Coffee Pudi Sakamma: ಇವರೇ ನೋಡಿ ಬೆಂಗಳೂರಿಗೆ ಕಾಫಿ ಪರಿಚಯಿಸಿದ್ದು
ಕಾಫಿ ಬೀಜವನ್ನು ದೇಶಕ್ಕೆ ಪರಿಚಯಿಸಿದ್ದು ಸೂಫಿ ಸಂತ ಬಾಬಾ ಬುಡನ್ ಎಂಬುವುದು ನಿಮಗೆಲ್ಲಾ ಗೊತ್ತೇ ಇದೆ. 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. ಆದರೆ ಈ ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿದ ಕೀರ್ತಿ ಓರ್ವ ಮಹಿಳೆಗೆ ಸಲ್ಲುತ್ತದೆ. ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ ಅಲ್ಲೇ ಹುರಿದು ಪುಡಿ ಮಾಡುವ ಮಿಲ್ ಅನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ.

ಬೆಳಗೆದ್ದು ಯಾರ ಮುಖ ಯಾರು ನೋಡ್ತಾರೋ ಇಲ್ವೊ ಒಂದು ಕಪ್ ಕಾಫಿ ಮಾತ್ರ ಕೈಗೆ ಬಂದ್ಬಿಡಬೇಕು. ಎದ್ದ ತಕ್ಷಣ ಬೆಡ್ ಶೀಟ್ ಮಡಚಿ ಇಡೋಕೂ ಮುನ್ನ ಅಮ್ಮ ಬೆಡ್ ಕಾಫಿ ತಂದು ಕೊಡಬೇಕು. ಇಲ್ಲ ಅಂದ್ರೆ ಮೂಡ್ ಆಫ್ ಆಗಿಬಿಡುತ್ತೆ. ಒಂದು ಕಪ್ ಕಾಫಿಯಿಂದಲೇ ಬಹುತೇಕರ ದಿನಚರಿ ಆರಂಭವಾಗೋದು. ಅದೆಷ್ಟೋ ಮಂದಿ ಕಾಫಿ ಹೀರುತ್ತ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ತಲೆ ನೋವು ಬರಲಿ, ಮನಸ್ಸಿಗೆ ಬೇಜಾರಾಗಲಿ, ಸ್ನೇಹಿತರ ಜೊತೆ ಹರಟೆ, ಗರ್ಲ್ ಫ್ರೆಂಡ್ ಜೊತೆ ಔಟಿಂಗ್ ವೇಳೆಯೂ ಮೊದಲು ನೆನಪಾಗೋದು ಕಾಫಿ. ನಾವೇಕೆ ಕಾಫಿ ಬಗ್ಗೆ ಇಷ್ಟೊಂದು ಹೇಳ್ತಿದ್ದೀವಿ ಅಂದುಕೊಂಡ್ರಾ? ಕಾಫಿ ಉದ್ಯಮದ ರಾಯಭಾರಿಯಾಗಿರುವ ಬೆಂಗಳೂರಿಗೆ ಕಾಫಿ ಪರಿಚಯ ಮಾಡಿದ್ದು ಓರ್ವ ಮಹಿಳೆ. ಅವರು ಯಾರು? ಹೇಗೆ ಎಂಬ ಬಗ್ಗೆ ತಿಳಿಯೋಣ ಈ ಆರ್ಟಿಕಲ್ನಲ್ಲಿ. ಬೆಳಗೆದ್ದ ತಕ್ಷಣ ಕಾಫಿ ಕುಡಿಯುವ ಚಟ ದೇಶ, ಭಾಷೆ, ಪಂಥ ಮೀರಿ ಬೆಳೆದಿದೆ. ಪ್ರತಿ ನಿತ್ಯ ಒಂದು ಕಪ್ ಕಾಫಿ ಹೀರುವುದರಿಂದ ಮನಸ್ಸಿಗೆ ಉಲ್ಲಾಸ, ಶಕ್ತಿವರ್ಧಕ, ಆರೋಗ್ಯಕ್ಕೂ ಹಿತಕರ ಎಂದು ಹೇಳಲಾಗುತ್ತೆ. ಭಾರತದಲ್ಲಿ ಕಾಫಿ ಉತ್ಪಾದನೆ, ಬಳಕೆಯಲ್ಲಿ ಗಣನೀಯ ಪಾಲು ಹೊಂದಿರುವುದು ನಮ್ಮ ಕರ್ನಾಟಕ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70ರಷ್ಟು ಪಾಲು ಇದ್ದರೆ, ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ಹೊಂದಿದೆ. ಕಾಫಿ ಬೀಜವನ್ನು ದೇಶಕ್ಕೆ ಪರಿಚಯಿಸಿದ್ದು ಸೂಫಿ ಸಂತ ಬಾಬಾ ಬುಡನ್ ಎಂಬುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ನಿಮಗೆ ಗೊತ್ತಾ ಈ...




