‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳುತ್ತಿರುವ ಸರ್ಕಾರಕ್ಕೆ ನಾವೂ ಉತ್ತರ ನೀಡಬೇಕಿದೆ’

ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳೋ ಸರ್ಕಾರ ಬಂದಾಗ ನಾವೂ ಅದಕ್ಕೆ ಉತ್ತರ ನೀಡಬೇಕಿದೆ. ಅವರಿಗೆ ನಮ್ಮದು ಕನ್ನಡ ದೇಶ, ಕನ್ನಡ ಧರ್ಮ, ಕನ್ನಡ ಭಾಷೆ ಅಂತಾ ಹೇಳಬೇಕಾಗುತ್ತದೆ. RTIದಲ್ಲಿ ಕೇಳಿದರೂ ಉತ್ತರ ಕೊಡಲ್ಲ. ದೇಶದಲ್ಲಿ ಒಂದೇ ಭಾಷೆ ಇರೋದು ಅನ್ನೋ ಹಂತಕ್ಕೆ ಬಂದಿದ್ದಾರೆ ಎಂದು ಬಿ.ಸುರೇಶ್​ ವಿಷಾದ ವ್ಯಕ್ತಪಡಿಸಿದರು.

  • TV9 Web Team
  • Published On - 17:13 PM, 20 Mar 2021
‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳುತ್ತಿರುವ ಸರ್ಕಾರಕ್ಕೆ ನಾವೂ ಉತ್ತರ ನೀಡಬೇಕಿದೆ’
ಬಿ.ಸುರೇಶ್

ಧಾರವಾಡ: ಕರ್ನಾಟಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಇರಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಇರುವುದಿಲ್ಲ. ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಹಿಂದಿ ಇರುತ್ತೆ ಎಂದು ಕನ್ನಡ ಮಾಯವಾಗ್ತಿರುವ ವಿಚಾರವಾಗಿ ಹಿರಿಯ ನಟ ಬಿ.ಸುರೇಶ್ ಹೇಳಿದ್ದಾರೆ. ನಗರದ ಕನಕ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬಿ.ಸುರೇಶ್ ಮಾತನಾಡಿದ್ದಾರೆ.

ಇದರ ಬಗ್ಗೆ ಪ್ರಶ್ನೆಯನ್ನ ಕೇಳಿದರೆ ಉತ್ತರವನ್ನೇ ಕೊಡೋದಿಲ್ಲ. ಅದೇ ಒಂದು ವೇಳೆ, ಕಾರ್ಯಕ್ರಮ‌ ತಮಿಳನಾಡಿನಲ್ಲಾದರೆ ತಮಿಳು ಇರುತ್ತೆ. ಕನ್ನಡ ಇಲ್ಲದ ಕಾರ್ಯಕ್ರಮಕ್ಕೆ ಬೆಂಬಲ ಇಲ್ಲ ಅನ್ನುವುದಿಲ್ಲ. ಬೆಂಬಲ ಇಲ್ಲ ಎಂದು ನಮ್ಮ ಜನಪ್ರತಿನಿಧಿಗಳೂ ಹೇಳಲ್ಲ. ಅವರು ಹಾಗೆ ಹೇಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ನುಡಿ ಸಡಗರದಲ್ಲಿ ಹಿರಿಯ ನಟ ಬಿ.ಸುರೇಶ್ ಕಿಡಿಕಾರಿದರು.

ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳೋ ಸರ್ಕಾರ ಬಂದಾಗ ನಾವೂ ಅದಕ್ಕೆ ಉತ್ತರ ನೀಡಬೇಕಿದೆ. ಅವರಿಗೆ ನಮ್ಮದು ಕನ್ನಡ ದೇಶ, ಕನ್ನಡ ಧರ್ಮ, ಕನ್ನಡ ಭಾಷೆ ಅಂತಾ ಹೇಳಬೇಕಾಗುತ್ತದೆ. RTIದಲ್ಲಿ ಕೇಳಿದರೂ ಉತ್ತರ ಕೊಡಲ್ಲ. ದೇಶದಲ್ಲಿ ಒಂದೇ ಭಾಷೆ ಇರೋದು ಅನ್ನೋ ಹಂತಕ್ಕೆ ಬಂದಿದ್ದಾರೆ ಎಂದು ಬಿ.ಸುರೇಶ್​ ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅವರು ವಿರೋಧ ಪಕ್ಷದ ಸಾಲಲ್ಲಿ ಕೂತ್ಕೋತಾರೆ -ಬಿ.ವೈ.ವಿಜಯೇಂದ್ರ