ಆಯುಷ್ಮಾನ್ ಭಾರತ ಯೋಜನೆ ಹಣ ದುರುಪಯೋಗ ಪ್ರಕರಣ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ
ನಿನ್ನೆ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಡಿಸಿ ತರಾಟೆಗೆ ತೆಗೆದುಕೊಂಡಿದ್ದು, ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆಸ್ಪತ್ರೆಗಳಿಂದ ದಾಖಲೆ ಸಮೇತ ಲೆಕ್ಕಪತ್ರ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಗದಗ: ಆಯುಷ್ಮಾನ್ ಭಾರತ ಯೋಜನೆ ಹಣ ದುರುಪಯೋಗ ಪ್ರಕರಣ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ತನಿಖೆಗೆ ಡಿಸಿ ಸೂಚನೆ ನೀಡಲಾಗಿದೆ. ಟಿವಿ 9 ವರದಿ ಬಳಿಕ ಆರೋಗ್ಯ ಇಲಾಖೆಗೆ ಡಿಸಿ ಖಡಕ್ ಸೂಚನೆ ನೀಡಿದ್ದಾರೆ. ಜಿಲ್ಲೆಯ ಮುಂಡರಗಿ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ ಬಗ್ಗೆ ಟಿರ್ವಿ ವಿಸ್ತೃತ ವರದಿ ಮಾಡಿತ್ತು. ಮೂರ್ನಾಲ್ಕು ದಿನವಾದರು ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಡಿಸಿ ಗರಂ ಆಗಿದ್ದಾರೆ. ನಿನ್ನೆ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಡಿಸಿ ತರಾಟೆಗೆ ತೆಗೆದುಕೊಂಡಿದ್ದು, ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆಸ್ಪತ್ರೆಗಳಿಂದ ದಾಖಲೆ ಸಮೇತ ಲೆಕ್ಕಪತ್ರ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಸಿಬ್ಬಂದಿಯೊಬ್ಬರ ಹೆಸರಿನಲ್ಲಿ ಹಣ ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದು, ಲೆಕ್ಕಪತ್ರ ಪರಿಶೀಲನೆ ವೇಳೆ ಬಯಲು ಆಗಿತ್ತು. ಡಿಸಿ ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲ ತಾಲೂಕಾ ಆಸ್ಪತ್ರೆಗಳಿಗೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರಿಗೆ ಪತ್ರ ಬರೆಯಲಾಗಿದೆ.
ಸಾಕ್ಷಿ ಸಮೇತ ಅಕ್ರಮ ಬಯಲಾದ್ರು ಪರಿಶೀಲನೆ ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು
ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ ಕರ್ನಾಟಕ ಯೋಜನೆಯಲ್ಲಿ ಹಣ ದುರುಪಯೋಗ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಟಿವಿ9 ನಲ್ಲಿ ವರದಿ ಪ್ರಸಾರದ ಬಳಿಕ ಗದಗ ಡಿಎಚ್ಓ ನೇತೃತ್ವದ ತಂಡ ಮುಂಡರಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಲೆಕ್ಕಪತ್ರ ಪರಿಶೀಲನೆ ವೇಳೆ ಹಣ ದುರುಪಯೋಗವಾಗಿರುವುದು ಸಾಕ್ಷಿ ಸಮೇತ ಬಯಲಾಗಿತ್ತು. ಸಿಬ್ಬಂದಿಯೊಬ್ಬರ ವೈಯಕ್ತಿಕ ಹೆಸರಿನಲ್ಲಿ ಪದೇ ಪದೇ ಹಣ ಡ್ರಾ ಮಾಡಿಕೊಂಡಿದ್ದು ಪತ್ತೆಯಾಗಿತ್ತು.
ಇದನ್ನೂ ಓದಿ: ನೂತನ EV ಉತ್ಪಾದನಾ ಘಟಕ ಉದ್ಘಾಟಿಸಿದ ಬಜಾಜ್ ಆಟೋ, 11 ಸಾವಿರ ಉದ್ಯೋಗ ಸೃಷ್ಟಿ
ದುರುಪಯೋಗ ಕಂಡು ಬಂದ್ರೂ ಪೂರ್ಣ ಪರಿಶೀಲನೆ ಮಾಡದೇ ಪರಿಶೀಲನೆ ಅರ್ಧಕ್ಕೆ ಕೈಬಿಟ್ಟು ಅಧಿಕಾರಿಗಳು ಎಸ್ಕೇಪ್ ಆಗಿದ್ದರು. ಸಿಬ್ಬಂದಿಯೊಬ್ಬನ ವೈಯಕ್ತಿಕ ಹೆಸರಿನಲ್ಲಿ ಹಣ ಡ್ರಾ ಮಾಡಿಕೊಂಡ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೇ ಡಿಎಚ್ಓ ನೇತೃತ್ವದ ತಂಡ ನಿರ್ಲಕ್ಷ್ಯ ತೋರಿದೆ ಅಂತ ಮುಂಡರಗಿ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಡಿಎಚ್ಓ ಡಾ ಜಗದೀಶ್ ನುಚ್ಚಿನ್, ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ನಡೆ ಬಗ್ಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಎ ಎಚ್ ತಾಂಬೊಟ್ಟಿ ಹೆಸರಿನಲ್ಲಿ 21 ಸಾವಿರ, 6 ಸಾವಿರ ಹೀಗೆ ಪದೇ ಪದೇ ಆಯುಷ್ಮಾನ್ ಭಾತರ ಯೋಜನೆ ಅಕೌಂಟ್ ನಿಂದ ಹಣ ಡ್ರಾ ಮಾಡಿದ್ದು ಬ್ಯಾಲೆನ್ಸ್ ಶೀಟ್ನಲ್ಲಿ ಪತ್ತೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.