ಮೆಟ್ರೋ, DRDO, IISC ಸ್ಫೋಟಿಸುವುದಾಗಿ ಬೆದರಿಕೆ, ಅರೆಸ್ಟ್ ಮಾಡಿದ್ರೆ ದರ್ಶನ್ ಪಕ್ಕದ ಸೆಲ್​ ಹಾಕಿ ಎಂದ ಯುವಕ

ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಪೃಥ್ವಿರಾಜ್ ಎಂಬ ಯುವಕ ಚಿತ್ರದುರ್ಗದ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ಧ ವಾಗ್ದಾಳಿ ಮಾಡುವ ವಿಡಿಯೋ ಮಾಡಿದ್ದು ಈ ವೇಳೆ ಬೆದರಿಕೆ ಕೂಡ ಹಾಕಿದ್ದಾನೆ. ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆ. ನನ್ನನ್ನು ಅರೆಸ್ಟ್ ಮಾಡಿದರೆ ದರ್ಶನ್ ಅವರ ಪಕ್ಕದ ಸೆಲ್​ಗೆ ಹಾಕಿ ಎಂದು ದರ್ಪ ಮೆರೆದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಮೆಟ್ರೋ, DRDO, IISC ಸ್ಫೋಟಿಸುವುದಾಗಿ ಬೆದರಿಕೆ, ಅರೆಸ್ಟ್ ಮಾಡಿದ್ರೆ ದರ್ಶನ್ ಪಕ್ಕದ ಸೆಲ್​ ಹಾಕಿ ಎಂದ ಯುವಕ
ಮೆಟ್ರೋ, DRDO, IISC ಸ್ಫೋಟಿಸುವುದಾಗಿ ಬೆದರಿಕೆ, ಅರೆಸ್ಟ್ ಮಾಡಿದ್ರೆ ದರ್ಶನ್ ಪಕ್ಕದ ಸೆಲ್​ ಹಾಕಿ ಎಂದ ಯುವಕ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಆಯೇಷಾ ಬಾನು

Updated on:Jul 28, 2024 | 2:49 PM

ಚಿತ್ರದುರ್ಗ, ಜುಲೈ.28: ಮೆಟ್ರೋ, DRDO, IISC ಬ್ಲಾಸ್ಟ್ ಮಾಡ್ತೀನೆಂದು ಯುವಕ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದು ಅಕಸ್ಮಾತ್ ನನ್ನನ್ನು ಬಂಧಿಸಿದರೆ ಡಿಬಾಸ್ ದರ್ಶನ್ (Actor Darshan) ಪಕ್ಕದ ಸೆಲ್​ಗೆ ಹಾಕಿ ಎಂದು ಮನವಿ ಮಾಡಿ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಗಾಂಧಿನಗರದ ಪೃಥ್ವಿರಾಜ್ ಎಂಬ ಯುವಕನ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಪೃಥ್ವಿರಾಜ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಗೊಂದಲಕ್ಕೊಳಗಾದ ಪೃಥ್ವಿರಾಜ್ ತಾಯಿ 4 ದಿನದ ಹಿಂದೆ ಚಳ್ಳಕೆರೆ ಠಾಣೆಗೆ ಹೋಗಿ ನನ್ನ ಪುತ್ರ ಪೃಥ್ವಿರಾಜ್ ನಾಪತ್ತೆ ಆಗಿದ್ದಾನೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ನೀಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದರು.

ಬಳಿಕ ಕೆಲ ದಿನಗಳು ಆದ ನಂತರ ಪೃಥ್ವಿರಾಜ್ ವಾಪಸ್ ತಾಯಿ ಮನೆಗೆ ಬಂದಿದ್ದು ತಾಯಿ ತನ್ನ ಮಗನ ಬಳಿ ಪೊಲೀಸ್ ಠಾಣೆಯಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ. ತನ್ನ ತಾಯಿಯ ದೂರು ಪಡೆಯದೆ ವಾಪಸ್ ಕಳಿಸಿದ್ದಕ್ಕೆ ಕೆಂಡವಾಗಿದ್ದ ಪೃಥ್ವಿರಾಜ್, ಚಳ್ಳಕೆರೆ ಠಾಣೆ ಬಳಿಗೆ ತೆರಳಿ ವಿಡಿಯೋ ಮಾಡಿದ್ದಾನೆ. ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಪೊಲೀಸರು ಮೊಬೈಲ್ ಆಫ್ ಮಾಡು ಎಂದರೂ ಮಾತು ಕೇಳಿರಲಿಲ್ಲ. ಕೊನೆಗೆ ಪೃಥ್ವಿರಾಜ್ ನನ್ನು ಹಿಡಿದು ಮೊಬೈಲ್ ಕಸಿದುಕೊಂಡು ಪೊಲೀಸರು ಬುದ್ದಿ ಹೇಳಿದ್ದರು.

ಇದನ್ನೂ ಓದಿ: Viral Video: ಗಂಡನಿಂದ ಡಿವೋರ್ಸ್‌ ಸಿಕ್ಕಿದ್ದೇ ತಡ, ಖುಷಿಗೆ ಫ್ರೆಂಡ್ಸ್‌ ಜೊತೆ ಭರ್ಜರಿ ಪಾರ್ಟಿ ಮಾಡಿದ ಪಾಕಿಸ್ತಾನಿ ಮಹಿಳೆ; ವಿಡಿಯೋ ವೈರಲ್‌

ಪೊಲೀಸ್ ಠಾಣೆಯಿಂದ ಮತ್ತೊಂದು ವಿಡಿಯೋ ಮಾಡಿದ ಯುವಕ

ಇನ್ನು ಇಷ್ಟೆಲ್ಲಾ ಆದ ಬಳಿಕ ಪೃಥ್ವಿರಾಜ್, ಪೊಲೀಸ್ ಠಾಣೆಯಿಂದ ಮತ್ತೊಂದು ವಿಡಿಯೋ ಮಾಡಿದ್ದಾನೆ. ನಾವು ಪೊಲೀಸರಿಗೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರು ನನಗೆ ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ. ನನ್ನ ತಾಯಿಯ ಎದುರೇ ಠಾಣೆಯೊಳಗೆ ಹಿಡಿದೊಯ್ದು ಹಲ್ಲೆ ಮಾಡಿದ್ದಾರೆ. ನಾನು ಎಸ್ಪಿ, ಡಿಸಿ ಬಳಿಗೆ ಹೋಗಿ ನ್ಯಾಯ ಕೇಳುತ್ತೇನೆ. ನ್ಯಾಯ ಸಿಗದಿದ್ದರೆ ಏನು ಮಾಡಬೇಕೆಂದು ಗೊತ್ತಿದೆ. ಡಿಪ್ಲೊಮಾ ಅನ್ ಕಂಪ್ಲೀಟ್ ಆಗಿದ್ದರೂ ಎಲೆಕ್ಟ್ರಿಕಲ್ ಕೆಲಸ ಗೊತ್ತು. ಬೆಂಗಳೂರಿನ ಮುಖ್ಯ ಕೆಂದ್ರಗಳಿಗೆ ಎಲ್ಲಿಂದ ವಿದ್ಯುತ್ ಕನೆಕ್ಷನ್ ಇದೆ ಗೊತ್ತು. ರಾಜಭವನ, ವಿಧಾನಸೌಧ, ಮೆಟ್ರೋ, ಇಸ್ರೋ, ಡಿಆರ್​ಡಿಓ ಎಲ್ಲಾ ಗೊತ್ತು. ಎಲ್ಲಿ ಏನು ಮಾಡಿದರೆ ಬ್ಲಾಸ್ಟ್ ಆಗುತ್ತದೆಂದು ಗೊತ್ತು. ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿರಾಜ್ ಹರಿಬಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:41 pm, Sun, 28 July 24