ಚಾಮರಾಜನಗರದ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ನ ಸಿಸಿ ಕ್ಯಾಮರಾ ಬಂದ್, ದೂರು ನೀಡಿದ ಬಿಜೆಪಿ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ. ಏಪ್ರಿಲ್ 26ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನವಾಗಿದ್ದರೆ, ಮೇ 07ರಂದು ಉತ್ತರ ಕರ್ನಾಟಕದ ಭಾಗದ 14 ಲೋಕಸಭಾ ಚುನಾವಣಗೆ ವೋಟಿಂಗ್ ಆಗಿದೆ. ಇನ್ನು 28 ಕ್ಷೇತ್ರಗಳ ಇವಿಎಂ ಮಷಿನ್ಗಳು ಸ್ಟ್ರಾಂಗ್ ರೂಮ್ನಲ್ಲಿ ಭದ್ರವಾಗಿದೆ. ಆದ್ರೆ, ಸ್ಟ್ರಾಂಗ್ ರೂಮ್ನ ಸಿಸಿ ಕ್ಯಾಮರಾ ಏಕಾಏಕಿ ಬಂದ್ ಆಗಿವೆ ಎನ್ನುವ ಆರೋಪ ಕೇಳಿಬಂದಿದೆ.
ಚಾಮರಾನಗರ, (ಮೇ 09): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಅಂತ್ಯವಾಗಿದ್ದು, ಇವಿಎಂ ಮಷಿನ್ಗಳು ಜಿಲ್ಲಾ ಕೇಂದ್ರಗಳ ಸ್ಟ್ರಾಂಗ್ ರೂಮ್ನಲ್ಲಿ ಭದ್ರವಾಗಿವೆ. ವೋಟಿಂಗ್ ಯಂತ್ರಗಳು ಇರಿಸಲಾಗಿದ್ದ ಸ್ಟ್ರಾಂಗ್ ರೂಮ್ಗಳಿಗೆ ಸಿಸಿಟಿವಿ () ಜೊತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆದ್ರೆ, ಚಾಮರಾಜನಗರದ (Chamarajnagar Loksabha) ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಮ್ಗೆ ಇರಿಸಲಾಗಿದ್ದ ಸಿಸಿ ಕ್ಯಾಮರಾಗಳು ಏಕಾಏಕಿ ಬಂದ್ ಆಗಿವೆ ಎನ್ನುವ ಆರೋಪ ಕೇಳಿಬಂದಿದೆ. ಸ್ಟ್ರಾಂಗ್ ರೂಮ್ನ 8 ಕೊಠಡಿಗಳ ಸಿಸಿ ಕ್ಯಾಮರಾ ಏಕಾಏಕಿ ಬಂದ್ ಆಗಿವೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಆರೋಪಿಸಿದ್ದು, ಸಂಬಂಧ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಇವಿಎಂ ಇಟ್ಟಿರುವ ಕೊಠಡಿಗಳ ಸಿಸಿ ಟಿವಿಗಳು ನಿನ್ನೆ (ಮೇ 08) ಬೆಳಗ್ಗೆ 10 ಗಂಟೆಯಿಂದ ಏಕಾಏಕಿ ಬಂದ್ ಆಗಿವೆ. ಬಿಜೆಪಿ ಮುಖಂಡ ನಾರಾಯಣ ಪ್ರಸಾದ್ ಭೇಟಿ ನೀಡಿದ್ದಾಗ ಸಿಸಿ ಕ್ಯಾಮರಾಗಳು ಬಂದ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ಬಿಜೆಪಿ ನಿಯೋಗ ಚುನಾವಣೆ ಆಯೋಗಕ್ಕೆ ದೂರು ನೀಡಿದೆ. ಆದ್ರೆ, ಇತ್ತ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ಡಿಸ್ಪ್ಲೇ ಬಂದ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಕೊಠಡಿಯ ಸಿಸಿಕ್ಯಾಮರಾ ದೃಶ್ಯಗಳನ್ನು ನೀಡುವುದಾಗಿ ಅಧಿಕಾರಿಗಳ ಭರವಸೆ ನೀಡಿದ್ದಾರೆ.
ಮೊದಲೇ ಇವಿಎಂ ಮೇಲೆ ಬಹಳ ಅನುಮಾನಗಳು ವ್ಯಕ್ತವಾಗುತ್ತಿವೆ. ವೋಟಿಂಗ್ ಮುಗಿದ ಬಳಿಕ ಮತಗಟ್ಟಯಲ್ಲೇ ಪೋಲಿಂಗ್ ಏಜೆಂಟ್ಗಳ ಮುಂದೆಯೇ ಮತಯಂತ್ರಗಳಿಗೆ ಸೀಲ್ ಮಾಡಲಾಗುತ್ತದೆ. ಬಳಿಕ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್ಗೆ ಕೊಂಡೊಯ್ಯಲಾಗುತ್ತದೆ.
ಇನ್ನು ಸ್ಟ್ರಾಂಗ್ ರೂಮ್ನಲ್ಲೂ ಮತಯಂತ್ರಗಳು ಸಿಸಿ ಕ್ಯಾಮಾರಗಳ ಕಣ್ಗಾವಲಲ್ಲಿ ಇರುತ್ತವೆ. ಮತದಾನ ದಿನದಂದೇ ಎಲ್ಲರ ಮುಂದೆ ಸೀಲ್ ಓಪನ್ ಮಾಡಲಾಗುತ್ತದೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಸಹ ಕೆಲವೊಂದು ಅನಾಹುತಗಳು ನಡೆದ ಉದಾಹರಣೆಗಳು ಇವೆ. ಮಷಿನ್ ಬದಲಾವಣೆ, ಇವಿಎಂಗಳ ಮೇಲೆ ಹಲವರಲ್ಲಿ ಅನುಮಾನಗಳು ಇವೆ. ಇದರ ಮಧ್ಯೆ ಇದೀಗ ಚಾಮರಾಜನಗರದಲ್ಲಿ ಅಂತಗದ್ದೇ ಅನುಮಾನ ವ್ಯಕ್ತವಾಗಿದೆ.
ಈ ಚಾಮರಾನಗರ ಎಸ್ಸಿ ಲೋಕಸಭಾ ಕ್ಷೇತ್ರದಲ್ಲಿ ಈ ಭಾರಿ ಕಾಂಗ್ರೆಸ್ನಿಂದ ಸಚಿವ ಎಚ್ಸಿ ಮಹದೇವಪ್ಪ, ಬಿಜೆಪಿಯಿಂದ ಬಾಲರಾಜ್ ಅವರು ಸ್ಪರ್ಧೆ ಮಾಡಿದ್ದು, ಈಗಾಗಲೇ ಉಭಯ ನಾಯಕರ ಭವಿಷ್ಯ ಮತಯಂತ್ರಗಳಲ್ಲಿ ಅಡಗಿದೆ. ಇನ್ನು ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಇದರ ಮಧ್ಯ ಈ ಒಂದು ಅನುಮಾನ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ