DUDA site: ದೂಡಾ ಸೈಟ್ ಭೂ ಖರೀದಿ ವಿವಾದದ ಹುತ್ತ: ಯೋಜನೆ ಕೈಬಿಟ್ಟ ಸರ್ಕಾರ, ನಿಟ್ಟುಸಿರುಬಿಟ್ಟ ರೈತರು
Duda Site Land Cancel: ಎರಡ್ಮೂರು ವರ್ಷಗಳಿಂದ ದಾವಣಗೆರೆ ವ್ಯಾಪ್ತಿಯ ಹಳೇ ಕುಂದುವಾಡದಲ್ಲಿ ಸುಮಾರು 53 ಎಕರೆ ಪ್ರದೇಶ ಗುರುತಿಸಿದ DUDA ಹೊಸ ಬಡಾವಣೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿತ್ತು. ಆದರೆ ಸರ್ಕಾರದ ಮೀನಾಮೇಷವೋ, ಅಧಿಕಾರಿಗಳ ನಿರ್ಲಕ್ಷ್ಯವೋ ಲೇ ಔಟ್ ಗೆ ಅಂತಿಮ ಅನೋದನೆಯೇ ಸಿಗಲಿಲ್ಲ. ಈಗ ಜಿಲ್ಲಾಡಳಿತ ಕುಂದವಾಡ ರೈತರ ಜಮೀನು ವಶ ಪಡಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಮುಂದೇನು?
ಅಲ್ಲಿ ಪ್ರತಿ ಎಕರೆ ಜಮೀನಿಗೆ (Duda Site Land Cancel) ಬರೋಬರಿ ನಾಲ್ಕು ಕೋಟಿ ರೂಪಾಯಿ ದರವಿದೆ. ಆದ್ರೆ ಇಂತಹ ಜಮೀನು ಕೇವಲ ಒಂದು ಕೋಟಿ 28 ಲಕ್ಷ ರೂಪಾಯಿ ಖರೀದಿಗೆ ಮುಂದಾಗಿತ್ತು ಸರ್ಕಾರ (Davanagere Urban Development Agency -DUDA). ಮೂರು ವರ್ಷಗಳಿಂದ ಹೀಗೆ ಮಾತುಕತೆ ಕಟ್ಟುತ್ತಾ ನಡೆದಿತ್ತು. ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಎನ್ನುತ್ತಾರೆ. ತರಾತುರಿಯಲ್ಲಿ ವಶಕ್ಕೆ ಪಡೆಯಲು ಮುಂದಾಗಿದ್ದ ಸರ್ಕಾರ ಇದೀಗ ಹಿಂದೆ ಸರಿದಿದೆ. ಯಪ್ಪಾ ಬದುಕಿದೆಯಾ ಬಡ ಜೀವವೇ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ರೈತರು (Farmers). ಇಲ್ಲಿ ನೋಡಿ ದೂಡಾ ಸೈಟ್ ಸ್ಥಳ ಕುರಿತರಾದ ವಿವಾದದ ಹುತ್ತ.
ದೂಡಾದಿಂದ ರೋಸಿ ಹೋಗಿದ್ದರು ರೈತರು, ಪ್ರಾಧಿಕಾರಕ್ಕೆ ಜಮಾಯಿಸಿ ಆಯುಕ್ತರಿಗೆ ಜಮೀನು ನೀಡುವುದಿಲ್ಲ.. ಅದೇನು ಮಾಡ್ತಿರಾ ಮಾಡಿ ನೋಡೋಣ ಎಂದು ಸವಾಲು ಹಾಕಿ, ಹೋರಾಟ ಮಾಡುತ್ತಲೇ ಇದ್ದರು. ಎಸ್ ಎಸ್ ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೆ ತಡ ರೈತರಿಗೆ ಮರು ಜೀವ ಬಂದಿತ್ತು. ಈ ಮೊದಲು ಡಿಸಿಗೆ ಮನವರಿಕೆ ಮಾಡಿ ಜಮೀನು ಉಳಿಸಿಕೊಡುವಂತೆ ಆಗ್ರಹಿದ್ದರು. ಈ ಎಲ್ಲಾ ಸನ್ನಿವೇಶಗಳು ಕಂಡು ಬಂದಿದ್ದು, ಬೆಣ್ಣೆನಗರಿ ದಾವಣಗೆರೆಯಲ್ಲಿ.
ಹೌದು. ದಾವಣಗೆರೆ ದೂಡಾ ಇಲಾಖೆ ಮಾಡುವ ಅವಾಂತರಗಳು ಒಂದೆರೆಡಲ್ಲ.. ಆಗ ಸೈಟ್ ಗೆ ಬೇಡಿಕೆ ಅರ್ಜಿ ಕರೆದು ರಂಪ ಮಾಡಿತ್ತು. ಈಗ ಅದೇ ಅರ್ಜಿಗೆ ಸೈಟ್ ವಿತರಣೆ ಮಾಡಬೇಕಲ್ಲ.. ಆ ಸೈಟ್ ವಿತರಣೆ ಹಾಗಿರಲಿ, ನಿರ್ಮಾಣ ಮಾಡಲು ಜಮೀನು ಖರೀದಿಯೇ ವಿಚಿತ್ರ ಸಮಸ್ಯೆ ಅನ್ನೋ ತರ ಆಗಿಹೋಗಿದೆ.
ಹೌದು. ಎರಡ್ಮೂರು ವರ್ಷಗಳಿಂದ ದಾವಣಗೆರೆ ನಗರ ವ್ಯಾಪ್ತಿಯ ಹಳೇ ಕುಂದುವಾಡದಲ್ಲಿ ಸುಮಾರಿ 53 ಎಕರೆ ಪ್ರದೇಶ ಗುರುತಿಸಿ ಹೊಸ ಬಡಾವಣೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿತ್ತು. ಆದರೆ ಸರ್ಕಾರದ ಮೀನಾಮೇಷವೋ, ಅಧಿಕಾರಿಗಳ ನಿರ್ಲಕ್ಷ್ಯವೋ ಎರಡ್ಮೂರು ವರ್ಷಗಳಿಂದ ಲೇ ಔಟ್ ಗೆ ಅಂತಿಮ ಅನೋದನೆಯೇ ಸಿಕ್ಕಿರಲಿಲ್ಲ. ಈಗ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡು ಕುಂದವಾಡ ರೈತರ ಜಮೀನು ವಶ ಪಡಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ.
ಇನ್ನು ಈ ಹಿಂದೆಯೂ ರೈತರನ್ನು ಕರೆಯದೇ ದರ ನಿಗಧಿ ಮಾಡಿ ದೂಡಾ ಇಲಾಖೆ ರೈತರ ಕೆಂಗಣಿಗೆ ಗುರಿಯಾಗಿತ್ತು, ಬಳಿಕ, ರೈತರ ಜೊತೆ ಸರಿಯಾದ ಸಮಲೋಚನೆಯೂ ಮಾಡದೇ ಎಡಬಿಡಂಗಿತನ ಮಾಡಿತ್ತು. ಈಗ ಮೂರು ವರ್ಷಗಳೇ ಸಮೀಪಿಸಿದ್ದರೂ ಜಮೀನು ಮಾತ್ರ ಖರೀದಿ ಮಾಡಿರಲಿಲ್ಲ. ಈಗ ಒಂದೇ ಕಡೆ ಸಿಗುವಂತೆ ಐದು ನೂರು ಎಕರೆ ಪ್ರದೇಶ ನೋಡುತ್ತಿದೆ ಜಿಲ್ಲಾಡಳಿತ. ಜೊತೆಗೆ ಹಳೇ ದರಕ್ಕೆ ಜಮೀನುಗಳು ಸಿಗುತ್ತಿಲ್ಲ. ಬೇರೆಡೆ ಜಮೀನು ದುಬಾರಿಯಾಗಿದೆ. ಜೊತೆಗೆ ಈ ಹಿಂದೆ ಸರ್ಕಾರಿ ದರದಲ್ಲಿ ಸೈಟ್ ನೀಡುತ್ತೇವೆ ಎಂದು ಈಗ ಇಲ್ಲ ಎನ್ನುತ್ತಿದ್ದರು. ಈಗ ಜಮೀನು ವಶ ಪಡಿಸಿಕೊಳ್ಳುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಹಾಗಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದ್ರೆ ಈಗಾಗಲೇ ಸಾವಿರಾರು ಜನರಿಗೆ ಸೈಟ್ ಕೊಡುವುದಾಗಿ ಹೇಳಿ ನಗರಾಭಿವೃದ್ಧಿ ಪ್ರಾಧಿಕಾರ ಹಣ ಕಟ್ಟಿಸಿಕೊಂಡಿದೆ. ಆದ್ರೆ ಅವರಿಗೆ ಸೈಟ್ ಕೊಡಲು ಜಮೀನು ಮಾತ್ರ ಖರೀದಿ ಮಾಡಿಲ್ಲ! ಒಟ್ಟಾರೆ ಹೊಸ ಲೇ ಔಟ್ ಮಾಡುತ್ತೇವೆ ಎಂದು ಪ್ರಾಧಿಕಾರ ಹೇಳಿದಾಗಿನಿಂದ ದೂಡಾದ ನಾಲ್ಕು ಅಧ್ಯಕ್ಷರು ಬದಲಾವಣೆಗೆ ಆಗಿ ಹೋಗಿದ್ದಾರೆ. ಬಿಜೆಪಿ ಹೋಗಿ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಹೊಸ ಬಡಾವಣೆ ಅನುಮೋದನೆಯೇ ಸಿಕ್ಕಿಲ್ಲ. ಇನ್ನಾದ್ರು ಎಚ್ಚೆತ್ತು ಭೂಮಿ ಖರೀದಿ ಮಾಡಿ, ನಿವೇಶನ ಆಕಾಂಕ್ಷಿಗಳಿಗೆ ಸೈಟ್ ಹಂಚಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Tue, 5 March 24