AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಗಳ ಬಳಿ ಕೋಟ್ಯಂತರ ರೂ. ಸುಲಿಗೆ: 254 ಔಷಧ ಕಂಪನಿಗಳ ಅಕ್ರಮ ಬಯಲು ಮಾಡಿದ ಕರ್ನಾಟಕ ಎಫ್​ಡಿಎ!

ಕರ್ನಾಟಕ ಎಫ್‌ಡಿಎ ಇಲಾಖೆಯು ರೋಗಿಗಳಿಂದ ಔಷಧಗಳ ಮೇಲಿನ ಬೆಲೆಯಲ್ಲಿ ಶೇ 60 ರಿಂದ 90 ಪಟ್ಟು ಹೆಚ್ಛು ಲಾಭಗಳಿಸಿ ಸುಲಿಗೆ ಮಾಡುತ್ತಿದ್ದ 254 ಔಷಧ ತಯಾರಿಕಾ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಲ್ಯಾಂಡಿಂಗ್ ವೆಚ್ಚಕ್ಕಿಂತ ದುಬಾರಿ ಎಂಆರ್‌ಪಿ ನಿಗದಿಪಡಿಸಿ ಲೂಟಿ ಮಾಡುತ್ತಿರುವ ಈ ಜಾಲಕ್ಕೆ ತಕ್ಷಣವೇ ಕಡಿವಾಣ ಹಾಕುವಂತೆ ಕೇಂದ್ರದ ಎನ್‌ಪಿಪಿಎಗೆ ಎಫ್‌ಡಿಎ ಆಯುಕ್ತ ಕೆ. ಶ್ರೀನಿವಾಸ್ ಪತ್ರ ಬರೆದಿದ್ದಾರೆ.

ರೋಗಿಗಳ ಬಳಿ ಕೋಟ್ಯಂತರ ರೂ. ಸುಲಿಗೆ: 254 ಔಷಧ ಕಂಪನಿಗಳ ಅಕ್ರಮ ಬಯಲು ಮಾಡಿದ ಕರ್ನಾಟಕ ಎಫ್​ಡಿಎ!
ಸಾಂದರ್ಭಿಕ ಚಿತ್ರImage Credit source: gettyimages.com
ವಿನಯ್​ ಕಾಶಪ್ಪನವರ್​
| Edited By: |

Updated on: Sep 27, 2026 | 10:32 AM

Share

ಮುಖ್ಯಾಂಶಗಳು

  • ಔಷಧ ಉತ್ಪಾದನಾ ವೆಚ್ಚಕ್ಕಿಂತ ಗರಿಷ್ಠ ಬೆಲೆ ನಿಗದಿಪಡಿಸಿ ರೋಗಿಗಳಿಗೆ ಭಾರಿ ಸುಲಿಗೆ.
  • ಲೂಟಿ ಮಾಡುತ್ತಿದ್ದ 254 ಔಷಧ ಕಂಪನಿಗಳ ಬಂಡವಾಳ ಬಯಲು ಮಾಡಿದ ಎಫ್‌ಡಿಎ.
  • ದರ ನಿಯಂತ್ರಣಕ್ಕಾಗಿ ಎನ್‌ಪಿಪಿಎ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ಕ್ರಮಕ್ಕಾಗಿ ಎಫ್‌ಡಿಎ ಪತ್ರ.

ಬೆಂಗಳೂರು, ಸೆಪ್ಟೆಂಬರ್ 27: ಬಡ ಹಾಗೂ ಕಷ್ಟದಲ್ಲಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳ ಮೇಲೆ ಶೇ 60 ರಿಂದ 90 ಪಟ್ಟು ಹೆಚ್ಚು ದರ ನಿಗದಿಪಡಿಸಿ ಭಾರಿ ಸುಲಿಗೆ ಮಾಡುತ್ತಿದ್ದ 254 ಔಷಧ ತಯಾರಿಕಾ ಕಂಪನಿಗಳ ಅಕ್ರಮ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಇಲಾಖೆ ಬಯಲಿಗೆಳೆದಿದೆ. ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ಸಿದ್ಧಪಡಿಸಿ ಅಥವಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಿ, ರೋಗಿಗಳಿಗೆ ಮಾತ್ರ ಅತ್ಯಂತ ದುಬಾರಿ ಬೆಲೆಯಲ್ಲಿ ಮಾರಲಾಗುತ್ತಿತ್ತು. ಈ ಸುಲಿಗೆ ಕೋರ ಕಂಪನಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿರುವ ಕರ್ನಾಟಕ ಎಫ್​ಡಿಎ ಆಯುಕ್ತ ಕೆ ಶ್ರೀನಿವಾಸ್ , ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ಆಘಾತಕಾರಿ ದರ, ವ್ಯತ್ಯಾಸದ ಲೆಕ್ಕಾಚಾರ

ಔಷಧ ತಯಾರಿಕಾ ಹಾಗೂ ಪೂರೈಕೆ ವೆಚ್ಚಕ್ಕೂ, ಆಸ್ಪತ್ರೆಗಳು ವಿಧಿಸುವ ಎಮ್ಆರ್​ಪಿ ಬೆಲೆಗೂ ಅಸಹಜ ಅಂತರವಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

  • ಸಾಮಾನ್ಯ ಔಷಧ 1: 86 ರೂ.ಗೆ ಖರೀದಿಸಿದ ಔಷಧಿಗೆ ನಿಗದಿಯಾಗಿದ್ದ ಎಮ್ಆರ್​ಪಿ 4,528 ರೂ. (52 ಪಟ್ಟು ಹೆಚ್ಚು)
  • ಸಾಮಾನ್ಯ ಔಷಧ 2: 160 ರೂ. ಔಷಧಿಗೆ ನಿಗದಿಯಾಗಿದ್ದ ಎಮ್ಆರ್​ಪಿ 7,110 ರೂ. (44 ಪಟ್ಟು ಹೆಚ್ಚು)
  • ಸೈಟ್ಯಾಕ್ಸ್ 100MG (ಕ್ಯಾನ್ಸರ್ ಔಷಧ): ಲ್ಯಾಂಡಿಂಗ್ ವೆಚ್ಚ 342 ರೂ. ಇದ್ದರೆ, ಎಮ್ಆರ್​ಪಿ 3,836 ರೂ. ನಿಗದಿ (1021 ಪಟ್ಟು ಲಾಭ)
  • ನ್ಯೂಕೈನ್ 300MCG: ಲ್ಯಾಂಡಿಂಗ್ ವೆಚ್ಚ 112 ರೂ. ಇದ್ದರೆ,ಎಮ್ಆರ್​ಪಿ 1,239 ರೂ. ನಿಗದಿ (1006 ಪಟ್ಟು ಲಾಭ)
  • ಬಿವಾಟಾಸ್ 400MG ಇಂಜೆಕ್ಷನ್: ಲ್ಯಾಂಡಿಂಗ್ ವೆಚ್ಚ 5,850 ರೂ. ಇದ್ದರೆ, ಎಮ್ಆರ್​ಪಿ 62,690 ರೂ. ನಿಗದಿ (971 ಪಟ್ಟು ಲಾಭ)
  • ಕಾನ್ಸೆಟ್ (Cosate 3 MIU Inj): ಲ್ಯಾಂಡಿಂಗ್ ವೆಚ್ಚ 340 ರೂ.ಇದ್ದರೆ,ಎಮ್ಆರ್​ಪಿ 3,699 ರೂ. ನಿಗದಿ (987 ಪಟ್ಟು ಲಾಭ)
LIVE TV

ಎಫ್​ಡಿಎ ಆಯುಕ್ತ ಕೆ. ಶ್ರೀನಿವಾಸ್ ಬರೆದ ಪತ್ರದಲ್ಲೇನಿದೆ?

ರಾಜ್ಯದಲ್ಲಿ ಅತಿಯಾದ ಲಾಭ ಗಳಿಸುತ್ತಿರುವ 254 ಔಷಧ ಕಂಪನಿಗಳ ದರ ಏರಿಕೆಯ ಸಮಗ್ರ ಪಟ್ಟಿಯನ್ನು ಎನ್​ಪಿಪಿಎಗೆ ಸಲ್ಲಿಸಲಾಗಿದೆ. ಡ್ರಗ್ಸ್ ಪ್ರೈಸೆಸ್ ಕಂಟ್ರೋಲ್ ಆರ್ಡರ್ (DPCO), 2013ರ ನಿಯಮಗಳ ಅಡಿಯಲ್ಲಿ ತುರ್ತಾಗಿ ಈ ದರಗಳನ್ನು ನಿಯಂತ್ರಣಕ್ಕೆ ತರಬೇಕು. ಆಸ್ಪತ್ರೆಗಳಲ್ಲಿ ವಿಧಿಸುವ ಅತಿಯಾದ ಟ್ರೇಡ್ ಮಾರ್ಜಿನ್ (ಲಾಭದ ಶೇಕಡಾವಾರು) ಪ್ರಮಾಣಕ್ಕೆ ತಕ್ಷಣವೇ ಗರಿಷ್ಠ ಮಿತಿ ನಿಗದಿಪಡಿಸಬೇಕು. ಔಷಧಗಳು, ಮೆಡಿಕಲ್ ಡಿವೈಸ್‌ಗಳು ಹಾಗೂ ಕನ್ಸ್ಯೂಮಬಲ್ಸ್‌ಗಳ ಉತ್ಪಾದನಾ/ಲ್ಯಾಂಡಿಂಗ್ ವೆಚ್ಚಕ್ಕೆ ಸೂಕ್ತ ಪ್ರಮಾಣದ ಬೆಲೆ ನಿಗದಿಪಡಿಸಿ ಬಡ ರೋಗಿಗಳ ಸುಲಿಗೆ ತಪ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ