ಒಂದೇ ಮದ್ವೆಯಲ್ಲಿ ಪಾಲ್ಗೊಂಡರೂ ಹಾಲಿ-ಮಾಜಿ ಸಿಎಂಗಳು ದೂರ ದೂರಾ! ಏಕೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣಳತೆಯಲ್ಲೇ ಇದ್ದರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅತ್ತ ತಿರುಗಿಯೂ ನೋಡಲಿಲ್ಲ. ಇದರೊಂದಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಜಗದೀಶ ಶೆಟ್ಟರ್ ನಡುವಣ ಮುನಿಸು ಜಾರಿಯಲ್ಲಿದೆ ಎಂಬಂತಾಗಿದೆ.
ದಾವಣಗೆರೆ: ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ (Jagadish Shettar) ಅವರು ಸಂಬಂಧಿಕರು. ಕರ್ನಾಟಕದ ಒಂದೇ ಭಾಗದವರು. ಹೀಗಿರುವಾಗ ಅನ್ಯೋನ್ಯತೆ ತುಸು ಹೆಚ್ಚೇ ಇರುತ್ತದೆ; ಆದರೆ ಇಲ್ಲಿ ತುಸು ಹೆಚ್ಚೇ ಅನಿಸುವಷ್ಟು ಈರ್ವರ ನಡುವೆ ಸಿಟ್ಟು ಸೆಡವು ಮನೆ ಮಾಡಿದೆ (animosity). ಬಹುಶಃ ಇದು ಬಸವರಾಜ ಬೊಮ್ಮಾಯಿ ಅವರು ನಾಡಿನ ಮುಖ್ಯಮಂತ್ರಿಯಾದ ಮೇಲೆ ತುಸು ಹೆಚ್ಚಾಗಿದೆ. ಹೀಗಿರುವಾಗ ಇಬ್ಬರೂ ಒಂದೇ ಮದ್ವೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಆ ಮದುವೆ ಸಮಾರಂಭವೂ ನಾಡಿನ ಪ್ರತಿಷ್ಠಿತ ರಾಜಕಾರಣಿಯ ಕುಟುಂಬದ್ದೇ. ಅದು ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ (Shamanur Shivashankarappa) ಮೊಮ್ಮಗಳ ಮದ್ವೆ ಸಮಾರಂಭ. ಇವರಿಬ್ಬರು ಸಹ ಶಾಮನೂರ ಶಿವಶಂಕರಪ್ಪ ಸಂಬಂಧಿಕರು ಎಂಬುದು ಇನ್ನೂ ಮಹತ್ವದ ವಿಚಾರ. ಏನೇ ಆದರೂ ಈ ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರೂ ದೂರ… ದೂರಾ ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣಳತೆಯಲ್ಲೇ ಇದ್ದರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅತ್ತ ತಿರುಗಿಯೂ ನೋಡಲಿಲ್ಲ. ಇದರೊಂದಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಜಗದೀಶ ಶೆಟ್ಟರ್ ನಡುವಣ ಮುನಿಸು ಜಾರಿಯಲ್ಲಿದೆ ಎಂಬಂತಾಗಿದೆ.
ದಾವಣಗೆರೆಯಲ್ಲಿ ನಡೆದ ಈ ಮದುವೆಯಲ್ಲಿ ಶೆಟ್ಟರ್ ಅವರಿಗಿಂತ ಮೊದಲು ಮದ್ವೆಗೆ ಬಂದವರು ಸಿಎಂ ಬೊಮ್ಮಾಯಿ. ಬಂದವರೆ… ವಧು- ವರರಿಗೆ ಶುಭ ಹಾರೈಸಿ ಕೆಳಗೆ ಬಂದು ನಿಂತುಬಿಟ್ಟರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸೊಸೆ ಮತ್ತು ಮಗನ ಸಹಿತ ವೇದಿಕೆಗೆ ಬಂದ ಮಾಜಿ ಸಿಎಂ ಶೆಟ್ಟರು ವಧು-ವರರಿಗೆ ಶುಭ ಹಾರೈಸಿ ಮೌನಕ್ಕೆ ಶರಣಾದರು. ಅಪ್ಪಿತಪ್ಪಿಯೂ ಅಲ್ಲಿಯೇ ಸಿಎಂ ಬೊಮ್ಮಾಯಿ ಇದ್ದರೂ ಮಾತಾಡುವ ಗೋಜಿಗೆ ಹೋಗಲಿಲ್ಲ ಶೆಟ್ಟರ್. ಇನ್ನು ಸಿಎಂ ಬೊಮ್ಮಾಯಿ ಸಾಹೇಬರೂ ಸಹ ಶೆಟ್ಟರ್ ಬಂದಿದ್ದು ನೋಡಿಯೂ ಸುಮ್ಮನಿದ್ದುಬಿಟ್ಟರು.
ಗಮನಾರ್ಹ ಸಂಗತಿಗಳೆಂದರೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಇದೇ ದಾವಣಗೆರೆಗೆ ಬಂದಿದ್ದಾಗ 2021 ಸೆಪ್ಟೆಂಬರ್ನಲ್ಲಿ ಬಿಜೆಪಿ ದೃಷ್ಟಿಯಿಂದ ಒಂದು ಮಹತ್ವದ ಘೋಷಣೆ ಮಾಡಿದ್ದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೆ ನಡೆಯಲಿದೆ ಎಂದಿದ್ದರು.
ಅದಕ್ಕೂ ಮುನ್ನ, ಬಸವರಾಜ ಬೊಮ್ಮಾಯಿ ಅವರು ಅನಾಯಾಸವಾಗಿ ಒದಗಿಬಂದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಬಳಿಕ ತಮ್ಮ ಊರಿನವರೇ ಆದ, ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕ್ಯಾಬಿನೆಟ್ ಮಿನಿಸ್ಟರ್ ಆಫರ್ ಕೊಟ್ಟರು. ಆದರೆ ‘ಇಲ್ಲಾ ನಾ ಸೀನಿಯರ್ ಅದೀನಿ’ ಎಂದು ಜಗದೀಶ್ ಶೆಟ್ಟರ್ಆ ಹ್ವಾನವನ್ನು ತಿರಸ್ಕರಿಸಿದ್ದರು.
ಇನ್ನು ಇಂದು 92ನೇ ವಸಂತಕ್ಕೆ ಕಾಲಿಟ್ಟ ಹಿರಿಯ ರಾಜಕಾರಣಿ, ಉದ್ಯಮಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಸಿಹಿ ತಿನಿಸುವ ಮೂಲಕ ಅವರಿಗೆ ಸಿಎಂ ಬೊಮ್ಮಾಯಿ ಜನ್ಮದಿನದ ಶುಭಾಶಯ ಕೋರಿದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Thu, 16 June 22