ಚುನಾವಣೆ ವೇಳೆ ಪಕ್ಷದ ವಿಪ್ ಉಲ್ಲಂಘನೆ; ಹು-ಧಾ ಪಾಲಿಕೆ BJP ಸದಸ್ಯೆ ಸರಸ್ವತಿ ದೋಂಗಡಿ ಸದಸ್ಯತ್ವ ರದ್ದು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಬಿಜೆಪಿ ಸದಸ್ಯೆ ಸರಸ್ವತಿ ದೋಂಗಡಿ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ದೂರು ಸಂಬಂಧ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಅವರು ಸರಸ್ವತಿ ಅವರ ಸದಸ್ಯತ್ವವನ್ನು ರುದ್ದಗೊಳಿಸಿ ಆದೇಶಿಸಿದ್ದಾರೆ.
ಹುಬ್ಬಳ್ಳಿ, ಫೆ.11: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ (Hubli Dharwad Municipal Corporation) ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಬಿಜೆಪಿ (BJP) ಸದಸ್ಯೆ ಸರಸ್ವತಿ ದೋಂಗಡಿ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ನೀಡಿದ ದೂರಿನ ಅನ್ವಯ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಅವರು ಸರಸ್ವತಿ ಅವರ ಸದಸ್ಯತ್ವವನ್ನು ರುದ್ದಗೊಳಿಸಿ ಆದೇಶಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಹಿನ್ನೆಲೆ ಪಕ್ಷದ ಸದಸ್ಯರು ಗೈರಾಗಬಾರದು ಎಂದು ಬಿಜೆಪಿ ವಿಪ್ ಜಾರಿಗೊಳಿಸಿತ್ತು. ಆದರೆ, ಪಾಲಿಕೆ 54ನೇ ವಾರಡ್ನ ಬಿಜೆಪಿ ಸದಸ್ಯೆ ಸರಸ್ವತಿ ದೋಂಗಡಿ ಅವರು ಮೇಯರ್ ಚುನಾವಣೆಯ ಮತದಾನಕ್ಕೆ ಗೈರಾಗಿದ್ದರು.
ಇದನ್ನೂ ಓದಿ: ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಸಂದಾಯವಾದ ಮೊತ್ತ ಬರೋಬ್ಬರಿ 1,300 ಕೋಟಿ ರೂ.
ಪಕ್ಷದ ವಿಪ್ ಉಲ್ಲಂಘಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ಇದರ ಅನ್ವಯ ವಿಚಾರಣೆ ನಡೆಸಿದ ಎಸ್ಬಿ ಶೆಟ್ಟಣ್ಣವರ ಅವರು, ಪಾಲಿಕೆ ಸದಸ್ಯತ್ವದಿಂದ ಸರಸ್ವತಿ ದೋಂಗಡಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ