AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಬೆಟ್ಟಕ್ಕೆ 5 ದಿನ ಪ್ರವಾಸಿಗರಿಗೆ ನಿರ್ಬಂಧ: ಯಾವಾಗಿನಿಂದ? ಇಲ್ಲಿದೆ ವಿವರ

ಜೂನ್ 19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 5 ದಿನ ನಂದಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ವಾಹನ ದಟ್ಟಣೆಯನ್ನು ತಪ್ಪಿಸಲು ಹಾಗೂ ಸುಗಮ ಸಭೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಜೂನ್ 17 ರಿಂದ 19 ರವರೆಗೆ ಹೋಟೆಲ್ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ.

ನಂದಿ ಬೆಟ್ಟಕ್ಕೆ 5 ದಿನ ಪ್ರವಾಸಿಗರಿಗೆ ನಿರ್ಬಂಧ: ಯಾವಾಗಿನಿಂದ? ಇಲ್ಲಿದೆ ವಿವರ
ನಂದಿ ಬೆಟ್ಟ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ವಿವೇಕ ಬಿರಾದಾರ

Updated on:Jun 10, 2025 | 8:58 PM

ಚಿಕ್ಕಬಳ್ಳಾಪುರ, ಜೂನ್​ 10: 2025ನೇ ಸಾಲಿನ 13ನೇ ರಾಜ್ಯ ಸಚಿವ ಸಂಪುಟದ ಸಭೆ (Cabinet Meeting) ಜೂನ್ 19 ರಂದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಗಿರಿಧಾಮದಲ್ಲಿ (Nandi Hills) ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಭಾಗಿಯಾಗುತ್ತಾರೆ. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20ರ ನಸುಕಿನ ಜಾವ 5 ಗಂಟೆವರೆಗೂ ಸಾರ್ವಜನಿಕರು ನಂದಿ ಬೆಟ್ಟಕ್ಕೆ ಬರದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಆದೇಶ ಹೊರಡಿಸಿದ್ದಾರೆ.

ಇನ್ನು ನಂದಿ ಬೆಟ್ಟದ ಮೇಲೆ ಇರುವ ಅತಿಥಿ ಗೃಹಗಳ ಕಾರ್ಯ ಚಟುವಟಿಕೆಗೂ ನಿರ್ಬಂಧ ಹೇರಲಾಗಿದೆ. ಜೂನ್ 17 ರಿಂದ 19 ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕಿಂಗ್ ರದ್ದು ಮಾಡಲಾಗಿದೆ.

ಏಕೆ ಬಂದ್ ಮಾಡಲಾಗಿದೆ

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಂದಿ ಬೆಟ್ಟದಲ್ಲಿನ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20 ರ ಬೆಳಿಗ್ಗೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಹಾಗೂ ಜೂನ್ 17 ರಿಂದ 19 ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕ್ಕಿಂಗ್ ನಿಷೇಧಿಸಿದ್ದಾರೆ.

ಇದನ್ನೂ ಓದಿ
Image
ಜಾತಿ ಗಣತಿ: ಕಾಂಗ್ರೆಸ್ ಹೈಕಮಾಂಡ್ ನಡೆ ಸ್ವಾಗತಿಸಿದ ಕರ್ನಾಟಕ ವೀರಶೈವ ಮಹಾಸಭ
Image
ಕಾಲ್ತುಳಿತ: 11 ಜನರ ಸಾವಿನ 1 ದುರಂತದಲ್ಲಿ ಸಿಲುಕಿ ಒದ್ದಾಡುತ್ತಿರುವ ಸರ್ಕಾರ
Image
ಕಾಲ್ತುಳಿತ: ಕೋರ್ಟ್​ನಲ್ಲಿ ಸಿಐಡಿಗೆ ಹಿನ್ನೆಡೆ, ಆರೋಪಿಗಳು ಮತ್ತೆ ಜೈಲಿಗೆ
Image
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಕಾರಣವೇನು? ಸ್ಫೋಟಕ ಅಂಶಗಳು ಬಯಲಿಗೆ!

ನಂದಿ ಬೆಟ್ಟದಲ್ಲಿ ಸಾರ್ಕ್​ ಶೃಂಗಸಭೆ

1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್​ ಶೃಂಗಸಭೆ ನಡೆದಿತ್ತು. ಇದೀಗ, ರಾಜ್ಯ ಸರ್ಕಾರ ನಂದಿ ಬೆಟ್ಟದಲ್ಲಿನ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಬೆಟ್ಟದ ಪ್ರಕೃತಿ ಸೊಬಗಿಗೆ ಮನಸೋತಿದ್ದರು.

ಇದನ್ನೂ ಓದಿ: ಜಾತಿ ಜನಗಣತಿ ಮರು ಸರ್ವೇಗೆ ಕಾರಣಗಳೇನು? ಅಚ್ಚರಿ ಮೂಡಿಸಿದ ಕೈ ಹೈಕಮಾಂಡ್ ನಿರ್ಧಾರ..!

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ

ಇದೇ ವರ್ಷ ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿತ್ತು. ಕಳೆದ ವರ್ಷ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Tue, 10 June 25

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ