ಹಿಂದೂ ಯುವತಿಯ ಮೈ ಮುಟ್ಟಿ ಅನ್ಯಕೋಮಿನ ಯುವಕನಿಂದ ಕಿರುಕುಳ ಆರೋಪ
ಯುವತಿ ಬೊಬ್ಬೆ ಹಾಕಿದ ಕೂಡಲೇ ಬದ್ರುದ್ದೀನ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿ ಬದ್ರುದ್ದೀನ್ ನನ್ನ ತಕ್ಷಣ ಬಂಧಿಸಲು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಂಗಳೂರು: ಹಿಂದೂ (Hindu) ಯುವತಿಯ ಮೈ ಮುಟ್ಟಿ ಅನ್ಯಕೋಮಿನ ಯುವಕನಿಂದ ಕಿರುಕುಳ (physical harassment) ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ (dakshina kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ತಿಂಗಳಾಡಿ ಎಂಬಲ್ಲಿ ಈ ಅಪ್ರಿಯ ಘಟನೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಇಂದು ಸಂಜೆ ತಿಂಗಳಾಡಿಯ ಸೂಪರ್ ಬಜಾರ್ ಗೆ ಯುವತಿ ಬಂದಿದ್ದಳು. ಮಾಲೀಕ ಚಹಾ ಕುಡಿಯಲು ಹೋಗಿದ್ದ ವೇಳೆ ಬದ್ರುದ್ದೀನ್ ಎಂಬಾತ ಕಿರುಕುಳವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ ಬೊಬ್ಬೆ ಹಾಕಿದ ಕೂಡಲೇ ಬದ್ರುದ್ದೀನ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿ ಬದ್ರುದ್ದೀನ್ ನನ್ನ ತಕ್ಷಣ ಬಂಧಿಸಲು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹೊಯ್ಸಳ ವಾಹನದೊಂದಿಗೆ ಆಗಮಿಸಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಸರಿನಲ್ಲಿ ನಖಲಿ ವಾಟ್ಸಾಪ್ ಅಕೌಂಟ್!
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಸರಿನಲ್ಲಿ ನಖಲಿ ವಾಟ್ಸಾಪ್ ಅಕೌಂಟ್ ತೆರೆಯಲಾಗಿದೆ. ಅಕೌಂಟ್ ನಲ್ಲಿ ಡಿ ಸಿ ಅವರ ಫೋಟೊ ಬಳಸಿ, ಹಣ ಕೇಳಿ ಮೆಸೇಜ್ ಮಾಡಲಾಗಿದೆ. ಅವರ ಜಿ-ಮೇಲ್ ಅಕೌಂಟ್ ಹ್ಯಾಕ್ ಮಾಡಿ, ಕಾಂಟಾಕ್ಟ್ ಕಲೆಕ್ಟ್ ಮಾಡಲಾಗಿದೆ. ವಾಟ್ಸಾಪ್ ಅಕೌಂಟ್ ನಲ್ಲಿರುವ ಪರಿಚಯಸ್ಥರಿಗೆ ಮೆಸೇಜ್ ಮಾಡಿ, ಕಿಡಿಗೇಡಿಗಳು ಹಣ ಕೇಳುತ್ತಿದ್ದಾರೆ.
ಈ ಫೋನ್ ನಂಬರ್ ಮತ್ತು ಅಕೌಂಟ್ ನನ್ನದಲ್ಲ. ಯಾರೂ ಸಹ ಹಣ ಹಾಕಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇದೀಗ ಕೋರಿದ್ದಾರೆ. 85907 10748 ಈ ನಂಬರ್ ಬಳಸಿ ನಖಲಿ ಅಕೌಂಟ್ ಸೃಷ್ಟಿಸಲಾಗಿದೆ.
Published On - 9:11 pm, Wed, 14 September 22