಾರ ನೀಡಲು ಪಾರ್ಕಿಂಗ್ ನೀತಿ 2.O ರೂಪಿಸಲಾಗಿದೆ. ಇದು ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನುವುದು ಮಾತ್ರ ನಿಜ.

ಇದನ್ನೂ ಓದಿ: Parking Policy 2.0: ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ; ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡುವುದೇ ಉದ್ದೇಶ

Parking Policy 2.0: ಇದು ಕಾರು ಮಾಲೀಕರ ಗಮನಕ್ಕೆ! ರಾಜಧಾನಿ ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿಗೆ ಅನುಮೋದನೆ..

Published On - 10:58 am, Sat, 24 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ