Binkada Katti Zoo: ಸಂಕ್ರಾಂತಿ ಸಡಗರದಲ್ಲಿ ಮುದ್ರಣ ಕಾಶಿ: ಹುಲಿ, ಸಿಂಹ, ಚಿರತೆಗಳೊಂದಿಗೆ ವಿಶೇಷವಾಗಿ ಹಬ್ಬ ಆಚರಿಸಿದ ಪ್ರವಾಸಿಗರು
ಸಂಕ್ರಮಣ ಬಂತೆದ್ರೆ ಸಾಕು ಮುದ್ರಣ ಕಾಶಿ ಗದಗನಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ. ಕಾರಣ ಕುಟುಂಬ ಸಮೇತರಾಗಿ ಗದಗ ಜನ ಉತ್ತರದ ಏಕೈಕ ಬಿಂಕದಕಟ್ಟಿ ಮೃಗಾಲಯ ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.
ಗದಗ: ಇಂದು(ಜ. 15) ಶುಭ ಸಂಕ್ರಮಣ (Sankranti) ಘಳಿಗೆ. ನಾಡಿನಾದ್ಯಂತ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಗದಗನಲ್ಲಿ ಮಾತ್ರ ಸಂಕ್ರಾಂತಿ ಹಬ್ಬವನ್ನು ಇನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಹಬ್ಬದ ಈ ಸಂಭ್ರಮದ ಘಳಿಗೆಯಲ್ಲಿ ಕಾಡು ಪ್ರಾಣಿಗಳ ಜೊತೆ ಜನರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಕುಟುಂಬ ಸಮೇತ ಮಕ್ಕಳೊಂದಿಗೆ ಆಗಮಿಸಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಮನೆಯಿಂದ ತಂದ ತರೆಹೆವಾರಿ ಅಡುಗೆ ಊಟ ಮಾಡಿ, ಪ್ರಾಣಿಗಳು ನೋಡಿ, ಆಟ ಆಡಿ ಸಂಕ್ರಾಂತಿ ಹಬ್ಬ ಎಂಜಾಯ್ ಮಾಡಿದ್ರು.
ಸಂಕ್ರಮಣ ಬಂತೆದ್ರೆ ಸಾಕು ಮುದ್ರಣ ಕಾಶಿ ಗದಗನಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ. ಮಕ್ಕಳ ಸಂತಸಕ್ಕೆ ಪಾರವೇ ಇರೋದಿಲ್ಲ. ಕಾರಣ ಕುಟುಂಬ ಸಮೇತರಾಗಿ ಗದಗ ಜನ ಉತ್ತರದ ಏಕೈಕ ಬಿಂಕದಕಟ್ಟಿ ಮೃಗಾಲಯ (Binkadakatti Zoo) ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಈ ಹಿಂದೆ ಪ್ರಾಣಿ ಸಂಗ್ರಹಾಲಯ ಪ್ರಾಣಿಗಳೇ ಇಲ್ಲದೇ ಕಳೆಗುಂದಿ ಹೋಗಿತ್ತು. ಆದರೆ ಈಗ ಈ ಮೃಗಾಲಯ ಪ್ರಾಣಿಗಳಿಂದ ತುಂಬಿದೆ. ಉತ್ತರ ಕರ್ನಾಟಕದಲ್ಲಿ ಕಾಡು ಅಪರೂಪವಾಗಿದ್ದು, ಹೀಗಾಗಿ ಈ ಭಾಗದ ಜನ್ರಿಗೆ ಸಿಂಹ, ಹುಲಿ, ಚಿರತೆಗಳ ಸೇರಿದಂತೆ ಹಲವಾರು ಪ್ರಾಣಿಗಳು ನೋಡೋದು ಅಂದ್ರೆ ಕೂತೂಹಲ.
ಇದನ್ನೂ ಓದಿ: ಅಂಗಮಾರಿ ರೋಗಕ್ಕೆ ಬೇಸತ್ತ ದಾಳಿಂಬೆ ಬೆಳೆಗಾರರು: ಬೇರೆ ಬೆಳೆಯತ್ತ ವಾಲಿದ ರೈತರು; ಗದಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ಇಳಿಮುಖ
ನಾಲ್ಕು ಸಿಂಹಗಳ ಘರ್ಜನೆ ಈ ವರ್ಷದ ಸಂಕ್ರಾಂತಿ ವಿಶೇಷ
ಈ ವರ್ಷದ ಸಂಕ್ರಾಂತಿಗೆ ಕಾಡಿನ ರಾಜನ ಎಂಟ್ರಿಯಾಗಿದೆ. ನಾಲ್ಕು ಸಿಂಹಗಳ ಘರ್ಜನೆ ಈ ವರ್ಷದ ಸಂಕ್ರಾಂತಿ ವಿಶೇಷ. ಸದಾ ಜನಗಳಿಲ್ಲದೇ ಭಣಗುಡುತ್ತಿದ್ದ ಪ್ರಾಣಿ ಸಂಗ್ರಹಾಲಯ ಇವತ್ತು ಮಾತ್ರ ಜನ್ರಿಂದ ತುಂಬಿ ತುಳುಕುತ್ತಿತ್ತು. ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬಾಗಲಕೋಟೆ, ಗದಗ-ಬೆಟಗೇರಿ ಸೇರಿದಂತೆ ವಿವಿಧ ನಗರ, ಗ್ರಾಮಗಳ ಜನ್ರು ಕುಟುಂಬ ಸಮೇತರಾಗಿ ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯಕ್ಕೆ ಲಗ್ಗೆ ಇಟ್ಟಿದ್ರು. ಇದಕ್ಕೆ ಕಾರಣ ಅಂದ್ರೆ ಸಿಂಹ, ಹುಲಿಗಳ ಘರ್ಜನೆ. ಇವತ್ತಿನ ದಿನ ಸಿಂಹ, ಹುಲಿಗಳ, ಚಿರತೆಗಳನ್ನು ನೋಡೋಕೆ ಮುಕ್ತ ಅವಕಾಶ ನೀಡಲಾಗಿತ್ತು. ಹೀಗಾಗಿ ಮಕ್ಕಳು, ಯುವಕರು, ಯುವತಿಯ ಸೇರಿದಂತೆ ಸಾವಿರಾರು ಜನ್ರು ಸಿಂಹಗಳು, ಹುಲಿ, ಚಿರತೆ ಹಾಗೂ ಕರಡಿಗಳನ್ನು ನೋಡಿ ಸಖತ್ ಎಂಜಾಯ್ ಮಾಡಿದರು.
ಬಿಂಕದಕಟ್ಟಿ ಮೃಗಾಲಯಕ್ಕೆ ಭೇಟಿ ನೀಡಿದ ಸಹಸ್ರಾರು ಜನ
ಪ್ರಾಣಿ ಸಂಗ್ರಹಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ್ರು ಹರಿದು ಬಂದಿದೆ. ಎಲ್ಲ ಪ್ರಾಣಿಗಳು ನೋಡಿದ ಬಳಿಕ ಮಕ್ಕಳು ಜೋಕಾಲಿ ಸೀಸಾ, ಜಾರಗುಂಡಿ ಸೇರಿ ವಿವಿಧ ಆಟಗಳು ಆಡಿ ಸಖತ್ ಎಂಜಾಯ್ ಮಾಡಿದ್ರು. ಪ್ರಾಣಿಗಳು ನೋಡಿ, ಆಟ ಆಡಿ ಮಸ್ತ್ ಊಟ ಮಾಡಿ ಸಂಕ್ರಾಂತಿ ಹಬ್ಬದ ಎಂಜಾಯ್ ಮಾಡಿದ್ರು. ಸಿಂಹ, ಹುಲಿಗಳ ಘರ್ಜನೆ ಮೂಲಕ ಪ್ರಾಣಿ ಪ್ರೀಯರ ರಂಜಿಸಿದ್ರೆ. ಕಲರ್ ಕಲರ್ ಪಕ್ಷಿಗಳು ಇಂಪಾದ ಧ್ವನಿಗಳ ಮೂಲಕ ಪ್ರಾಣಿ ಪ್ರೀಯರ ಮನ ತಣಿಸಿದೆ.
ಅರಣ್ಯ ಇಲಾಖೆ ಪ್ರಾಣಿ ಸಂಗ್ರಹಾಲಯವನ್ನು ಸಾಕಷ್ಟು ಅಭಿವೃದ್ಧಿ ಮಾಡಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದಕ್ಕೂ ಒಂದು ಕಾರಣವಾಗಿದೆ. ವೀಕೆಂಡ್ ಹಾಗೂ ಸಂಕ್ರಾಂತಿ ರಜೆ ಹೊಸ ಅತಿಥಿಗಳು ನೋಡಿ ಜನ ಫುಲ್ ಎಂಜಾಯ್ ಮಾಡಿದ್ರು. ನೀವು ನಿಮ್ಮ ಮನಸ್ಸು ಹಗುರ ಮಾಡಿಕೊಳ್ಳಬೇಕಾ ಹಾಗಾದ್ರೆ ಎಲ್ಲ ಟೆನ್ಷನ್ ಬಿಟ್ಟು ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯಕ್ಕೆ ಬನ್ನಿ ಎಂಜಾಯ್ ಮಾಡಬಹುದು.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:49 pm, Sun, 15 January 23