AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ: ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಘೋಷಣೆ

ಕರ್ನಾಟಕದಲ್ಲಿ ಅರಣ್ಯದಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ನಡೆಯುತ್ತಲೇ ಇದೆ. ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಕೆಲ ಕಾಡಂಚಿನ ಜಿಲ್ಲೆಗಳಲ್ಲಿ ಚಿರತೆ, ಆನೆ, ಹುಲಿ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಆನೆಯೊಂದು ಕಾಡಿನಿಂದ ಬೆಂಗಳೂರಿಗೆ ಲಗ್ಗೆ ಇಟ್ಟಿದ್ದು, ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ: ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಘೋಷಣೆ
Ramalinga Reddy
ರಮೇಶ್ ಬಿ. ಜವಳಗೇರಾ
|

Updated on: Sep 28, 2026 | 4:58 PM

Share

ಬೆಂಗಳೂರು, (ಸೆಪ್ಟೆಂಬರ್ 28): ಕೆಂಗೇರಿ ಸಮೀಪದ ಆರ್.ಆರ್ ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಂಚೆಪಾಳ್ಯ ಗ್ರಾಮದ ನಾಗರಾಜ್ ಮೃತ ದುರ್ದೈವಿ. ಇಂದು (ಸೆಪ್ಟೆಂಬರ್ 28) ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ಅವರನ್ನು ತಕ್ಷಣವೇ ಮೈಸೂರು ರಸ್ತೆಯಲ್ಲಿರುವ ಆರ್.ಆರ್. ವೈದ್ಯಕೀಯ ಕಾಲೇಜಿಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ವಾಕಿಂಗ್‌ಗೆ ಹೋಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮೃತ ನಾಗರಾಜ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಜೊತೆಗೆ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಇನ್ನು ಘಟನಾ ಸ್ಥಳದಲ್ಲಿ ಆನೆ ದಾಳಿಯಿಂದಾಗಿ ಎರಡೂ ಕಾಂಪೌಂಡ್‌ಗಳೂ ಸಹ ಉರುಳಿಬಿದ್ದಿದೆ. ಸಿಸಿಟಿವಿಯಲ್ಲಿ ರಸ್ತೆಯಲ್ಲಿ ಆನೆ ಓಡಾಟ ಮಾಡಿರೋದು ಬೆಳಕಿಗೆ ಬಂದಿದೆ. ಬೆಳಗ್ಗೆ 5 ಗಂಟೆ 11 ನಿಮಿಷಕ್ಕೆ ಆನೆ ರಸ್ತೆಯಲ್ಲಿ ವೇಗವಾಗಿ ಓಡುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇನ್ನು ಅದೇ ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡ್‌ಗಳಲ್ಲಿ ಆನೆದಾಳಿಯಿಂದ ಬಚಾವಾಗಿದ್ದಾರೆ.

ಇದನ್ನೂ ನೋಡಿ: ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ! ಅರಣ್ಯ ಇಲಾಖೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ

ಈ ಘಟನೆಯು ಕಗ್ಗಲಿಪುರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದೆ ಮತ್ತು ಆನೆಯು ಬನ್ನೇರುಘಟ್ಟ ಪ್ರದೇಶದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ . ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ನಾಗರಾಜ್ ಅವರು ತಮ್ಮ ಪತ್ನಿ ಮತ್ತು ನಾಲ್ವರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು ಹಾಗೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಅಂಚೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದಲೂ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿ ಇದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ನಾಗರಾಜು ಅವರ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

ಹೊಸದಾಗಿ ರಸ್ತೆ ಆದ ಬಳಿಕ ಆನೆಗಳ ಓಡಾಟ ಹೆಚ್ಚಾಗಿದೆ. ಬನ್ನೇರುಘಟ್ಟದಿಂದ ಬಿಎಂಕಾವಲ್ ಭಾವಗವಾಗಿ ಓಡಾಡುತ್ತಿದ್ದು, ಕಾಡು ಬಿಟ್ಟು 5 ಕಿ.ಮೀ ಒಳಗಡೆ ಬಂದಿದೆ. ಇನ್ನು ನಾಗರಾಜ್ ಅವರು ವಾಕಿಂಗ್ ಮಾಡುತ್ತಿದ್ದಾಗ ಆನೆ ಸೊಂಡಿಲಿನಲ್ಲಿ ಎತ್ತಿ ಬಿಸಾಡಿದೆ. ಆನೆ ಸೆರೆಗೆ ಅರಣ್ಯ ಇಲಾಖೆಯ ತಂಡ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮ ವಹಿಸಲಾಗುತ್ತದೆ‌. ಮೃತರ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!