ಧ್ರುವ ರಾಠಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ಭಾಸ್ಕರ್ ರಾವ್ ಪತ್ರ: ಹಲವು ವಿಚಾರಗಳ ಬಗ್ಗೆ ಪರಿಶೀಲನೆಗೆ ಮನವಿ
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ SIR ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುಟ್ಯೂಬರ್ ಧ್ರುವ ರಾಠಿ ವೀಸಾ ಮತ್ತು ಪೌರತ್ವ ನಿಯಮ ಉಲ್ಲಂಘನೆ ಕುರಿತು ತನಿಖೆ ನಡೆಸುವಂತೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಧ್ರುವ್ ಭಾರತಕ್ಕೆ ಯಾವ ವೀಸಾ ಅಥವಾ ಅನುಮತಿ ಪಡೆದು ಬಂದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದವರು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 09: ಫ್ರೀಡಂಪಾರ್ಕ್‌ನಲ್ಲಿ ನಡೆದ SIR ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುಟ್ಯೂಬರ್ ಧ್ರುವ ರಾಠಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಜಿ IPS ಅಧಿಕಾರಿ ಭಾಸ್ಕರ್ ರಾವ್ ಪತ್ರ ಬರೆದಿದ್ದು, ಧ್ರುವ್ ರಾಠಿ ಪೌರತ್ವ ಮತ್ತು ವೀಸಾ ಸ್ಥಿತಿಗತಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಧ್ರುವ ರಾಠಿ ಜರ್ಮನ್ ಪೌರತ್ವ ಹೊಂದಿರುವ ಬಗ್ಗೆ ವರದಿ ಹಿನ್ನಲೆ, ಭಾರತಕ್ಕೆ ಯಾವ ವೀಸಾ ಅಥವಾ ಅನುಮತಿ ಪಡೆದು ಬಂದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದವರು ಆಗ್ರಹಿಸಿದ್ದಾರೆ.
‘ವೀಸಾ ನಿಯಮಗಳು ಉಲ್ಲಂಘನೆಯಾಗಿದೆಯೇ?’
Drastic Action needs to be taken against those who fly into, intrude and illegally cross into Bharat and create a mayhem at the behest of Powers inimical to the interest of our Nation.
We are a Zero Punishment country where anyone can do anything and get away.
I have requested Home Secretary of India to verify Visa credentials of Dhruv Rathee who has participated in Political Protests to undermine Constitutional body of India. @HMOIndia @meaindia1 @CPBlr
— Bhaskar Rao (@Nimmabhaskar22) October 8, 2026
ನಿನ್ನೆ ನಡೆದಿದ್ದ ಪ್ರತಿಭಟನೆ ವೇಳೆ ಆಯೋಗದ ವಿರುದ್ಧ ಸಾರ್ವಜನಿಕವಾಗಿ ಧ್ರುವ್ ರಾಠಿ ಮಾತನಾಡಿದ್ದರು. ವಿದೇಶಿ ಪ್ರಜೆಯಾಗಿದ್ದರೆ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು ಅನುಮತಿ ಇದೆಯೇ ಎಂಬ ಬಗ್ಗೆ ಪರಿಶೀಲನೆ ಆಗಬೇಕಿದೆ. ಹಿಂದಿನ ಭೇಟಿಗಳಲ್ಲೂ ಇಂತಹ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ. ವಿದೇಶಿಗರ ಕಾಯ್ದೆ, ವೀಸಾ ನಿಯಮಗಳು ಹಾಗೂ ವಲಸೆ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಿಸುವ ಜೊತೆಗೆ ಯುಟ್ಯೂಬರ್ ಧ್ರುವ್ ರಾಠಿ ಪ್ರವೇಶ ಮತ್ತು ನಿರ್ಗಮನ ದಾಖಲೆಗಳನ್ನು ಸಂರಕ್ಷಿಸಿ ಪರಿಶೀಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯಕ್ಕೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎಸ್‌ಐಆರ್ ವಿರುದ್ಧ ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ: ಆಯೋಗದ ವಿರುದ್ಧ ಗುಡುಗಿದ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್ ರಾಜ್
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ನಿನ್ನೆ (ಅ.8) ಬೃಹತ್ ಪ್ರತಿಭಟನೆ ಮಾಡಲಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ನಾಯಕರು ಆಗ್ರಹಿಸಿದ್ದರು. ಪ್ರೊಟೆಸ್ಟ್ನಲ್ಲಿ ಭಾಗಿಯಾಗಿದ್ದ ಯುಟ್ಯೂಬರ್ ಧ್ರುವ್ ರಾಠಿ, ನಾನು ಇಲ್ಲಿ ಆಡಳಿತ ಬದಲಾವಣೆಗಾಗಿ ಬಂದಿಲ್ಲ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಯಾವುದೇ ಪಾರದರ್ಶಕತೆ ಆಗಲಿ, ಹೊಣೆಗಾರಿಕೆ ಆಗಲಿ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:56 am, Fri, 9 October 26




