AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ, ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ: ಶಿಕ್ಷಣ ಸಚಿವ

2023-2024ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ, ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವರು ಎಂದೂ ಉದ್ಧಾರಾಗಲ್ಲ ಎಂದು ಹೇಳಿದರು.

ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ, ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ: ಶಿಕ್ಷಣ ಸಚಿವ
ಶಿಕ್ಷಣ ಸಚಿವ ಮಧು ಬಂಗಾರಪ್ಪ
Basavaraj Yaraganavi
| Edited By: |

Updated on:May 11, 2024 | 3:24 PM

Share

ಶಿವಮೊಗ್ಗ, ಮೇ 11: 2023-2024ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಾನು ಓದುವುದರಲ್ಲಿ ಅಷ್ಟು ಬುದ್ದಿವಂತನಾಗಿರಲಿಲ್ಲ. ನಾನು ಸಹ ಫೇಲ್ ಆಗಿದ್ದೇನೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವವರು ಎಂದೂ ಉದ್ಧಾರಾಗಲ್ಲ ಎಂದು ಶಾಪ ಹಾಕಿದರು.

ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ‌‌‌ (Ankita Konnuru) 625ಕ್ಕೆ 625 ಅಂಕ ಪಡೆಯುವ ಮುಖಾಂತರ ಸಾಧನೆ ಮಾಡಿದ್ದಾರೆ. ನಮ್ಮ ಇಲಾಖೆವತಿಯಿಂದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ. ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದ್ದೇವೆ. ಪಠ್ಯ ಪುಸ್ತಕ ಬದಲಾವಣೆ, ಶಿಕ್ಷಕರ ನೇಮಕ ಹೀಗೆ ಅನೇಕ ಬದಲಾವಣೆ ತಂದಿದ್ದೇವೆ. ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕ‌ ಮಾಡುತ್ತೇವೆ ಎಂದು ತಿಳಿಸಿದರು.

ಈ ವರ್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತ

ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ನಾವು ಅನೇಕ ಕ್ರಮ ಕೈಗೊಂಡಿದ್ದೇವೆ. ಕೊರೊನಾ ಸಮಯದ ವಿದ್ಯಾರ್ಥಿಗಳು ಈಗ ಎಸ್ಎಸ್ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಶೇ 20 ರಷ್ಟು ಕೃಪಾಂಕ ಅಂಕ ಕೊಟ್ಟಿದ್ದೇವೆ. ಈ ವರ್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತವಾಗಿರುತ್ತದೆ. ನಮ್ಮ ಶಿಕ್ಷಣ ಇಲಾಖೆ ಈಗಾಗಲೆ ತರಗತಿ ಪ್ರಾರಂಭಕ್ಕೆ ಸಿದ್ದತೆ ಮಾಡಿಕೊಂಡಿದೆ. ಜಸ್ಟ್ ಪಾಸ್ ಆದ ಮಕ್ಕಳು ಮತ್ತೆ ಪರೀಕ್ಷೆ ಬರೆದು ಅಂಕ ಹೆಚ್ಚಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಸ್ಪೇಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ ಎಂದರು.

ನಮ್ಮ ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದೆ. ಫೇಲ್ ಆಗಿರುವ ಮಕ್ಕಳು ಮತ್ತೆ ಪರೀಕ್ಷೆ ಬರೆದು ಪಾಸ್​ ಆಗಿ. ನಮ್ಮ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. 3 ಸಾವಿರ ಕೆಪಿಎಸ್​​ಸಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಎಸ್ಇಪಿ ಜಾರಿಗೆ ನಾವು ತಯಾರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿಯಲ್ಲಿ ಬಾಗಲಕೋಟೆಯ ರೈತನ ಮಗಳು ರಾಜ್ಯಕ್ಕೆ ಪ್ರಥಮ: ರ‍್ಯಾಂಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅಂಕಿತಾ

ನನ್ನ ಶಿಕ್ಷಣದ ಬಗ್ಗೆ ಚುನಾವಣೆ ಸಮಯದಲ್ಲಿ ಚೆರ್ಚೆ ನಡೆಯಿತು. ನಾನೂ ಸಹ ಫೇಲ್​ ಆಗಿದ್ದೇನೆ. ಶಿಕ್ಷಕರ ಸಹಕಾರ, ಪೋಷಕರ ಸಹಕಾರದಿಂದ ನಿಮ್ಮ ಮುಂದೆ ಬಂದಿದ್ದೇನೆ ಎಂದರು.

ಅಣ್ಣಾಮಲೈ ಒಬ್ಬ ಅಯೋಗ್ಯ. ನಮ್ಮ ರಾಜ್ಯದಿಂದ ನಿವೃತ್ತಿ ಸಂಬಳ ತಗೆದುಕೊಂಡು ಇಲ್ಲಿ ಬಂದು ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ನನ್ನ ಬಗ್ಗೆ ಅಣ್ಣಾಮಲೈ ಬಂದು ಮಾತಾಡುತ್ತಾರೆ. ನಮ್ಮ ಇಲಾಖೆಯಲ್ಲಿ ತುಂಬಾ ನ್ಯೂನತೆ ಇದೆ. ನಾವು ಎಲ್ಲವನ್ನೂ ಸಹ ಸರಿ ಮಾಡಿಕೊಳ್ಳುತ್ತೇವೆ. ಸರ್ಕಾರಿ ಶಾಲೆಯ ಶಿಕ್ಷಕರ ಪ್ರತಿಭೆಯನ್ನು ನಾವು ಬಳಸಿಕೊಳ್ಳಬೇಕಿದೆ. ಹಳೆ ಸರ್ಕಾರದ ಶಿಕ್ಷಣ ಇಲಾಖೆ 500 ಕೋಟಿ ಸಾಲ ನಾವು ತೀರಿಸುತ್ತಿದ್ದೇವೆ ಎಂದು ತಿಳಸಿದರು.

ಕೊಡಗು ವಿದ್ಯಾರ್ಥಿನಿ ಕೊಲೆ ಪ್ರಕರಣ ಕಾನೂನು ಕ್ರಮ ಕೈಗೊಳ್ಳಲಿದೆ. ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಮಾಡುತ್ತೇವೆ. ಸರ್ಕಾರಿ ಶಾಲೆಗೆ ಮಕ್ಕಳು ಬರಬೇಕು. ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Sat, 11 May 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ