AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಅಥವಾ ಚಪ್ಪಲಿ ವಿತರಿಸಲು ಶಿಕ್ಷಣ ಇಲಾಖೆ ಹೊಸ ಚಿಂತನೆ ನಡೆಸಿದ್ದು, ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿ ಕೋರಿದೆ. ಮಕ್ಕಳ ಆರೋಗ್ಯ ಸೇರಿ ಕೆಲ ಅಂಶಗಳನ್ನು ಪರಿಗಣಿಸಿ ಇಲಾಖೆ ಈ ಬಗ್ಗೆ ಯೋಚನೆ ರೂಪಿಸಿದ್ದು, ಮಳೆ ಮತ್ತು ಬೇಸಿಗೆ ಕಾಲಗಳೆರಡರಲ್ಲೂ ಚಪ್ಪಲಿಯನ್ನು ಧರಿಸೋದು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ
ಸಾಂದರ್ಭಿಕ ಚಿತ್ರImage Credit source: newindianexpress.com
ವಿನಯ್​ ಕಾಶಪ್ಪನವರ್​
| Edited By: |

Updated on:Jun 14, 2026 | 8:13 AM

Share

ಬೆಂಗಳೂರು, ಜೂನ್​​ 14: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶೂ-ಸಾಕ್ಸ್ ಯೋಜನೆಯಲ್ಲಿ ಕೊಂಚ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾದಗಿದ್ದು, ವಾತಾವರಣಕ್ಕೆ ತಕ್ಕಂತೆ ಮಕ್ಕಳಿಗೆ ಶೂ ಅಥವಾ ಚಪ್ಪಲಿ ನೀಡಲು ಚಿಂತನೆ ನಡೆಸಿದೆ. ದೀರ್ಘ ಕಾಲ ಶೂ ಧರಿಸುವುದರಿಂದ ಕೆಲ ವಿದ್ಯಾರ್ಥಿಗಳಲ್ಲಿ ಕಾಲಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಗಳು ವರದಿಯಾದ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಇಲಾಖೆ ಮುಂದಾಗಿದೆ. ಯಾವೆಲ್ಲ ಪ್ರದೇಶಗಳಲ್ಲಿ ಮಕ್ಕಳಿಗೆ ಶೂ ಅಥವಾ ಚಪ್ಪಲಿ ಸೂಕ್ತ ಎಂಬ ಬಗ್ಗೆ ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿಯನ್ನೂ ಕೇಳಲಾಗಿದೆ.

ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್; ಯೋಜನೆಯಲ್ಲಿ ಕೊಂಚ ಬದಲಾವಣೆ
  • ವಾತಾವರಣಕ್ಕೆ ತಕ್ಕಂತೆ ಶೂ ಅಥವಾ ಚಪ್ಪಲಿ ನೀಡಲು ಚಿಂತನೆ
  • ಮಕ್ಕಳ ಆರೋಗ್ಯ ಸೇರಿ ಹಲವು ಅಂಶ ಪರಿಗಣಿಸಿರುವ ಶಿಕ್ಷಣ ಇಲಾಖೆ

ಚಪ್ಪಲಿ ವಿತರಣೆಗೆ ಹೆಚ್ಚಿನ ಒಲವು ಯಾಕೆ?

ಮಳೆ ಮತ್ತು ಬೇಸಿಗೆ ಕಾಲಗಳೆರಡರಲ್ಲೂ ಚಪ್ಪಲಿಯನ್ನು ಧರಿಸೋದು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ. ಅಲ್ಲದೆ ದೀರ್ಘ ಕಾಲ ಶೂ ಧರಿಸೋದು ವಿವಿಧ ಸೋಂಕುಗಳಿಗೂ ಕಾರಣವಾಗಬಹುದು. ಜೊತೆಗೆ ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ವಾಸನೆ ಬರುವ ಸಾಧ್ಯತೆಯೂ ಹೆಚ್ಚಿರಲಿದೆ. ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಚಪ್ಪಲಿ ವಿತರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಇ, ಬಿಟೆಕ್, ಎಂಟೆಕ್ ವಿದ್ಯಾರ್ಥಿಗಳಿಗೆ ಡಿಆರ್‌ಡಿಒದಲ್ಲಿ ಇಂಟರ್ನ್‌ಶಿಪ್ ಅವಕಾಶ; ಸ್ಟೈಫಂಡ್ ಕೂಡ ಲಭ್ಯ!

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಒಂದು ಜೊತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಕಳೆದ ವರ್ಷ ಒಂದರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ.ಗಳನ್ನು ಸರ್ಕಾರ ನಿಗದಿ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:11 am, Sun, 14 June 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ