AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತರ ಜೀವಕ್ಕೆ ಕುತ್ತು ತರುತ್ತಿರುವ ಬೈಕ್​​ ಸ್ಟಂಟ್​​: ಮೂರು ವರ್ಷಗಳಲ್ಲಿ 27 ಮಂದಿ ಸಾವು

ಕರ್ನಾಟಕದಲ್ಲಿ ಅಪ್ರಾಪ್ತರು ಮತ್ತು ಯುವಕರಿಂದ ಬೈಕ್ ಸ್ಟಂಟ್ ಹಾಗೂ ಅಪಾಯಕಾರಿ ಚಾಲನೆ ಹೆಚ್ಚಾಗಿದ್ದು, ಭೀಕರ ಅಪಘಾತಗಳಿಗೆ ಕಾರಣವಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಇಂತಹ ಘಟನೆಗಳಿಂದ 27 ಸಾವುಗಳು ಸಂಭವಿಸಿವೆ. ಈ ಸಂಬಂಧ 1,805 ಪ್ರಕರಣಗಳು ದಾಖಲಾಗಿದ್ದು, 1.77 ಕೋಟಿ ದಂಡ ಸಂಗ್ರಹಿಸಲಾಗಿದೆ. ಬೆಂಗಳೂರು ಇಂತಹ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ.

ಅಪ್ರಾಪ್ತರ ಜೀವಕ್ಕೆ ಕುತ್ತು ತರುತ್ತಿರುವ ಬೈಕ್​​ ಸ್ಟಂಟ್​​: ಮೂರು ವರ್ಷಗಳಲ್ಲಿ 27 ಮಂದಿ ಸಾವು
ಸಾಂದರ್ಭಿಕ ಚಿತ್ರImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Apr 05, 2026 | 11:19 AM

Share

ಬೆಂಗಳೂರು, ಏಪ್ರಿಲ್​​ 05: ಇತ್ತೀಚೆಗೆ ಯುವಕರು ಬೈಕ್​​ ಸ್ಟಂಟ್, ಅಪಾಯಕಾರಿ ರೀತಿ ವಾಹನ ಚಾಲನೆ​​ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಅದೆಷ್ಟೋ ಸಾವು-ನೋವುಗಳೂ ಸಂಭವಿಸುತ್ತಿವೆ. ಈ ನಡುವೆ ಬಹಿರಂಗಗೊಂಡಿರುವ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿದೆ. ಇಂತಹ ದುಸ್ಸಾಹಸ ಮಾಡಲು ತೆರಳಿ ಅಪ್ತಾಪ್ತರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ವಾಹನಗಳಿಂದ ಸಂಭವಿಸಿದ ಅಪಘಾತಗಳಲ್ಲಿ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇಂತಹ ಘಟನೆಗಳ ಸಂಬಂಧ ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ 1,805 ಪ್ರಕರಣಗಳನ್ನು ದಾಖಲಿಸಲಾಗಿದ್ದು 1.77 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಅಕ್ರಮ ಚಾಲನೆ ಪ್ರಕರಣಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ತುಮಕೂರು, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳು ನಂತರ ಸ್ಥಾನಗಳಲ್ಲಿ ಬರಲಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ

ಅಂಕಿ-ಅಂಶ

ಬೆಂಗಳೂರು

  • 2023ರಲ್ಲಿ 240 ಪ್ರಕರಣಗಳು – ₹18.31 ಲಕ್ಷ ದಂಡ
  • 2024ರಲ್ಲಿ 378 ಪ್ರಕರಣಗಳು – ₹16.99 ಲಕ್ಷ ದಂಡ
  • 2025ರಲ್ಲಿ 632 ಪ್ರಕರಣಗಳು – ₹15.65 ಲಕ್ಷ ದಂಡ

ಮೈಸೂರು

  • 2023ರಲ್ಲಿ ಅಪ್ರಾಪ್ತರ ವಿರುದ್ಧ 21 ಹಾಗೂ ಪೋಷಕರ ವಿರುದ್ಧ 15 ಪ್ರಕರಣ – ₹13.55 ಲಕ್ಷ ದಂಡ
  • 2024ರಲ್ಲಿ ಅಪ್ರಾಪ್ತರ ವಿರುದ್ಧ 27 ಹಾಗೂ ಪೋಷಕರ ವಿರುದ್ಧ 33 ಪ್ರಕರಣ – ₹1.21 ಲಕ್ಷ ದಂಡ
  • 2025ರಲ್ಲಿ ಅಪ್ರಾಪ್ತರ ವಿರುದ್ಧ 19 ಹಾಗೂ ಪೋಷಕರ ವಿರುದ್ಧ 34 ಪ್ರಕರಣ – ₹1.37 ಲಕ್ಷ ದಂಡ

ತುಮಕೂರು

  • 2023ರಲ್ಲಿ 21 ಪ್ರಕರಣಗಳು (ಪೋಷಕರ ವಿರುದ್ಧ 8) – ₹78,000 ದಂಡ
  • 2024ರಲ್ಲಿ 35 ಪ್ರಕರಣಗಳು (ಪೋಷಕರ ವಿರುದ್ಧ 13) – ₹95,500 ದಂಡ
  • 2025ರಲ್ಲಿ 21 ಪ್ರಕರಣಗಳು (ಪೋಷಕರ ವಿರುದ್ಧ 6) – ₹1.50 ಲಕ್ಷ ದಂಡ

ಅಪ್ರಾಪ್ತ ಚಾಲನೆಯನ್ನು ತಡೆಯಲು ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಸಂಬಂಧಿಸಿದ ವಾಹನಗಳ ನೋಂದಣಿ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಶಿಫಾರಸುಗಳನ್ನು ಕಳುಹಿಸಲಾಗುತ್ತಿದೆ. ಪ್ರತಿವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ತಿಂಗಳಂದು ವಿಶೇಷ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿವೆ. ವೀಲೀ ಸ್ಟಂಟ್‌ಗಳನ್ನು ತಡೆಯಲು ಬೆಂಗಳೂರು ನಗರದಲ್ಲಿ 37 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಕಠಿಣ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:16 am, Sun, 5 April 26

Follow Us