ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ: ಮಾಜಿ ಸಿಎಂ ಗಂಭೀರ ಆರೋಪ
ಜಿಂದಾಲ್ ಸಂಸ್ಥೆಗೆ ಸರ್ಕಾರದಿಂದ 3,667.31 ಎಕರೆ ಜಮೀನು ಮಾರಾಟ ಮಾಡಲು ನಿರ್ಧರಿಸಿದೆ. ಸದ್ಯ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆರೋಪ-ಪ್ರತ್ಯಾರೋಪಗಳು ಮಾಡಲಾಗುತ್ತಿದೆ. ಇದೀಗ ದಾವಣಗೆರೆಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆ, ಆಗಸ್ಟ್ 23: ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆಯ ಹರಿಹರದಲ್ಲಿ ಜಿಂದಾಲ್ ಸಂಸ್ಥೆಗೆ ಸರ್ಕಾರದಿಂದ ಜಮೀನು ಕೊಡುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀನನ್ನ ಹಳೇ ದರಕ್ಕೆ ನೀಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಹೇಳಿದಂತೆ ಸಚಿವ ಸಂಪುಟ ಒಪ್ಪಿಕೊಂಡಿದೆ. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಂಪುಟಕ್ಕೆ ಬಂದು ವಾಪಸ್ ಹೋಗಿದೆ. ಆಗ ಕಾಂಗ್ರೆಸ್ ಪಕ್ಷದವರೇ ತೀವ್ರವಾಗಿ ವಿರೋಧ ಮಾಡಿದ್ದರು. ಕಾಂಗ್ರೆಸ್ನವರು ಹಾಡೋದು ಒಂದು ಮಾಡೋದು ಒಂದು. ಕಾಂಗ್ರೆಸ್ನವರು ಬಂಡವಾಳಶಾಹಿ ಪರವಾಗಿರುವವರು. ಬೆಲೆ ಬಾಳುವ ಜಮೀನನ್ನು ಇಂದಿನ ದರಕ್ಕೆ ಮಾರಾಟ ಮಾಡದೇ ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಮಾರುಕಟ್ಟೆ ಬೆಲೆಯ ದರವನ್ನು ನಿಗದಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಅವ್ಯವಹಾರ ನಡೆದಿದೆ ಎಂದು ಸಂಶಯ ಬರುತ್ತೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್, ಯಾರು ಏನು ಹೇಳಿದ್ರು? ಇಲ್ಲಿದೆ ವಿವರ
ವಾಲ್ಮೀಕಿ ಹಗರಣದಲ್ಲಿ ದೋಷಾರೋಪಣ ಪಟ್ಟಿಯಲ್ಲಿ ಪ್ರಮುಖ ಹೆಸರನ್ನು ಕೈಬಿಡಲಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಮಗೆ ಗೊತ್ತಿತ್ತು ಎಸ್ಐಟಿ ಮಾಡಿರುವುದು ಪ್ರಕರಣ ಮುಚ್ಚಿ ಹಾಕಲು. ಸಾಕ್ಷ್ಯ ಇದ್ದಾಗಲೂ ಎಸ್ಐಟಿ ಪ್ರಮುಖ ಆರೋಪಿಗಳನ್ನು ಬಿಟ್ಟಿದೆ ಅಂದರೆ ದೋಷರೋಪಣ ಪಟ್ಟಿ ಸತ್ಯದಿಂದ ಕೂಡಿಲ್ಲ. ಸಮಾನಾಂತರವಾಗಿ ಇಡಿ ತನಿಖೆ ನಡೆಸುತ್ತಿದೆ. ಇಡಿ ದೋಷರೋಪಣ ಪಟ್ಟಿಯಲ್ಲಿ ತಪ್ಪಿತಸ್ಥರು ಬರಲಿದ್ದಾರೆ ಎಂದಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಲೆ ದಂಡ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾನೂನು ಪ್ರಕ್ರಿಯೆ ನಡೆದಿದೆ ಕಾದು ನೋಡಬೇಕು ಎಂದರು. ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ್ದು, ಯಾವುದೇ ಸಿದ್ದತೆ, ಹಣಕಾಸಿನ ವ್ಯವಸ್ಥೆ ಇಲ್ಲದೆ ರಾಜಕೀಯ ಲಾಭಕ್ಕೆ ಮಾಡಿದ ಯೋಜನೆ ಇವು. ಅದರ ಹಿಂದೆ ಪ್ರಾಮಾಣಿಕತೆ ಇದಿದ್ದರೆ ಹೀಗೆ ಆಗುತ್ತಿರಲಿಲ್ಲ. ಎಲ್ಲರ ಮತ ಪಡೆಯಲು ಎಲ್ಲರಿಗೂ ಕೊಡುತ್ತೇವೆ ಅಂದ್ರು. ಈಗ ಅವರ ಬೊಕ್ಕಸಕ್ಕೆ ಹೊರೆ ಆಗುತ್ತಿದೆ ಹೀಗೆ ಅಂತಾರೆ ಎಂದರು.
ಇದನ್ನೂ ಓದಿ: ಕೆಐಎಡಿಬಿ ನಿವೇಶನ ಅಕ್ರಮ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್
ಗ್ಯಾರಂಟಿ ಯೋಜನೆಯನ್ನ ಸಿಎಂ ಹಿಂದೆ ತೆಗುಕೊಳ್ಳಲ್ಲ ಯಾವುದೆ ಬದಲಾವಣೆ ಇಲ್ಲ ಅಂತಾರೆ. ಇವರು ಒಳಗಡೆಯಿಂದ ಬಿಪಿಎಲ್ ಕಾರ್ಡು ಕೊಡಬೇಕು ಅಂತಾ ಇದ್ದಾರಂತೆ. ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದ ಅಕೌಂಟ್ಗೆ ಹಣ ಬರುತ್ತಿಲ್ಲ. ಸಂಪೂರ್ಣ ರಾಜ್ಯದ ಬೊಕ್ಕಸಕ್ಕೆ ಖಾಲಿ ಆಗಿರುವುದು ಕಾಣುತ್ತೆ. ಸಿಎಂ ಹೇಳ್ತಾರೆ ಎಲ್ಲಾ ಚನ್ನಾಗಿದೆ ಅಂತ ಹಾಗಿದ್ದರೆ ಯಾಕೆ ಹಣ ಬರುತ್ತಿಲ್ಲ. ರಾಜ್ಯದ ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.