ದೇವರ ಹುಂಡಿಯಲ್ಲಿ ಫೇಕ್ ನೋಟ್, ವಿಚಿತ್ರ ಹರಕೆಗೆ ಅರ್ಚಕರ ಆಕ್ರೋಶ!

ಚಿಕ್ಕಬಳ್ಳಾಪುರ: ಅದು ಇತಿಹಾಸ ಪ್ರಸಿದ್ಧ ದೇಗುಲ. ಆ ದೇಗುಲಕ್ಕೆ ಬಂದ ಭಕ್ತರು ಬೇಡಿಕೊಂಡಿದ್ದೆಲ್ಲವೂ ನೆರವೇರುತ್ತೆ ಅನ್ನೋ ನಂಬಿಕೆ ತಲೆತಲಾಂತರದಿಂದಲೂ ಇದೆ. ಆದರೆ ಹುಂಡಿ ತೆರೆದಾಗ ಸಿಕ್ಕಿದ್ದು ಮಾತ್ರ ಡಿಫರೆಂಟ್, ಡಿಫರೆಂಟ್ ಬೇಡಿಕೆಗಳು. ಆ ಬೇಡಿಕೆಗಳನ್ನ ನೋಡಿ ಕೆಲವರು ನಕ್ಕು ಸುಮ್ಮನಾದರೆ, ಪುರೋಹಿತರು ಮಾತ್ರ ಗರಂ ಆಗಿದ್ದರು. ದೇವರ ಹುಂಡಿಯಲ್ಲಿ ಫೇಕ್ ನೋಟ್, ವಿಚಿತ್ರ ಹರಕೆ! ಅಂದ ಹಾಗೆ ಇದು ಇತಿಹಾಸ ಪ್ರಸಿದ್ಧ ಭೋಗನಂದೀಶ್ವರಸ್ವಾಮಿ ದೇಗುಲ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸ್ತಾರೆ. ಅದ್ರಲ್ಲೂ […]

ದೇವರ ಹುಂಡಿಯಲ್ಲಿ ಫೇಕ್ ನೋಟ್, ವಿಚಿತ್ರ ಹರಕೆಗೆ ಅರ್ಚಕರ ಆಕ್ರೋಶ!
Follow us
ಸಾಧು ಶ್ರೀನಾಥ್​
|

Updated on:Jan 12, 2020 | 7:12 PM

ಚಿಕ್ಕಬಳ್ಳಾಪುರ: ಅದು ಇತಿಹಾಸ ಪ್ರಸಿದ್ಧ ದೇಗುಲ. ಆ ದೇಗುಲಕ್ಕೆ ಬಂದ ಭಕ್ತರು ಬೇಡಿಕೊಂಡಿದ್ದೆಲ್ಲವೂ ನೆರವೇರುತ್ತೆ ಅನ್ನೋ ನಂಬಿಕೆ ತಲೆತಲಾಂತರದಿಂದಲೂ ಇದೆ. ಆದರೆ ಹುಂಡಿ ತೆರೆದಾಗ ಸಿಕ್ಕಿದ್ದು ಮಾತ್ರ ಡಿಫರೆಂಟ್, ಡಿಫರೆಂಟ್ ಬೇಡಿಕೆಗಳು. ಆ ಬೇಡಿಕೆಗಳನ್ನ ನೋಡಿ ಕೆಲವರು ನಕ್ಕು ಸುಮ್ಮನಾದರೆ, ಪುರೋಹಿತರು ಮಾತ್ರ ಗರಂ ಆಗಿದ್ದರು.

ದೇವರ ಹುಂಡಿಯಲ್ಲಿ ಫೇಕ್ ನೋಟ್, ವಿಚಿತ್ರ ಹರಕೆ! ಅಂದ ಹಾಗೆ ಇದು ಇತಿಹಾಸ ಪ್ರಸಿದ್ಧ ಭೋಗನಂದೀಶ್ವರಸ್ವಾಮಿ ದೇಗುಲ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸ್ತಾರೆ. ಅದ್ರಲ್ಲೂ ಸಮಸ್ಯೆಗಳಿಂದ ನರಳುತ್ತಿರುವವರು ಇಲ್ಲಿಗೆ ಬಂದು ಬೇಡಿಕೊಂಡ್ರೆ ಇಷ್ಟಾರ್ಥ ನೆರವೇರೋದಲ್ದೆ, ಸಮಸ್ಯೆಗೆ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕೆಲ ಕಿಡಿಗೇಡಿಗಳು ಮಾಡಬಾರದ ಕೆಲಸ ಮಾಡಿದ್ದಾರೆ. ಕೆಲವರು ಫೇಕ್ ನೋಟ್ ಹಾಗೂ ಬ್ಯಾನ್ ಆಗಿರೋ ನೋಟ್​ಗಳನ್ನ ಹುಂಡಿಗೆ ಹಾಕಿದ್ರೆ. ಮತ್ಯಾರೋ ಆಸಾಮಿ ರಕ್ತದಲ್ಲಿ ಬರೆದಿರೋ ಪತ್ರವನ್ನ ಹುಂಡಿಗೆ ಹಾಕಿ ಪ್ರೇಮ ನಿವೇದನೆ ಹೊರ ಹಾಕಿದ್ದಾನೆ.

ಕಿಡಿಗೇಡಿಗಳ ವಿರುದ್ಧ ಆಕ್ರೋಶಗೊಂಡ ಅರ್ಚಕರು! ಇದೆಷ್ಟೇ ಅಲ್ಲ, ಇನ್ನೂ ಚಿತ್ರ ವಿಚಿತ್ರ ಬೇಡಿಕೆಗಳಿರೋ ಪತ್ರಗಳನ್ನ ಹುಂಡಿಗೆ ಹಾಕಲಾಗಿದೆ. ಕೆಲವರು ಊರಿನ ಕೆಲಸ ಆಗಲಿ ಅಂತಾ, ಮತ್ತೆ ಕೆಲವರು ಮೂಲ ಸೌಕರ್ಯ ಸಮಸ್ಯೆ ಬಗೆಹರಿಯಲಿ ಅಂತಾ ಬೇಡಿಕೊಂಡು ಪತ್ರವನ್ನ ಹುಂಡಿಗೆ ಹಾಕಿದ್ದಾರೆ. ಹಾಗೇ ತಮ್ಮ ವೈಯಕ್ತಿಕ ಸಮಸ್ಯೆಗಳನ್ನ ಬಗೆಹರಿಸಪ್ಪ ತಂದೆ ಅಂತಾ ದೇವರಿಗೆ ಮೊರೆ ಇಟ್ಟವರ ಸಂಖ್ಯೆ ಕೂಡ ದುಪ್ಪಟ್ಟಿದೆ. ಇನ್ನು ಈ ಘಟನೆಯಿಂದ ಅರ್ಚಕರು ಕೆಂಡವಾಗಿದ್ದಾರೆ. ಒಟ್ನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ದೇಗುಲದಲ್ಲಿ, ಕಿಡಿಗೇಡಿ ಕೃತ್ಯಗಳನ್ನ ತಪ್ಪಿಸಬೇಕು ಅನ್ನೋದು ಭಕ್ತರ ಬೇಡಿಕೆಯಾಗಿದೆ.

Published On - 7:12 pm, Sun, 12 January 20

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್