AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿಯಲ್ಲ ಸಾಕ್ಷಾತ್​​ ಯಮ!: 17 ವರ್ಷಗಳಲ್ಲಿ 1,142 ಜನರ ಬಲಿ ಪಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ಗಳು!

BMTC Bus Accidents: ಬೆಂಗಳೂರಿನಲ್ಲಿ ಕಳೆದ 17 ವರ್ಷಗಳಲ್ಲಿ ಸಂಭವಿಸಿದ 5,864 ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಿಬ್ಬಂದಿಗಳ ಮೇಲಿನ ಒತ್ತಡವೇ ಇದಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ 1 ವರ್ಷದಲ್ಲಿಯೇ​​ ಬಿಎಂಟಿಸಿ ಬಸ್​​ಗಳ ಅಪಘಾತಗಳಿಂದ 31 ಜನ ಪ್ರಾಣ ಕಳೆದುಕೊಂಡಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್​​ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್​​ ನೀಡಲಾಗುತ್ತಿರೋದೇ ಅವಘಡಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಬಿಎಂಟಿಸಿಯಲ್ಲ ಸಾಕ್ಷಾತ್​​ ಯಮ!: 17 ವರ್ಷಗಳಲ್ಲಿ 1,142 ಜನರ ಬಲಿ ಪಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ಗಳು!
ಸಾಂದರ್ಭಿಕ ಚಿತ್ರImage Credit source: PTI
ಕಿರಣ್​ ಸೂರ್ಯ
| Edited By: |

Updated on:Jul 05, 2026 | 1:33 PM

Share

ಮುಖ್ಯಾಂಶಗಳು

  • ಯಮ ಸ್ವರೂಪಿಯಾಗಿ ಮಾರ್ಪಟ್ಟಿರುವ ಬಿಎಂಟಿಸಿ ಬಸ್​​ಗಳು
  • ಭಯ ಹುಟ್ಟಿಸುವಂತಿದೆ ಬಸ್​​ ಅಪಘಾತಗಳ ಅಂಕಿ-ಅಂಶ
  • ಕಳೆದ 1 ವರ್ಷದಲ್ಲಿಯೇ​​ ಬಿಎಂಟಿಸಿ ಬಸ್​​ಗಳಿಗೆ 31 ಜನ ಬಲಿ

ಬೆಂಗಳೂರು, ಜುಲೈ 05: ನಗರದ ನಿವಾಸಿಗಳ ಪಾಲಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​​ಗಳು ಯಮ ಸ್ವರೂಪಿಯಾಗಿ ಮಾರ್ಪಟ್ಟಿವೆ. ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ಬಿಎಂಟಿಸಿ ಬಸ್​​ಗಳ ಅಪಘಾತ ಮತ್ತು ಸಾವು ನೋವುಗಳ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಬಸ್​​ ಅಪಘಾತದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲೇ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿರೋದೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿವೆ.

17 ವರ್ಷದಲ್ಲಿ 5864 ಆ್ಯಕ್ಸಿಡೆಂಟ್

ಕಳೆದ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 5,864 ಬಾರಿ ಬಿಎಂಟಿಸಿ ಬಸ್​​ ಅಪಘಾತಗಳು ನಡೆದಿದ್ದು, ಇವುಗಳಲ್ಲಿ 1,142 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್​​ ಬಸ್​​ಗಳ ಆ್ಯಕ್ಸಿಡೆಂಟ್​​ನಿಂದಾಗಿ 40ಕ್ಕೂ ಹೆಚ್ಚು ಮತ್ತು ನಾರ್ಮಲ್​​ ಬಸ್​​ಗಳಿಂದಾಗಿ 100ಕ್ಕೂ ಹೆಚ್ಚು ಜನರ ಜೀವ ಹೋಗಿದೆ. ಕಳೆದ 1 ವರ್ಷದಲ್ಲಿ ನಡೆದಿರುವ ನಾರ್ಮಲ್​​ ಬಿಎಂಟಿಸಿ ಬಸ್​​ಗಳ 104 ಅಪಘಾತಗಳಿಂದಲೇ 31 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಂಕಿ-ಅಂಶ ಟಿವಿ9 ಕನ್ನಡಕ್ಕೆ ದೊರೆತಿದೆ.

ಇದನ್ನೂ ಓದಿ: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!

ಅಪಘಾತ ಹೆಚ್ಚಳ ಯಾಕೆ?

ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್​​ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್​​ ನೀಡಲಾಗುತ್ತೆ. 1991-95ರ ರೂಲ್ಸ್ ಅನ್ನೇ ಇನ್ನೂ ಫಾಲೋ ಮಾಡ್ತಿದ್ದಾರೆ. ಪ್ರತಿದಿನ 250ರಿಂದ 300 ಕಿ.ಮೀ. ಬಸ್ ಓಡಿಸಲು ಹೇಳ್ತಿದ್ದಾರೆ. ಈ ಬಗ್ಗೆ ಬಿಎಂಟಿಸಿಯ ಸಿಟಿಎಂ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ರು ಯಾವುದೇ ಬದಲಾವಣೆ ಆಗಿಲ್ಲ ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಆರೋಪಿಸಿದ್ದಾರೆ. ಬಿಎಂಟಿಸಿ ಡ್ರೈವರ್, ಕಂಡಕ್ಟರ್​​ಗಳು ಅತ್ಯಂತ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ನೌಕರರಿಗೆ ಆರೋಗ್ಯ ಸರಿಯಿಲ್ಲದೆ ರಜೆ ಬೇಕು ಅಂದರೂ ಡಿಪೋ ಮ್ಯಾನೇಜರ್​​ಗಳಿಗೆ ಒಂದು ರಜೆಗೆ 500 ರೂ. ಲಂಚ ನೀಡಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಲೈನ್ ಚೆಕ್ಕಿಂಗ್ ಅನ್ನೋ ಹೆಸ್ರಲ್ಲಿ ಸೆಕ್ಯೂರಿಟಿ ಅಧಿಕಾರಿಗಳು ದಂಧೆ ಮಾಡಿಕೊಂಡಿದ್ದಾರೆ. ಬಿಎಂಟಿಸಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಂಡಿ ಯಾರೂ ಡಿಪೋಗಳಿಗೆ ಭೇಟಿ ಮಾಡ್ತಿಲ್ಲ. ಹೀಗಾಗಿ ಡಿಪೋ ಮ್ಯಾನೇಜರ್, ಡಿಸಿಗಳ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:01 pm, Sun, 5 July 26

Follow Us
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ